ಅಜರಾಮರರು ತೇಜಸ್ವಿ
ವಿಜಯಭಾಸ್ಕರ
ಯಾರಿವರು ತೇಜಸ್ವಿ ಎಂದು ಹುಟ್ಟಿದ ಯಕ್ಷ ಪ್ರಶ್ನೆಗೆ ಉತ್ತರ ಹುಡುಕಲು ಶುರು ಮಾಡಿದೆ. ಲೇಖಕರ ಪರಿಚಯದಲ್ಲಿ ಸಿಕ್ಕ ಮಾಹಿತಿ ನನ್ನ ಹಪಹಪಿತನವನ್ನ ನೀಗಿಸಲಿಲ್ಲ. ಗೂಗಲ್ ನಲ್ಲಿ ವಿಕಿಪೀಡಿಯಾದ ಸಾಲು ಮಾಹಿತಿ ಗ್ರಹಿಕೆಗು ನೀಲುಕಲಿಲ್ಲ. ಇದಕ್ಕೆ ಮಾರ್ಗ ಎಂದರೆ ಯುಟೂಬ್ ಒಂದೇ ಏಕಮಾತ್ರ ಮಿತ್ರ ಎಂದು ಪೂರ್ಣಚಂದ್ರ ತೇಜಸ್ವಿ ಎಂದು ಹುಡುಕಿದೆ. ಕಣ್ಣೆದುರು ಬಂದ ಸಾಲು ಸಾಲು ಸಾಕ್ಷ್ಯಚಿತ್ರಗಳಲ್ಲಿ ಪೂರ್ಣ ಹೆಸರಿನ ಪೂರ್ಣಚಂದ್ರ ತೇಜಸ್ವಿ ಎನ್ನುವ ಚಿತ್ರ ಕ್ಲಿಕ್ಕಿಸಿದೆ ಶುರವಾದದ್ದೆ ಮೊದಲಿಗೆ ಕೊಳಲಿನ ಆ ಶಬ್ದ ಮೂಖ ಚಿತ್ತನಾಗಿಸಿತು ಕಣ್ಣಾಲಿಯ ನಡುವೆ ತೇಜಸ್ವಿ ಗಟ್ಟಿಯಾಗಿ ಕೂತರು ಅಲ್ಲಿ ಬರುವ ಹಿನ್ನೆಲೆ ಧ್ವನಿ ತೇಜಸ್ವಿ ಅವರನ್ನು ನಮಗೆ ಕಟ್ಟಿಕೊಳ್ಳಲು ಯತ್ನಿಸಿತು. ಸಾಕ್ಷ್ಯಚಿತ್ರದಲ್ಲಿ ಬರುವ ಎಲ್ಲಾ ಮಹನೀಯರು ತೇಜಸ್ವಿ ಅವರಿದ್ದ ಜೀವನಶೈಲಿ, ಓಡಾಡಿದ ಜಾಗ, ನಗಿಸಿದ ಕ್ಷಣ, ಆಡಿದ ಮಾತು ಎಲ್ಲವೂ ಹೇಳುವ ವ್ಯಾಖ್ಯಾನಗಳನ್ನು ನೋಡುತ್ತಾ ಹೋದಂತೆ ಛೇ! ತೇಜಸ್ವಿ ಇಲ್ಲವಲ್ಲ ಅವರಿದ್ದರೆ ನಾವು ಅವರನ್ನು ದೂರದಿಂದಾದರು ನೋಡುತ್ತಿದ್ದೇವು ಎಂದು ಅನಿಸಿ, ಹೊಕ್ಕಿರುವ ತೇಜಸ್ವಿ ಲೋಕದಿಂದ ಸ್ವಲ್ಪ ಹೊರ ಬಂದು ಅವರು ಬರೆದಿರವ ಪುಸ್ತಕಗಳ ಹುಡುಕಾಟದಲ್ಲಿ ತೊಡಗಿದೆ.
ನನಗೆ ಸಿಕ್ಕ ಅವರ ಕಾದಂಬರಿಗಳಲ್ಲಿ ಕರ್ವಾಲೋ ಓದಿದೆ. ಓದಿದೆ, ಓದಿದೆ ಎಷ್ಟ್ರರ ಮಟ್ಟಿಗೆ ಓದಿದೆನೆಂದರೆ ನನ್ನ ಪದವಿ ಪರೀಕ್ಷೆ ನಾಳೆ ಇದೆ ಎಂದರೆ ರಾತ್ರಿ ಕರ್ವಾಲೋದ ಮಂದಣ್ಣ, ಕೀವಿ, ಕರ್ವಾಲೋ ಇವರೆಲ್ಲಾ ಆವರಿಸಿಕೊಂಡು ಓದುವ ಗೀಳಿಗೆ ಪ್ರೇರಿಪಿಸಿದರು.
ಒಂದು ದಿನ ಹೀಗಾಯಿತು ನಾನು ಓದುತ್ತಿದ್ದ ಕಾಲೇಜಿನಲ್ಲಿ ಸಣ್ಣ ಗಲಾಟೆ, ಆ ಗಲಾಟೆಯಲ್ಲಿ ನನ್ನದು ಚಿಕ್ಕ ಮಧ್ಯವರ್ತಿಕೆ ಇತ್ತು.
ಅದಕ್ಕೆ ಕ್ಲಾಸ್ ರೂಮಿನಲ್ಲೆ ನನಗೆ ಮೇಷ್ಟ್ರು ಸರಿಯಾಗಿ ದಬಾಯಿಸಿದರು. ಒಬ್ಬ ಸಾಹಿತಿಯ ಮಗನಾಗಿ ಗಲಾಟೆ ಮಾಡುತ್ತಿಯಾ. ನೀನಾಡುವ ಭಾಷೆ ನೋಡು, ನಿಮ್ಮ ತಂದೆಯ ಭಾಷಣ ಒಂದು ಬಾರಿ ಕೇಳು ಅವಿವೇಕಿ ಎಂದು ಗುರುಗಳು ಬೈದ್ರು. ನನಗೆ ಮೇಷ್ಟ್ರು ಬೈದ್ರಲ್ಲ ಎಂದು ಕೋಪವಿಲ್ಲ. ನಮ್ಮ ತಂದೆಯ ಹೆಸರು ತೆಗೆದುಕೊಂಡು ಬೈದ್ರಲ್ಲಾ ಎನ್ನುವುದೆ ರೇಗಿಹೊಯಿತು. ತಂದೆಯ ಹೆಸರನ್ನು ಉಳಿಸಿಕೊಂಡು ಅವರಿಗಿಂತ ತಕ್ಕ ಮಟ್ಟಿಗೆ ಬೆಳೆದು ತೋರಿಸಬೇಕು ಎಂದು ಹಟ ಹೀಡಿದೆ. ಆಗ ನನಗೆ ಸಿಕ್ಕವರೆ ಪೂರ್ಣಚಂದ್ರ ತೇಜಸ್ವಿ ಅವರು.
ಸಾಹಿತ್ಯ ಪರಿಷತ್ತಿನ ಮಕ್ಕಳ ಕವಿಗೋಷ್ಠಿಯಲ್ಲಿ ನನಗೆ ಬಹುಮಾನ ತೇಜಸ್ವಿ ಅವರ ಭಾವಚಿತ್ರ ನೀಡಿದ್ದರು. ಆ ಭಾವಚಿತ್ರದ ಹಿಂದೆ ತೇಜಸ್ವಿ ಅವರ ಪರಿಚಯವಿತ್ತು ಕಣ್ಣಾಡಿಸಿದರೆ ತಂದೆ ರಾಷ್ಟ್ರಕವಿ ಕುವೆಂಪು ಎಂದು ಇತ್ತು. ನಾನು ಮೂಖ ವಿಸ್ಮಿತನಾದೆ ಅಯ್ಯೋ ಕವಿಗಳ ಮಕ್ಕಳು ಬರೆಯಬಹುದಾ, ಅವರಿಗೂ ಸಮಾಜ ಮನ್ನಣೆ ನೀಡುತ್ತದೆ ಎಂದು ಗೊತ್ತಾಗಿದ್ದೆ ತೇಜಸ್ವಿ ಅವರ ಭಾವಚಿತ್ರದ ಪುಟ್ಟ ಪರಿಚಯದಿಂದ ಆಗ ಪರಿಚಯವಾದ ತೇಜಸ್ವಿ ಅವರು ಇಂದಿಗೂ ನನ್ನಲ್ಲಿ ಮತ್ತು ಇಂದಿನ ಯುವ ಪೀಳಿಗೆಯಲ್ಲಿ ಅಜರಾಮರರಾಗಿದ್ದಾರೆ.
supee Anna
ಪ್ರತ್ಯುತ್ತರಅಳಿಸಿ