ಪೋಸ್ಟ್‌ಗಳು

ಸೆಪ್ಟೆಂಬರ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕೆಂಪು ಬಸ್ಸಿನ ಹುಡುಗಿ ಮತ್ತು ಸತೀಶ

ಇಮೇಜ್
 ಹಿಂದಿನ ರಾತ್ರಿ ಬರೆಯಲೆಂದು ತೆಗೆದಿಟ್ಟಿದ್ದ ನಾಲ್ಕಾರು ಹಾಳೆ ಬಣಗುಡುತ್ತಾ ಹಾಸಿಗೆ ಬುಡದಲ್ಲಿ ಬಿದ್ದಿದ್ದವು. ಒಪ್ಪಿದ ಕವಿತೆಗಳು ಜ್ಞಾಪಕಕ್ಕೆ ಬಾರದೆ ಕಾಡುತ್ತಾ ನನ್ನ ಎದೆ ಆಳದಲ್ಲಿ ಅಡಗಿ ಏಗ್ಗಿಲ್ಲದೆ ಚುಚ್ಚುವ ಪರಿ ಸಹಿಸಲಾಗದೆ ಕೊನೆರಾತ್ರಿ ಅನಿಸುತ್ತಲೆ ಒತ್ತುವ ಕಣ್ಣಿಗೆ ಖೊ ಕೊಡತ್ತಾ ಬರೆಯಲೆತ್ನಿಸಿದೆ. ಕನಸಿನ ಸರಿ ಸಮವಾಗಿ ಕಾಡುವ ಹುಡುಗಿ‌ ಕವಿತೆಗಳಲ್ಲಿ ಇಳಿಯಲು ಯತ್ನಿಸಿದಳು ಮುತ್ತಿನ ಘಮಲು ಅಂಟಿಸಲು,ಎದೆ ಸೀಳುವ ನೋಟ ಬೀರಲು ತುಟ್ಟಿಕಚ್ಚಿ ತೊಂಟವಾಗಿ ನೋಡುವ ಹುಡುಗಿ ಕವಿತೆ ಬರೆಯುವಾಗ ಮುನ್ನುಡಿ,ಅವಳೇ ಆರಂಭಕ್ಷರ.   ಮೌನವೂ ಒಂದು ಭಾಷೆ. ಹಾಗೇನಿಸಿದ್ದು ತೀರ ಇತ್ತಿಚಿಗೆ ನನ್ನನ್ನು ನಾ! ಅರಿಯಲು ಏಲ್ಲೊ ಒಂಟಿಗನಾಗಿದ್ದೇನೆ ಅನಿಸುತ್ತಲ್ಲಿದೆ. ನಡೆದು ಕರಾಳ ಇತಿಹಾಸವಾದ ಒಂದು ಕಹಿ‌ ನೆನಪನ್ನು ಒಲ್ಲದ ಮನಸ್ಸಿನಿಂದ ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ. ಕೆಂಪು ಬಸ್ಸಿನಿಂದಿಳಿದು ಬರುತ್ತಿದ್ದ ಹುಡುಗಿಯ ನೋಡಲೆಂದು ಬಿಡಾರ ಹುಡಿದ್ದ ಕೆಲ ಪುಂಡ ಹುಡುಗರು ಅಂತೆನಿಲ್ಲ ಉಗ್ರ ಪ್ರೇಮಿಗಳಂತೆ ಪೋಸು ಕೊಡುವ ಕಾಲೇಜು ವಿದ್ಯಾರ್ಥಿಗಳು ಬಸ್-ನಿಲ್ದಾಣದ ಖಾಯಂ ಪ್ರೇಕ್ಷಕರಾಗಿದ್ದರು. ಗಿರಿಗಲ್ಲಿಯ ಪ್ರತಿ ಜನರಲ್ಲೂ ಅಸಮಾನತೆ ಕಾಣುವ ಶಾಮ್ ಭಟ್ಟರು ಬರುತ್ತಾರೆಂದು  ಆ ಗಿರಿಗಲ್ಲಿ ಜನ ನೆಲಸಾರಸಿ, ಗುಡಸಿ,ಬಾಗಿಲು ಚಿಲ್ಕಾ ಹಾಕಿ ಬಡಪಾಯಿ ಜನ ಅಸ್ವಾತಂತ್ರ್ಯದ ತರ ಮುಸುಕು ಹಾಕಿಕೊಂಡು ಮನೆಯಲ್ಲಿ ಸ

ಅಗಸಿಯ ಕಾಲಗರ್ಭದಲ್ಲಿ....

ಇಮೇಜ್
ಅಗಸಿಯ ಕಾಲಗರ್ಭದಲ್ಲಿ....     ಸಣ್ಣಗೆ ಗಾಳಿ‌ ಬಿಸುತ್ತಾ ಅಗಸಿ ಕಡೆಗೆ ಹೋಗುವ ದಾರಿ‌ ಮಿರಿ ಮಿರಿ ಮಿಂಚುತ್ತಾ‌ ತನ್ನ ಐತಿಹಾಸಿಕ ಹೊದಿಕೆಯನ್ನು ಹೊದ್ದು ಗರ್ವದಿಂದ ನಮ್ಮೂರ ಹಳ್ಳದ ಕಿನಾರೆಯ ಪಕ್ಕ ತನ್ನ ಅಜಾನುಬಾಹು‌ ಅಡಿಗಲ್ಲಿನಿಂದ ಸ್ಥಾಪಿತವಾಗಿ‌ ನಿಂತಿರುವುದು ಸೇಡಂನ ಸಣ್ಣ ಅಗಸಿಯ 'ಅಗಸಿ' ಎತ್ತರದ ಕಮಾನಿಗೆ ಕತ್ತಲು ಆವರಿಸಿದ್ದಂತೆ ಕತ್ತಲು ನಮ್ಮೂರನ್ನು  ಆವರಿಸಿಕೊಳ್ಳುತ್ತಿತ್ತು. ಆ ಸಂಜೆಯಲ್ಲಿ ನಮ್ಮ ಮನೆ ಮುಂದಿನ ಹಾಸುಗಲ್ಲು  ಗೊದೂಳಿನಿಂದ ಮುಚ್ಚಿಕೊಳ್ಳುತ್ತಿತ್ತು. ಬಸ್ಸಪ್ಪನ ಹೋಟಲಿನ್ನಲ್ಲಿ ಕೈ ಎದ್ದಿ ನೀಡುವ `ಛಾ`ಕ್ಕೆ ದುಂಬಿರುವ ಜನಸ್ತೋಮ. ವಿಚಲಿತ ಹಾಗೂ ಆಕರ್ಷಕವಾದದ್ದು ನಮ್ಮೂರಲ್ಲಿ `ಅಗಸಿಯ` ಮಹಾದ್ವಾರ. ನಮ್ಮ ಮನೆ ಹಿಂದಿರುವ ಅಗಸಿಯ ಹಳ್ಳಕ್ಕೆ ಒಗ್ಗಿಕೊಂಡು ನಿಂತಿದೆ. `ಅಗಸಿಯ` ಹಾದಿ ದುಡಿಮೆಯ ಜನರಿಗೆ ಹೆಗಲು ನೀಡುವ ರಾಶಿಕಟ್ಟೆ, ಸೊಂಬೆರಿಗಳಿಗೆ `ಎಲೆಗಳಂತಹ` ಮಜಾಚಟಗಳ ತಾಣವು ಹೌದು. ಮಿರಿ ಮಿರಿ ಕಂಗೊಳಿಸುವ ಸೇಡಂನ ಈ `ಅಗಸಿಯು` ತನ್ನತ್ತ ಬಂದ ಜನರಿಗೆ `ಫಲಾ` ತೃಪ್ತಿ ನೀಡುತ್ತದೆ. ಈ ಅಗಸಿಯ ಸುತ್ತಲು ಬದುಕನ್ನು ಕಟ್ಟಿಕೊಳ್ಳುವ ಕೆಲ ಮನೆಗಳಲ್ಲಿ ನನ್ನದು ಒಂದು ಮನೆ. ಅಗಸಿ ಹೋಗುವ ದಾರಿಯುದಕ್ಕೂ ಶಿಲ್ಪ ಕಲೆ ಸ್ತಂಭಗಳು ಹಾರುತ್ತ ಆಕಾಶಕ್ಕೆ ಕೈ ಹಾಕುತ್ತಿವೆ. ಕಲ್ಲಿನ ಕೋಳಿಗಳೆರಡು ಎಡ-ಬಲದಲ್ಲಿ ಕೂಗೊ ಹಾಗೆ ಎದ್ದು ಕಾಣುತ್ತವೆ.  ಕಾಲನಿರ್ಣಯದಂತೆ ಅ