ಪೋಸ್ಟ್‌ಗಳು

ಅಕ್ಟೋಬರ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಜರಾಮರರು ತೇಜಸ್ವಿ

ಇಮೇಜ್
ವಿಜಯಭಾಸ್ಕರ ಸಹಜವಾಗಿ ಇದ್ದ ನಮಗೆ, ಜನರಲ್ಲಿ ಅನೇಕಾ ಅನೇಕಾ ಸಂಗತಿಗಳನ್ನು ಹುಡುಕಲು ಪ್ರಚೋಧಿಸಿದ ಹಾಗೂ ಸಾಮಾನ್ಯರಲ್ಲಿ ಅಸಾಮಾನ್ಯ ಕಥೆಗಳನ್ನು ಹೆಕ್ಕಲು ತಿಳಿಸಿಕೊಟ್ಟ ಕನ್ನಡದ ಭಿನ್ನ ಲೇಖಕರಾದ ತೇಜಸ್ವಿ ಅವರು ಆವರಿಸಿದ್ದು ಯುಟೂಬ್ ಮೂಖ್ಯಾಂತರ, ನಾನು ನನ್ನ ಪಿಯುಸಿಯ ರಂಪಾಟಗಳಿಗೆ ಅನುಗುಣವಾಗಿ ನನ್ನ ಕಾಲೇಜಿನ ಪ್ರಾಂಶುಪಾಲರಿಗೆ ಧಮ್ಕಿ ಹಾಕುವ ಹೊತ್ತಿಗಾಗಲೇ ತೇಜಸ್ವಿ ಅವರ ಗದ್ಯ ಪಾಠ ನಮ್ಮನ್ನು ಆವರಿಸಿ ಅಮಲಾಗಿ ಪರಿವರ್ತನೆಯಾಯಿತು. ದ್ವಿತೀಯ ಪಿಯುಸಿನಲ್ಲಿ ಕೃಷ್ಣೆಗೌಡರ ಆನೆ ಎನ್ನುವ ಗದ್ಯ ಆಗಲೇ ನಮ್ಮ ರಂಪಾಟಕ್ಕೆ ಅಣಿಯಾಗಿ ಓದಿಸಲು ತೊಡಗಿಸಿತು. ಯಾರಿವರು ತೇಜಸ್ವಿ ಎಂದು ಹುಟ್ಟಿದ ಯಕ್ಷ ಪ್ರಶ್ನೆಗೆ ಉತ್ತರ ಹುಡುಕಲು ಶುರು ಮಾಡಿದೆ. ಲೇಖಕರ ಪರಿಚಯದಲ್ಲಿ  ಸಿಕ್ಕ ಮಾಹಿತಿ ನನ್ನ ಹಪಹಪಿತನವನ್ನ ನೀಗಿಸಲಿಲ್ಲ. ಗೂಗಲ್ ನಲ್ಲಿ ವಿಕಿಪೀಡಿಯಾದ ಸಾಲು ಮಾಹಿತಿ ಗ್ರಹಿಕೆಗು ನೀಲುಕಲಿಲ್ಲ. ಇದಕ್ಕೆ ಮಾರ್ಗ ಎಂದರೆ ಯುಟೂಬ್ ಒಂದೇ ಏಕಮಾತ್ರ ಮಿತ್ರ ಎಂದು ಪೂರ್ಣಚಂದ್ರ ತೇಜಸ್ವಿ ಎಂದು ಹುಡುಕಿದೆ. ಕಣ್ಣೆದುರು ಬಂದ ಸಾಲು ಸಾಲು ಸಾಕ್ಷ್ಯಚಿತ್ರಗಳಲ್ಲಿ ಪೂರ್ಣ ಹೆಸರಿನ ಪೂರ್ಣಚಂದ್ರ ತೇಜಸ್ವಿ ಎನ್ನುವ ಚಿತ್ರ ಕ್ಲಿಕ್ಕಿಸಿದೆ ಶುರವಾದದ್ದೆ ಮೊದಲಿಗೆ ಕೊಳಲಿನ ಆ ಶಬ್ದ ಮೂಖ ಚಿತ್ತನಾಗಿಸಿತು ಕಣ್ಣಾಲಿಯ ನಡುವೆ ತೇಜಸ್ವಿ ಗಟ್ಟಿಯಾಗಿ ಕೂತರು ಅಲ್ಲಿ ಬರುವ  ಹಿನ್ನೆಲೆ ಧ್ವನಿ ತೇಜಸ್ವಿ ಅವರನ್ನು ನಮಗೆ ಕಟ್ಟಿಕೊಳ್ಳಲು ಯತ

`ಗಾಂಧಿ ಅಂಗಳ' ದ ಗಾಂಧಿ

ಇಮೇಜ್
ವಿಜಯಭಾಸ್ಕರ   ಗಾಂಧಿ ಅಂಗಳ'ದ ಒಂದು ಸುತ್ತು... ಭಣಗುಡುವ ಕಗ್ಗತ್ತಲಲ್ಲಿ, ಮೈ ತಣಿಸುವ ಸಂಜೆ ಗೆಂಪಿನಲ್ಲಿ ಅಹವಾಲು ಸ್ವೀಕರಿಸದ ಮುನಿದ ಗೆಳತಿಯ ಸೆರಗಿನ ಅಂಚಿನಲ್ಲಿ ಕಾಯ್ದುಕುಳಿತ ಸೂರ್ಯನಿಗೂ ಚಡಪಡಿಕೆ‌ ಸಂಜೆಯಾದರೆ, ಭಾತಕ್ಕೀಗ 65 ರ ಸ್ವಾತಂತ್ರ್ಯ ಸಂಭ್ರಮ. ಅಲ್ಲಿ ಗಾಂಧಿಬೆಳಕು, ಗಾಂಧಿನವಿರು, ಗಾಂಧಿಹೆಜ್ಜೆ, ಗಾಂಧಿಕನಸು ಎಲ್ಲವೂ ಸಾಕಾರವಾದ ದಿನ ಅದು. ಗಾಂಧಿ ಎಂದರೆ ಒಂದೊಮ್ಮೆ ಉಸಿರು ಬಿಗಿ ಹಿಡಿದಂತಾಗುವುದು. ಅವಲೋಕನೆಗು ನಿಲುಕದ ವ್ಯಕ್ತಿತ್ವ. ಅಂತಹ ವ್ಯಕ್ತಿತ್ವವುಳ್ಳ ದೇಶದ ಮಹಾತ್ಮ ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಂಗಳದಲ್ಲಿ ಕೋಲುಹಿಡಿದು ತದೆಕಚಿತ್ತದ ನಗುಬಿರುತ್ತ ನಿಂತಿದ್ದಾರೆ. ಹಾ ..ಹೌದು ನೀವು ಗಾಂಧಿಯನ್ನು ನೋಡಬೇಕೆ..! ಬನ್ನಿ ಹಾಗಿದ್ದರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಂಗಳಕ್ಕೆ. ಸುಲಲಿತ ರಾಮಗೀತೆಗಳಿಂದ ಮೈ ನವಿರೇಳುಸುವ ಹಾಸು ಹುಲ್ಲಿನಿ ಕಾಡುಬಂಡೆಯ ಕಟ್ಟೆಯ ಮೇಲೆ ಅಗಮ್ಯವಾಗಿ ನಿಂತಿದ್ದಾರೆ ಗಾಂಧಿ. ಗಾಂಧಿ ಅಂಗಳಕ್ಕೆ ಹೋಗಬೇಕಾದ ಮಾರ್ಗ ನೀವು ಬಲ್ಲಿರಾ.! ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ಹೊಳ ಹೊಕ್ಕರೆ ಅಗೋಚರವಾಗಿ ತನ್ನಂತ ಸೆಳೆಯುವ ತಾಣ  `ಗಾಂಧಿ ಅಂಗಳ'. ಗಾಂಧಿ ಅಂಗಳಕ್ಕೆ ಹೋದ ಪ್ರತಿ ಒಬ್ಬರು ಒಂದು ನಿಮಿಷ ಕುಳಿತು ಹೋಗೋಣ ಎಂದು ಹೇಳಲೆಬೇಕು. ಅಕ್ಟೊಬರ್ 2 2015 ರಂದು ವಾರ್ತಾ ಮತ್