ಪೋಸ್ಟ್‌ಗಳು

ಜುಲೈ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಡಾ.ಕಾಶಿನಾಥ ಅಂಬಲಗೆ ಚಿಪ್ಪಿನೊಳಗಿನ ಮುತ್ತು ಹೆಕ್ಕಿ ಪೋಣಿಸಿದ ಕವಿ

ಇಮೇಜ್
ಮಹಿಪಾಲರೆಡ್ಡಿ ಮುನ್ನೂರ್   ಡಾ.ಕಾಶಿನಾಥ ಅಂಬಲಗೆ ಚಿಪ್ಪಿನೊಳಗಿನ ಮುತ್ತು ಹೆಕ್ಕಿ ಪೋಣಿಸಿದ ಕವಿ   ನೀನೊಲಿದರೆ ಕಾವ್ಯವೇ! ಕೊರಡು ಕೊನರುವದೆಂದು ಕೇಳಿದ್ದೇನೆ ನಾನು ಈ ಕೊರಡು ಸಮಾಜಕ್ಕೆ ಎಲೆ ಹೂಗಳಿಗಾಗಿ ಬಡಿದಾಡುತ್ತಿದ್ದೇನೆ ನಾನು ನನ್ನ ಕಾಲವನ್ನು ಶಬ್ದಗಳಲಿ ಹಿಡಿದಿಡಲು ಹೆಣಗಾಡುತ್ತಿದ್ದೇನೆ ನಾನು ಕಾಲದ ಶಬ್ದಾರ್ಥಗಳ ಸಹಕಾರ ಪಡೆಯಲು ಹೆಣಗಾಡುತ್ತಿದ್ದೇನೆ ನಾನು ಗಜಲ್‍ವೊಂದರ ಕೆಲ ಶೇರುಗಳನ್ನು ಓದುತ್ತಿದ್ದರೆ, ಡಾ. ಕಾಶಿನಾಥ ಅಂಬಲಗೆ ಅವರ ಕಾವ್ಯ ಶಕ್ತಿ ಮತ್ತು ಅನುವಾದದ ಮೇಲೆ ಎಂಥಾ ಪ್ರೌಢಿಮೆಗೆ ಈ ಸಾಲುಗಳು ಸಾಕ್ಷಿಯಾಗುತ್ತವೆ. ನನ್ನ ಪ್ರೀತಿಯ ಗಜಲ್ ಕವಿ, ಅಂಬಲಗೆ ಸರ್, ನಿಮ್ಮನ್ನು `ಅನುವಾದಕ’ ಅನ್ನಬೇಕೋ.. ಹಿಂದಿ ಸಾಹಿತ್ಯವನ್ನು ಅರಗಿಸಿಕೊಂಡ `ಕವಿ’ ಅನ್ನಬೇಕೋ.. ಪಂಜಾಬಿ ಕಾವ್ಯವನ್ನು ಓದಿಕೊಂಡ `ಸಾಹಿತಿ’ ಅನ್ನಬೇಕೋ.. ಕನ್ನಡದ ಮಹತ್ವದ ಕವಿಗಳಲ್ಲಿ ನೀವೂ ಒಬ್ಬರು ಅಂತನ್ನಬೇಕೋ.. ನಾಟಕಕಾರ ಅನ್ನಬೇಕೋ.. ಶರಣ ಚಿಂತಕ ಅನ್ನಬೇಕೋ.. ಲಲಿತಕಲೆಯನ್ನು ಪ್ರೀತಿಸುವವರು ಅಂತನ್ನಬೇಕೋ.. ಹೌದು ಸಾರ್, ನಿಮ್ಮನ್ನು ಏನೂಂತ ಕರೀಬೇಕೂ ಅನ್ನೋದೇ ಗೊತ್ತಾಗುತ್ತಿಲ್ಲ. ಗಜಲ್‍ಗಳನ್ನು ಹಿಂದಿಯಿಂದ ಕನ್ನಡಕ್ಕೆ.. ಕವಿತೆಗಳನ್ನು ಪಂಜಾಬಿಯಿಂದ ಕನ್ನಡಕ್ಕೆ -ನಾಟಕಗಳನ್ನು ಹಿಂದಿಯಿಂದ ಕನ್ನಡಕ್ಕೆ.. ಹೀಗೆ ಬೇರೆ ಬೇರೆ ಭಾಷೆಯಲ್ಲಿರುವ ಸಮೃದ್ಧ ಸಾಹಿತ್ಯವನ್ನು ಕನ್ನಡಕ್ಕೆ ತರುವುದರ ಮೂಲಕ ಕನ್ನಡ ಸಾಹಿತ್ಯ ಲ

ಅಂಬೇಡ್ಕರರನ್ನು ಅರಿಯುವುದೆಂದರೆ…

ಇಮೇಜ್
ಅರಕಲಗೂಡು ಜಯಕುಮಾರ್. ಪತ್ರಕರ್ತ ಅಂಬೇಡ್ಕರರನ್ನು ಅರಿಯುವುದೆಂದರೆ… ಭಾರತದ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ‘ಮೀಸಲಾತಿ’ ನಿಗದಿಯಾಗಿದ್ದು ಹಿಂದುಳಿದ ವರ್ಗದವರಿಗೆ, ಅದೂ ದಕ್ಷಿಣ ಭಾರತದಲ್ಲಿ ಶಾಹು ಮಹಾರಾಜ ಇಚ್ಛಾಶಕ್ತಿಯ ಫಲ. ನಂತರ ಮೈಸೂರು ಸಂಸ್ಥಾನದಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಡುವ ನಿರ್ದಾರ ಪ್ರಕಟವಾದಾಗ ಪ್ರಖರವಾಗಿ ವಿರೋಧ ವ್ಯಕ್ತಪಡಿಸಿದ ದಿವಾನ್ ವಿಶ್ವೇಶ್ವರಯ್ಯ ದಿವಾನ ಗಿರಿಗೆ ರಾಜೀನಾಮೆ ಒಗೆದು ಹೊರ ಬಿದ್ದರು. ಆದರೆ ಇವತ್ತಿಗೂ ಅರಿವುಗೇಡಿ ಮಂದಿ ಅವರ ಚಿತ್ರಗಳನ್ನಿಟ್ಟುಕೊಂಡು ದೇವರಂತೆ ಪೂಜಿಸುತ್ತಾರೆ ಎಂಬುದು ವಿಷಾದನೀಯ.  ಮುಂದೆ ಕಾಂಗ್ರೆಸ್ ಸರ್ಕಾರ ಬಂದಾಗ ಮುಖ್ಯಮಂತ್ರಿಗಳಾದ ದೇವರಾಜ ಅರಸು ಹಿಂದುಳಿದ ವರ್ಗದ ಹಿತಾಸಕ್ತಿ ರಕ್ಷಿಸಲು ಎಲ್ ಜಿ ಹಾವನೂರು ಸಮಿತಿಯನ್ನು ರಚಿಸಿದರು. ಹಾವನೂರು ವರದಿಯ ಫಲ ಇವತ್ತು ಉದ್ಯೋಗ ಮತ್ತು ಶಿಕ್ಷಣದಲ್ಲಿ ಹಿಂದುಳಿದ ವರ್ಗ ಮೀಸಲಾತಿಯನ್ನು ಅನುಭವಿಸುತ್ತಿದೆ. ಆದರೆ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ದಲಿತರಿಗಿಂತಲೂ ಹೆಚ್ಚು ಪ್ರಮಾಣದ ಮೀಸಲಾತಿಯನ್ನು ಹಿಂದುಳಿದ ವರ್ಗದವರಿಗೆ ನೀಡಲಾಗಿದೆ (ಶೇ. 27). ಆದರೆ ಗುಂಪುಗಾರಿಕೆ, ಸ್ವಾರ್ಥ ಹಿತಾಸಕ್ತಿ, ಅರಿವಿನ ಪ್ರಜ್ಞೆ, ಸಂಘಟನೆಯ ಕೊರತೆ ಇರುವುದರಿಂದ  ಈ ಮೀಸಲಾತಿಯ ಪೈಕಿ ಸುಮಾರು ಶೇ. 4ರಷ್ಟು ಪ್ರಮಾಣವನ್ನು ಮಾತ್ರ ಅನುಭವಿಸುತ್ತಿದ್ದಾರೆ. ಹಿಂದುಳಿದ ವರ್ಗದವರು ಸದಾ ಕಾಲಕ್ಕೂ ನೆನಪಿಟ್ಟು

`ಗಿರಿ’ಸಾಲು ನಡುವೆ ಈ `ಹೊನ್ನ’ಕಲ್

ಇಮೇಜ್
ಮಹಿಪಾಲರೆಡ್ಡಿ ಮುನ್ನೂರ್  `ಗಿರಿ’ಸಾಲು ನಡುವೆ ಈ `ಹೊನ್ನ’ಕಲ್ ಒಂದಿಷ್ಟೂ ಸುಳ್ಳಲ್ಲ.. ಆತ ಅಕ್ಷರಶಃ ಅಭಿಜಾತ ಪ್ರತಿಭೆ. ಅದ್ಭುತ ಬರಹಗಾರ. ಆರೋಗ್ಯ ಇಲಾಖೆಯಲ್ಲಿ ನೌಕರಿಯೆಂಬೋ ನೌಕರಿಯನ್ನು ಹೊದ್ದುಕೊಂಡೇ , ಜತನದಿಂದ ಅದಕ್ಕೆ ಗಂಟುಬಿದ್ದು, ಇಲಾಖೆ ಕಳಿಸಿದ ಊರುಗಳಿಗೆ ಹೋಗಿ.. ತಿರುಗಾಡಿ.. ಸುಸ್ತಾಗಿ.. ಮನೆಯ ಮೂಲೆಯಲ್ಲಿ ನಿಂತು ಒಂದು ಕಪ್ಪು ಚಹಾ ಕುಡಿದು.. ಹಾಗೇ ಸುಮ್ಮನೆ ಕೂಡು ಎಂದು ಕೂಡಿಸಿದರೂ... ಅಲ್ಲಿಯೇ ಕುಂತಲ್ಲಿಯೇ ಒಂದು ಕವಿತೆಯನ್ನೋ.. ಚುಟುಕನ್ನೋ.. ಲಲಿತ ಪ್ರಬಂಧವನ್ನೋ.. ಇದೆಲ್ಲ ಹೊರತಾಗಿಯೂ ಯಾವುದೋ ರಾಜ್ಯದ ಗಡಿಯ ರೇಖೆಯನ್ನು ಮುಟ್ಟಿ ಬರುವ ನಿರ್ಧಾರವನ್ನೋ.. ಮಾಡು ಮಾಡುತ್ತಲೇ ಪುರುಸೊತ್ತಿಲ್ಲದೇ ಓದಲು.. ಬರೆಯಲು.. ಸವುಡಿಲ್ಲದೇ ತೊಡಗುವ ಈತ ಸಗರನಾಡಿನ ಸನ್ಮಿತ್ರ.  ಹಾಗೇ ನೋಡಿದರೆ. ಅವರೊಬ್ಬ ಆರೋಗ್ಯ ಇಲಾಖೆಯ ಶಿಕ್ಷಣ ನೀಡುವ ಕಾಯಕದಲ್ಲಿ ತೊಡಗಿರುವ ಪಕ್ಕಾ ನೌಕರಸ್ಥ. ಆದರೆ, ಸಾಹಿತ್ಯದಲ್ಲಿ ಏನು ಗೊತ್ತಿಲ್ಲ ಹೇಳಿ?  ಹೌದು, ಅವರು ಗಳಿಸಿರುವ ಜ್ಞಾನ ಮತ್ತು ಅದರ ವಿಸ್ತಾರ ಬಹು ದೊಡ್ಡದು. ಚುಟುಕು ಬರೆಯುತ್ತಲೇ ನಾಡಿನಲ್ಲಿ ಹೆಸರು ಮಾಡಿದ್ದಾರೆ.. ಲಲಿತ ಪ್ರಬಂಧ ಬರೆದು ಬರೆದು ಪ್ರಬಂಧಕಾರರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಕವಿತೆಗಳನ್ನು ರಚಿಸಿ ತಮ್ಮ ಪ್ರತಿಭೆಯ ವಿಸ್ತಾರದ ಹರಿವು ಹೆಚ್ಚಿಸಿಕೊಂಡಿದ್ದಾರೆ. ಅಷ್ಟೇ ಏಕೆ, ಹೊರ ರಾಜ್ಯಗಳಿಗೆ ಪ್ರವಾಸ ಹೋಗಿ, ಬಂದು ಪ್ರವಾ

ಅನುಭವದ ಪಕ್ಕಾತನ

ಇಮೇಜ್
ಮಹಿಪಾಲರೆಡ್ಡಿ ಕಾಲಂ ಬಹುಶಃ 60 ರಿಂದ 80 ರ ದಶಕದಲ್ಲಿ ಬರೆಯಬಹುದಾದ ಕಥಾ ವಸ್ತುವನ್ನೊಳಗೊಂಡ `ತೃಪ್ತಿ’ ಎನ್ನುವ ಕಥಾ ಸಂಕಲನವನ್ನು ಕೊಟ್ಟವರು ಕಥೆಗಾರ  ಸುಬ್ರಾವ ಕುಲಕರ್ಣಿ. `ತೃಪ್ತಿ’ ಕಥಾ ಸಂಕಲನದ ಎಲ್ಲಾ ಕತೆಗಳನ್ನು ಓದಿದ ನಂತರ, ಮೊದಲ ಗಿಕ್ಕಿನಲ್ಲಿಯೇ ಹೇಳಬಹುದಾದ ಸಂಗತಿಯೆಂದರೆ, ಸಾಮಾಜಿಕ ಸಭ್ಯತೆ ಹಾಗೂ ಸೌಜನ್ಯಗಳ ಚೌಕಟ್ಟು.. ಇದರೊಳಗೆ ಅಪೇಕ್ಷಿತ ರಮಣೀಯತೆಯನ್ನು ಸಾಧಿಸುವ ಕೌಶಲ್ಯವನ್ನು ಕಥೆಗಾರ   ಸುಬ್ರಾವ ಕುಲಕರ್ಣಿ   ಹೊಂದಿದ್ದಾರೆ. ಬಹುಶಃ ಇಲ್ಲಿನ ಕತೆಗಳನ್ನು ಓದಿಯಾದ ಮೇಲೆ ಅನಿಸಿದ್ದು ಇಷ್ಟು. ಸಾಮಾಜಿಕವಾಗಿ ಒಪ್ಪಿತವಾದ ಮೌಲ್ಯ ಮತ್ತು ಆದರ್ಶಗಳ ಬಗ್ಗೆ ಶ್ರದ್ಧೆಯನ್ನು ಬಲಗೊಳಿಸುವುದಿದೆಯಲ್ಲ.. ಅದು ಕತೆಗಾರ   ಸುಬ್ರಾವ ಕುಲಕರ್ಣಿ ಅವರ ಆಶಯವಾಗಿರುವುದೇ ಇದಕ್ಕೆ ಕಾರಣ. `ತೃಪ್ತಿ’ ಸಂಕಲನದ ಕೆಲ ಕತೆಗಳಲ್ಲಿ ಗಾಢವಾದ ಧಾರ್ಮಿಕ ಶ್ರದ್ಧೆಯಿಂದ ಬದುಕಿನ ವ್ಯವಹಾರಗಳನ್ನೆಲ್ಲ ಪರಿಭಾವಿಸುವ ವ್ಯಾಖ್ಯಾನಿಸುವ, ಬೆಲೆ ಕಟ್ಟುವ ಸಾತ್ವಿಕ ಮನಸ್ಸು  ಸುಬ್ರಾವ ಕುಲಕರ್ಣಿ ಅವರ ಕಥೆಗಳಲ್ಲಿ ರೂಪು ತಳೆಯುವ ಅನುಭವವನ್ನು ನಿಯಂತ್ರಿಸುತ್ತಿರುವಂತೆ, ನಿರ್ದೇಶಿಸುತ್ತಿರುವಂತೆ ಅನಿಸುತ್ತದೆ. ಶ್ರದ್ಧೆ, ನಂಬಿಕೆಗಳನ್ನು ಪ್ರಶ್ನಿಸುವ ಸನ್ನಿವೇಶ, ಸಂದರ್ಭಗಳು ಎದುರಾಗುವ ತೃಪ್ತಿ ಕತೆಗಳಲ್ಲಿ ಆ ಸಾಂಪ್ರದಾಯಿಕ ಮೌಲ್ಯಗಳ ಚೌಕಟ್ಟಿನಲ್ಲಿಯೇ ಅದಕ್ಕೆ ಪರಿಹಾರವನ್ನು ಹುಡುಕುವ, ಸೂಚಿಸುವ ಮಾರ್ಗಸೂಚಿಯಂತಹ ನಿಲು
ಇಮೇಜ್
ಮಹಿಪಾಲರೆಡ್ಡಿ ಮುನ್ನೂರ್. ಲೇಖಕರು, ಪತ್ರಕರ್ತರು ಮಹಿಪಾಲರೆಡ್ಡಿ ಮುನ್ನೂರ್ ಅವರ ಮೈನಾ ಕಾಲಂ ನಿರೀಕ್ಷಿಸಿ....

ಕಪ್ಪು ಕಡಲು

ಇಮೇಜ್
ವಿಜಯಭಾಸ್ಕರ  ಕಪ್ಪು ಕಡಲಿನ ಕೆಂಪು ಕನಸಿನ ನೀಳ ಕಣ್ಣೊಳಗೆ. ತಾವರೆಯ ಮುತ್ತಿಡಿದು ನಿಂತ ಕಡಲ ಕಿನಾರ ಚಿಪ್ಪಿನಲ್ಲಿ ಹುಯ್ದ ಮಳೆಯ ಹನಿಗಳ ಲೆಕ್ಕದ ರುಜು. ಕಾದ ಎದಗೆ ಬಾಚುವ ಕೈಗಳ ಹಿಂದೆ ಹೆಪ್ಪುಗಟ್ಟಿದ ಪ್ರೀತಿ ನರಳುತ್ತಿದೆ. ದುಂಬಲು ಮಾತಿನ ತೊದಲು ನುಡಿಗೆ ಹೈರಾಣವಾಗಿದೆ ಜೀವ. ಕೆನ್ನೆಯ ರಂಗು ಹೇಳಿತ್ತಿದೆ ಸಾವಿರ ರಕ್ತಸಿಕ್ತ ಕರಾಳ ಚರಿತೆಯನು. ಕೆಂಗೆಡದೆ ಕೆಂಡನೊತ್ತು ನಲುಮಿಸಿದರು. ಸೊಬಗಿನ ಉತ್ತರ ಮೌನಿಸಿದೆ. ಹೃದಯದಾ ಶ್ರೀಮಂತಿಕೆ ನೀ! ಆವರಿಸು ಬಂದು ಕಳೆದು ಹೋಗುವ ಮುನ್ನ. ಅವಿತ ಕನಸೊಳಗೆ ನಾ ಬೆಂದಿರುವೆ! ಬಿಸಿಯುಸುರು ನಿಲ್ಲುವ ಕ್ಷಣಕ್ಕೆ ಬಾ!  ಬೀರುವ ನಗುವೋಂದು ಸಾಕು...  ಮಣ್ಣಲ್ಲಿ ಅವಿತು ಹೋಗಲು.

ವಿಜಯಯಾನದ ಕವಿತೆ

ಇಮೇಜ್
ವಿಜಯಭಾಸ್ಕರ  ಕೆಲ ಕ್ಷಣಗಳನ್ನು ಕಟ್ಟಿಕೊಳ್ಳಲು ಹಪಿ ಹಪಿಸುವೆ, ತಡಕಾಡುವೆ. ಸಂಜೆ ಮತ್ತಿನ ಜೇನಿಗೆ ಕುಪ್ಪಳಿಸುವೆ. ಕಾದ ಎದೆಗೆ ಕೆಂಡದ ನೋಟಕ್ಕೆ ಕರಗುವೆ. ಕೊಂದ ನಲುಮೆಗೆ ಜೀವ ತೆಯುವೆ. ಆ ಕೆಲ ಕ್ಷಣಕ್ಕೆ ಕಾಲವರಣಿಸಿದರು  ಸಿಕ್ಕದ್ದು ಬರೀ ಮಸಿ,ಮಣ್ಣು. ಆ ಅಗಾಧ ನಲುಮೆ  ಇರುವುದು ಸತ್ಯವಾ!? ಹೊಮ್ಮುವ ನೆನಪಿಗೆ ಚಿಲುಮೆಯ ಆಗಸದ ಒಲವು. ಉಸಿರು ರಾತ್ರಿಗೆ ಜಾರಲಿದೆ. ಕನಸು ಮಾಯಾವಾಗಲಿವೆ. ಶಿಕ್ಷದ ಸಮಯ ಕಳೆದ ಕ್ಷಣಕ್ಕೆ ಸರಿದುಗಿದೆ. ಮಧ್ಯ ರಾತ್ರಿಯ ಬೆವರು ಹನಿ ಬಾಟಲಿಯ ನುಕು ನುಗ್ಗಲಿ ಅವಿತು ಬೆರೆತಿದೆ. ಮತ್ತಿನ ಹಗುರ ಮೈಯಿಗೆ ಕಮಟು ವಾಸನೆಯ ಹರುಷದ ನಿಷೆಯ ಹೊಸ ವರುಷ... ಮರೆತು ಕರಗುವ ನೋವಿನ ಪದಕ್ಕೆ ತೊದಲು ಗುಂಗು.... ಕುಡಿಟ್ಟ ಆಸೆಗಳಿಗೆ ಅಂದು ಬಿಡುಗಡೆ ದಿನ ನಿಜ ಅದು ನನ್ನದಲ್ಲದ ಆಸೆ. ಯಾಕೀ ಮೌನ ಬಳಲಿದ ಮನಕ್ಕೆ ಮತ್ತಿಷ್ಟು ಉದ್ಗರದ ಯಾತನೆ. ಜಪಕ್ಕಿಗ ಸಮಯವಿಲ್ಲ ಕೊರಳಲ್ಲಿ ಆಯಾತಪ್ಪಿ ಎದೆಯಾಚಗೆ ಪಸರಿಸಿದ ತುಟಿ ಮುತ್ತು. ಯಾರದ್ದು ಆ ನೆರಳು ಬಿಗಿದಪ್ಪುಗೆಯ ರಾತ್ರಿ ಮತ್ತೆ ಆ ನೆರಳಿನ ಆಕೃತಿ ಯಾರದ್ದು.?