ಪೋಸ್ಟ್‌ಗಳು

ನನ್ನ ಊರು ಹಳ್ಳಿ..

ಇಮೇಜ್
ವಿಜಯಯಾನಕ್ಕೆ ಪ್ರಥಮ ಬಾರಿಗೆ ಬರೆಯುತ್ತಿರುವ 'ಮೌನೇಶ್ವರಿ' ಹುಟ್ಟಿದ್ದು ಸೇಡಂ ತಾಲೂಕಿನ ಪುಟ್ಟ ಗ್ರಾಮವಾದ ಊಡಗಿಯಲ್ಲಿ. ಓದಿದ್ದು ಬಿ.ಎ. ಪತ್ರಿಕೋದ್ಯಮ.  ನನ್ನ ಊರು ಹಳ್ಳಿ......ಹಳ್ಳಿಲಿ ಹುಟ್ಟಬೇಕೆಂದ್ರೆ ಪುಣ್ಯ ಮಾಡಿರಬೇಕು ಅಲ್ಲಿನ ಪರಿಸರ ಅಲ್ಲಿನ ಗಾಳಿ ಅಬ್ಬಾ ಒಂದಾ ಎರಡಾ ಅಲ್ಲಿ ಸಿಗೋ ಸುಖ ಮತ್ತೇ ಅಲ್ಲಿನ fresh ತರಕಾರಿ, ಹಣ್ಣು ,ಹೂ,ಅಲ್ಲಿ ಇರೋ ಪ್ರಾಣಿಗಳು, ಪಕ್ಷಿಗಳು,ಅಲ್ಲಿನ ಸಂಭಂಧಗಳು ,ನನಗೆ ಹಳ್ಳಿ ಒಂದು ಸುಂದರ ಅನುಭವ ಕೊಡುತ್ತೇ ಬೆಳ್ಳಿಗ್ಗೆ ಬೆಳ್ಳಿಗ್ಗೆ walk ಹೊಗೋದೆ ಒಂದ ಮಜಾ ಕಣ್ರಿ ಶ್ರಾವಣ ತಿಂಗಳಲ್ಲಿ ಮಾಳಿಗೆ ಮನೇಲಿ ಕೂತು ಮಳೆ ನೋಡೋದೆ ಒಂದ್ ಭಾಗ್ಯ ಆ ಅವಿಭಕ್ತ  ಕುಟುಂಬದಲ್ಲಿ ಕಲಿಸಿಕೊಡೋ ಪಾಠ ಯಾವ ಶಾಲೆನು ಕಲಿಸಿಕೊಡಲ್ಲ .ಅಜ್ಜ ಅಜ್ಜಿ ,ದೊಡ್ಡಪ್ಪ ದೊಡ್ಡಮ್ಮ,,ಚಿಕ್ಕಮ್ಮ ಚಿಕ್ಕಪ್ಪ ,ಮಾವ ಅತ್ತಿಗೆ ಇವರ ಸಂಭಂಧಗಳು ಮುಂದಿನ ಪೀಳಿಗೆಗೆ ಜೀವನ ಪಾಠ ಕಲಿಸುತ್ತೆ . ರಾತ್ರಿ‌ ಸಮಯದಲ್ಲಿ ಎಲ್ಲಾರು ಸೇರಿ ಊಟ ಮಾಡುವ ಖುಷಿ ಯಾವ ಫೈ ಸ್ಟಾರ್ ಹೋಟೆಲ್ ನಲ್ಲಿ ಕೊಡಲ್ಲ. ರಾತ್ರಿ ಅಜ್ಜನ ಆ ರೋಮಾಂಚಕ ಕಥೆಗಳು ಕೇಳುವುದೇ ಒಂದ್ ಖುಷಿ . ಹಳ್ಳಿಯ ಜಾತ್ರೆ ,ಇದೆಲ್ಲಾ ಅನುಭವ ಆಗಿದ್ದು ನಾನೂ ನನ್ನ ಹಳ್ಳಿ ಬಿಟ್ಟು ಮೂರೂ ವರ್ಷ  ಮೈಸೂರು ನಲ್ಲಿ ಇದ್ದಾಗ . ಅದೇನೋ ಗೊತ್ತಿಲ್ಲ ನಂಗೆ ಹಳ್ಳಿ ಬಿಟ್ಟು  ಹೋಗೋಕೆ ಮನಸ್ಸಿಲ್ಲ ಆದ್ರೂ ಮೂರು ವರ್ಷ ಹಳ್ಳಿ ನನ್ನ ಮನೆ ಕುಟುಂಬ ನನ್ನ ಊರುನ ...

ಅಜರಾಮರರು ತೇಜಸ್ವಿ

ಇಮೇಜ್
ವಿಜಯಭಾಸ್ಕರ ಸಹಜವಾಗಿ ಇದ್ದ ನಮಗೆ, ಜನರಲ್ಲಿ ಅನೇಕಾ ಅನೇಕಾ ಸಂಗತಿಗಳನ್ನು ಹುಡುಕಲು ಪ್ರಚೋಧಿಸಿದ ಹಾಗೂ ಸಾಮಾನ್ಯರಲ್ಲಿ ಅಸಾಮಾನ್ಯ ಕಥೆಗಳನ್ನು ಹೆಕ್ಕಲು ತಿಳಿಸಿಕೊಟ್ಟ ಕನ್ನಡದ ಭಿನ್ನ ಲೇಖಕರಾದ ತೇಜಸ್ವಿ ಅವರು ಆವರಿಸಿದ್ದು ಯುಟೂಬ್ ಮೂಖ್ಯಾಂತರ, ನಾನು ನನ್ನ ಪಿಯುಸಿಯ ರಂಪಾಟಗಳಿಗೆ ಅನುಗುಣವಾಗಿ ನನ್ನ ಕಾಲೇಜಿನ ಪ್ರಾಂಶುಪಾಲರಿಗೆ ಧಮ್ಕಿ ಹಾಕುವ ಹೊತ್ತಿಗಾಗಲೇ ತೇಜಸ್ವಿ ಅವರ ಗದ್ಯ ಪಾಠ ನಮ್ಮನ್ನು ಆವರಿಸಿ ಅಮಲಾಗಿ ಪರಿವರ್ತನೆಯಾಯಿತು. ದ್ವಿತೀಯ ಪಿಯುಸಿನಲ್ಲಿ ಕೃಷ್ಣೆಗೌಡರ ಆನೆ ಎನ್ನುವ ಗದ್ಯ ಆಗಲೇ ನಮ್ಮ ರಂಪಾಟಕ್ಕೆ ಅಣಿಯಾಗಿ ಓದಿಸಲು ತೊಡಗಿಸಿತು. ಯಾರಿವರು ತೇಜಸ್ವಿ ಎಂದು ಹುಟ್ಟಿದ ಯಕ್ಷ ಪ್ರಶ್ನೆಗೆ ಉತ್ತರ ಹುಡುಕಲು ಶುರು ಮಾಡಿದೆ. ಲೇಖಕರ ಪರಿಚಯದಲ್ಲಿ  ಸಿಕ್ಕ ಮಾಹಿತಿ ನನ್ನ ಹಪಹಪಿತನವನ್ನ ನೀಗಿಸಲಿಲ್ಲ. ಗೂಗಲ್ ನಲ್ಲಿ ವಿಕಿಪೀಡಿಯಾದ ಸಾಲು ಮಾಹಿತಿ ಗ್ರಹಿಕೆಗು ನೀಲುಕಲಿಲ್ಲ. ಇದಕ್ಕೆ ಮಾರ್ಗ ಎಂದರೆ ಯುಟೂಬ್ ಒಂದೇ ಏಕಮಾತ್ರ ಮಿತ್ರ ಎಂದು ಪೂರ್ಣಚಂದ್ರ ತೇಜಸ್ವಿ ಎಂದು ಹುಡುಕಿದೆ. ಕಣ್ಣೆದುರು ಬಂದ ಸಾಲು ಸಾಲು ಸಾಕ್ಷ್ಯಚಿತ್ರಗಳಲ್ಲಿ ಪೂರ್ಣ ಹೆಸರಿನ ಪೂರ್ಣಚಂದ್ರ ತೇಜಸ್ವಿ ಎನ್ನುವ ಚಿತ್ರ ಕ್ಲಿಕ್ಕಿಸಿದೆ ಶುರವಾದದ್ದೆ ಮೊದಲಿಗೆ ಕೊಳಲಿನ ಆ ಶಬ್ದ ಮೂಖ ಚಿತ್ತನಾಗಿಸಿತು ಕಣ್ಣಾಲಿಯ ನಡುವೆ ತೇಜಸ್ವಿ ಗಟ್ಟಿಯಾಗಿ ಕೂತರು ಅಲ್ಲಿ ಬರುವ  ಹಿನ್ನೆಲೆ ಧ್ವನಿ ತೇಜಸ್ವಿ ಅವರನ್ನು ನಮಗೆ ಕಟ್ಟಿಕ...

`ಗಾಂಧಿ ಅಂಗಳ' ದ ಗಾಂಧಿ

ಇಮೇಜ್
ವಿಜಯಭಾಸ್ಕರ   ಗಾಂಧಿ ಅಂಗಳ'ದ ಒಂದು ಸುತ್ತು... ಭಣಗುಡುವ ಕಗ್ಗತ್ತಲಲ್ಲಿ, ಮೈ ತಣಿಸುವ ಸಂಜೆ ಗೆಂಪಿನಲ್ಲಿ ಅಹವಾಲು ಸ್ವೀಕರಿಸದ ಮುನಿದ ಗೆಳತಿಯ ಸೆರಗಿನ ಅಂಚಿನಲ್ಲಿ ಕಾಯ್ದುಕುಳಿತ ಸೂರ್ಯನಿಗೂ ಚಡಪಡಿಕೆ‌ ಸಂಜೆಯಾದರೆ, ಭಾತಕ್ಕೀಗ 65 ರ ಸ್ವಾತಂತ್ರ್ಯ ಸಂಭ್ರಮ. ಅಲ್ಲಿ ಗಾಂಧಿಬೆಳಕು, ಗಾಂಧಿನವಿರು, ಗಾಂಧಿಹೆಜ್ಜೆ, ಗಾಂಧಿಕನಸು ಎಲ್ಲವೂ ಸಾಕಾರವಾದ ದಿನ ಅದು. ಗಾಂಧಿ ಎಂದರೆ ಒಂದೊಮ್ಮೆ ಉಸಿರು ಬಿಗಿ ಹಿಡಿದಂತಾಗುವುದು. ಅವಲೋಕನೆಗು ನಿಲುಕದ ವ್ಯಕ್ತಿತ್ವ. ಅಂತಹ ವ್ಯಕ್ತಿತ್ವವುಳ್ಳ ದೇಶದ ಮಹಾತ್ಮ ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಂಗಳದಲ್ಲಿ ಕೋಲುಹಿಡಿದು ತದೆಕಚಿತ್ತದ ನಗುಬಿರುತ್ತ ನಿಂತಿದ್ದಾರೆ. ಹಾ ..ಹೌದು ನೀವು ಗಾಂಧಿಯನ್ನು ನೋಡಬೇಕೆ..! ಬನ್ನಿ ಹಾಗಿದ್ದರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಂಗಳಕ್ಕೆ. ಸುಲಲಿತ ರಾಮಗೀತೆಗಳಿಂದ ಮೈ ನವಿರೇಳುಸುವ ಹಾಸು ಹುಲ್ಲಿನಿ ಕಾಡುಬಂಡೆಯ ಕಟ್ಟೆಯ ಮೇಲೆ ಅಗಮ್ಯವಾಗಿ ನಿಂತಿದ್ದಾರೆ ಗಾಂಧಿ. ಗಾಂಧಿ ಅಂಗಳಕ್ಕೆ ಹೋಗಬೇಕಾದ ಮಾರ್ಗ ನೀವು ಬಲ್ಲಿರಾ.! ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ಹೊಳ ಹೊಕ್ಕರೆ ಅಗೋಚರವಾಗಿ ತನ್ನಂತ ಸೆಳೆಯುವ ತಾಣ  `ಗಾಂಧಿ ಅಂಗಳ'. ಗಾಂಧಿ ಅಂಗಳಕ್ಕೆ ಹೋದ ಪ್ರತಿ ಒಬ್ಬರು ಒಂದು ನಿಮಿಷ ಕುಳಿತು ಹೋಗೋಣ ಎಂದು ಹೇಳಲೆಬೇಕು. ಅಕ್ಟೊಬರ್ 2 2015 ರಂದು ವಾರ್ತಾ ಮತ...

ಕೆಂಪು ಬಸ್ಸಿನ ಹುಡುಗಿ ಮತ್ತು ಸತೀಶ

ಇಮೇಜ್
 ಹಿಂದಿನ ರಾತ್ರಿ ಬರೆಯಲೆಂದು ತೆಗೆದಿಟ್ಟಿದ್ದ ನಾಲ್ಕಾರು ಹಾಳೆ ಬಣಗುಡುತ್ತಾ ಹಾಸಿಗೆ ಬುಡದಲ್ಲಿ ಬಿದ್ದಿದ್ದವು. ಒಪ್ಪಿದ ಕವಿತೆಗಳು ಜ್ಞಾಪಕಕ್ಕೆ ಬಾರದೆ ಕಾಡುತ್ತಾ ನನ್ನ ಎದೆ ಆಳದಲ್ಲಿ ಅಡಗಿ ಏಗ್ಗಿಲ್ಲದೆ ಚುಚ್ಚುವ ಪರಿ ಸಹಿಸಲಾಗದೆ ಕೊನೆರಾತ್ರಿ ಅನಿಸುತ್ತಲೆ ಒತ್ತುವ ಕಣ್ಣಿಗೆ ಖೊ ಕೊಡತ್ತಾ ಬರೆಯಲೆತ್ನಿಸಿದೆ. ಕನಸಿನ ಸರಿ ಸಮವಾಗಿ ಕಾಡುವ ಹುಡುಗಿ‌ ಕವಿತೆಗಳಲ್ಲಿ ಇಳಿಯಲು ಯತ್ನಿಸಿದಳು ಮುತ್ತಿನ ಘಮಲು ಅಂಟಿಸಲು,ಎದೆ ಸೀಳುವ ನೋಟ ಬೀರಲು ತುಟ್ಟಿಕಚ್ಚಿ ತೊಂಟವಾಗಿ ನೋಡುವ ಹುಡುಗಿ ಕವಿತೆ ಬರೆಯುವಾಗ ಮುನ್ನುಡಿ,ಅವಳೇ ಆರಂಭಕ್ಷರ.   ಮೌನವೂ ಒಂದು ಭಾಷೆ. ಹಾಗೇನಿಸಿದ್ದು ತೀರ ಇತ್ತಿಚಿಗೆ ನನ್ನನ್ನು ನಾ! ಅರಿಯಲು ಏಲ್ಲೊ ಒಂಟಿಗನಾಗಿದ್ದೇನೆ ಅನಿಸುತ್ತಲ್ಲಿದೆ. ನಡೆದು ಕರಾಳ ಇತಿಹಾಸವಾದ ಒಂದು ಕಹಿ‌ ನೆನಪನ್ನು ಒಲ್ಲದ ಮನಸ್ಸಿನಿಂದ ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ. ಕೆಂಪು ಬಸ್ಸಿನಿಂದಿಳಿದು ಬರುತ್ತಿದ್ದ ಹುಡುಗಿಯ ನೋಡಲೆಂದು ಬಿಡಾರ ಹುಡಿದ್ದ ಕೆಲ ಪುಂಡ ಹುಡುಗರು ಅಂತೆನಿಲ್ಲ ಉಗ್ರ ಪ್ರೇಮಿಗಳಂತೆ ಪೋಸು ಕೊಡುವ ಕಾಲೇಜು ವಿದ್ಯಾರ್ಥಿಗಳು ಬಸ್-ನಿಲ್ದಾಣದ ಖಾಯಂ ಪ್ರೇಕ್ಷಕರಾಗಿದ್ದರು. ಗಿರಿಗಲ್ಲಿಯ ಪ್ರತಿ ಜನರಲ್ಲೂ ಅಸಮಾನತೆ ಕಾಣುವ ಶಾಮ್ ಭಟ್ಟರು ಬರುತ್ತಾರೆಂದು  ಆ ಗಿರಿಗಲ್ಲಿ ಜನ ನೆಲಸಾರಸಿ, ಗುಡಸಿ,ಬಾಗಿಲು ಚಿಲ್ಕಾ ಹಾಕಿ ಬಡಪಾಯಿ ಜನ ಅಸ್ವಾತಂತ್ರ್ಯದ ತರ ಮುಸುಕು ಹ...

ಅಗಸಿಯ ಕಾಲಗರ್ಭದಲ್ಲಿ....

ಇಮೇಜ್
ಅಗಸಿಯ ಕಾಲಗರ್ಭದಲ್ಲಿ....     ಸಣ್ಣಗೆ ಗಾಳಿ‌ ಬಿಸುತ್ತಾ ಅಗಸಿ ಕಡೆಗೆ ಹೋಗುವ ದಾರಿ‌ ಮಿರಿ ಮಿರಿ ಮಿಂಚುತ್ತಾ‌ ತನ್ನ ಐತಿಹಾಸಿಕ ಹೊದಿಕೆಯನ್ನು ಹೊದ್ದು ಗರ್ವದಿಂದ ನಮ್ಮೂರ ಹಳ್ಳದ ಕಿನಾರೆಯ ಪಕ್ಕ ತನ್ನ ಅಜಾನುಬಾಹು‌ ಅಡಿಗಲ್ಲಿನಿಂದ ಸ್ಥಾಪಿತವಾಗಿ‌ ನಿಂತಿರುವುದು ಸೇಡಂನ ಸಣ್ಣ ಅಗಸಿಯ 'ಅಗಸಿ' ಎತ್ತರದ ಕಮಾನಿಗೆ ಕತ್ತಲು ಆವರಿಸಿದ್ದಂತೆ ಕತ್ತಲು ನಮ್ಮೂರನ್ನು  ಆವರಿಸಿಕೊಳ್ಳುತ್ತಿತ್ತು. ಆ ಸಂಜೆಯಲ್ಲಿ ನಮ್ಮ ಮನೆ ಮುಂದಿನ ಹಾಸುಗಲ್ಲು  ಗೊದೂಳಿನಿಂದ ಮುಚ್ಚಿಕೊಳ್ಳುತ್ತಿತ್ತು. ಬಸ್ಸಪ್ಪನ ಹೋಟಲಿನ್ನಲ್ಲಿ ಕೈ ಎದ್ದಿ ನೀಡುವ `ಛಾ`ಕ್ಕೆ ದುಂಬಿರುವ ಜನಸ್ತೋಮ. ವಿಚಲಿತ ಹಾಗೂ ಆಕರ್ಷಕವಾದದ್ದು ನಮ್ಮೂರಲ್ಲಿ `ಅಗಸಿಯ` ಮಹಾದ್ವಾರ. ನಮ್ಮ ಮನೆ ಹಿಂದಿರುವ ಅಗಸಿಯ ಹಳ್ಳಕ್ಕೆ ಒಗ್ಗಿಕೊಂಡು ನಿಂತಿದೆ. `ಅಗಸಿಯ` ಹಾದಿ ದುಡಿಮೆಯ ಜನರಿಗೆ ಹೆಗಲು ನೀಡುವ ರಾಶಿಕಟ್ಟೆ, ಸೊಂಬೆರಿಗಳಿಗೆ `ಎಲೆಗಳಂತಹ` ಮಜಾಚಟಗಳ ತಾಣವು ಹೌದು. ಮಿರಿ ಮಿರಿ ಕಂಗೊಳಿಸುವ ಸೇಡಂನ ಈ `ಅಗಸಿಯು` ತನ್ನತ್ತ ಬಂದ ಜನರಿಗೆ `ಫಲಾ` ತೃಪ್ತಿ ನೀಡುತ್ತದೆ. ಈ ಅಗಸಿಯ ಸುತ್ತಲು ಬದುಕನ್ನು ಕಟ್ಟಿಕೊಳ್ಳುವ ಕೆಲ ಮನೆಗಳಲ್ಲಿ ನನ್ನದು ಒಂದು ಮನೆ. ಅಗಸಿ ಹೋಗುವ ದಾರಿಯುದಕ್ಕೂ ಶಿಲ್ಪ ಕಲೆ ಸ್ತಂಭಗಳು ಹಾರುತ್ತ ಆಕಾಶಕ್ಕೆ ಕೈ ಹಾಕುತ್ತಿವೆ. ಕಲ್ಲಿನ ಕೋಳಿಗಳೆರಡು ಎಡ-ಬಲದಲ್ಲಿ ಕೂಗೊ ಹಾಗೆ ಎದ್ದು ಕಾಣುತ್ತವೆ. ...

ಗಜಲ್

ಇಮೇಜ್
  ಮಂಜುನಾಥ ಸರ್ಜಾಪುರ.ವಿ ಗಜಲ್   ಭುವನೆಯಾಕೋ ಅಳುತಿರುವಳು ಸಂತೈಸುವವರಾರೂ ಇಲ್ಲ, ದಿಕ್ಕು ಬದಲಿಸಿದ ಅವಳನು ಮರು ಸ್ವಾಗತಿಸುವವರಾರೂ ಇಲ್ಲ, ಭುವನೆಯ ಬೆನ್ನೇರಿ ಆಂಗ್ಲನೆಂಬ ರಾಕ್ಷಸನು ಆರ್ಭಟಿಸಿರುವನು, ಕೈ ಕಾಲನು ಹಿಡಿದು ಅವಳು ಕುಗ್ಗದೆ ನಿಲ್ಲಿಸುವವರಾರೂ ಇಲ್ಲ, ಸುತ್ತಲೂ ಬಲವಂತವಾಗಿ ಆವರಿಸಿದೆ ನಮದಲ್ಲದಿದ್ದರೂ, ಮೈಕೊಡವಿ ಅದಕೆ ಚೀಮಾರಿ ಹಾಕುವವರಾರೂ ಇಲ್ಲ, ಮಲಿನವಾದ ಕನ್ನಡಿಯು ಮರು ಹೊಳೆಯಲೆತ್ನಿಸಿದೆ ಹೊಳಪ, ಅದನು ಮನಸೊಳಗಿನ ಧೈರ್ಯವೆಂಬ ಕಣ್ಣೀರಿನಿಂದ ತೊಳೆಯುವವರಾರೂ ಇಲ್ಲ, ಅವಳು ಮೇಲೆದ್ದು ನಿಂತು ನಡೆಯಲು ಆಗದೆ ಕೂತಿಹಳು, ಕೈ ಹಿಡಿದು ಪ್ರಮಾಣಿಸಿ,ಪ್ರಾಮಾಣಿಕವಾಗಿ,ನಡೆಯುವವರಾರೂ ಇಲ್ಲ, ಈ ಭುವನೆಯ ಸ್ವಂತ ಮಗನಂತೆ ನೀನು "ಓ ಸಮಂಥ", ನಿನ್ನನು ಕರೆದು ಅವಳಿಗಾಗಿ ಕೈ,ಕೈ ಸೇರಿಸುವ ಹೃದಯವಂತರಾರೂ ಇಲ್ಲ,                           

ನಂದೂ ಒಂದಿರಲಿ

ಇಮೇಜ್
ನಿಖಿಲ್ ರಾಜ್.ಕಲಬುರಗಿ  ನಂದೂ ಒಂದಿರಲಿ ನಿ ನಿನ್ನ ಕನಸಲ್ಲಿ ಏನೇನೊ ಕಂಡಿರಬಹುದು ಅದರಲ್ಲಿ ಕೆಲವು ಮರೆಯದೆಯೂ ಇರಬಹುದು ಆ ನಿನ್ನ ನೆನಪುಗಳಲ್ಲಿ ನಂದೂ ಒಂದಿರಲಿ ನಿ ನಿನ್ನ ಮನಸಲ್ಲಿ ಏನೇನೊ ಇಟ್ಟಿರಬಹುದು ಅದರಲ್ಲಿ ಕೆಲವು ನಿನ್ನ ಮನಸಿಗಂಟಿರಬಹುದು ಆ ನಿನ್ನ ಭಾವನೆಗಳಲ್ಲಿ ನಂದೂ ಒಂದಿರಲಿ