ವಿಜಯಯಾನದ ಕವಿತೆ





ವಿಜಯಭಾಸ್ಕರ 

ಕೆಲ ಕ್ಷಣಗಳನ್ನು ಕಟ್ಟಿಕೊಳ್ಳಲು
ಹಪಿ ಹಪಿಸುವೆ, ತಡಕಾಡುವೆ.
ಸಂಜೆ ಮತ್ತಿನ ಜೇನಿಗೆ ಕುಪ್ಪಳಿಸುವೆ.
ಕಾದ ಎದೆಗೆ ಕೆಂಡದ ನೋಟಕ್ಕೆ ಕರಗುವೆ.
ಕೊಂದ ನಲುಮೆಗೆ ಜೀವ ತೆಯುವೆ.
ಆ ಕೆಲ ಕ್ಷಣಕ್ಕೆ ಕಾಲವರಣಿಸಿದರು 
ಸಿಕ್ಕದ್ದು ಬರೀ ಮಸಿ,ಮಣ್ಣು.

ಆ ಅಗಾಧ ನಲುಮೆ 
ಇರುವುದು ಸತ್ಯವಾ!?
ಹೊಮ್ಮುವ ನೆನಪಿಗೆ
ಚಿಲುಮೆಯ ಆಗಸದ ಒಲವು.
ಉಸಿರು ರಾತ್ರಿಗೆ ಜಾರಲಿದೆ.
ಕನಸು ಮಾಯಾವಾಗಲಿವೆ.
ಶಿಕ್ಷದ ಸಮಯ ಕಳೆದ ಕ್ಷಣಕ್ಕೆ
ಸರಿದುಗಿದೆ.



ಮಧ್ಯ ರಾತ್ರಿಯ
ಬೆವರು ಹನಿ
ಬಾಟಲಿಯ ನುಕು ನುಗ್ಗಲಿ ಅವಿತು ಬೆರೆತಿದೆ.
ಮತ್ತಿನ ಹಗುರ ಮೈಯಿಗೆ
ಕಮಟು ವಾಸನೆಯ ಹರುಷದ ನಿಷೆಯ ಹೊಸ ವರುಷ...
ಮರೆತು ಕರಗುವ ನೋವಿನ ಪದಕ್ಕೆ ತೊದಲು ಗುಂಗು....


ಕುಡಿಟ್ಟ ಆಸೆಗಳಿಗೆ
ಅಂದು ಬಿಡುಗಡೆ ದಿನ
ನಿಜ ಅದು ನನ್ನದಲ್ಲದ ಆಸೆ.

ಯಾಕೀ ಮೌನ
ಬಳಲಿದ ಮನಕ್ಕೆ ಮತ್ತಿಷ್ಟು
ಉದ್ಗರದ ಯಾತನೆ.

ಜಪಕ್ಕಿಗ ಸಮಯವಿಲ್ಲ
ಕೊರಳಲ್ಲಿ ಆಯಾತಪ್ಪಿ
ಎದೆಯಾಚಗೆ ಪಸರಿಸಿದ ತುಟಿ ಮುತ್ತು.

ಯಾರದ್ದು ಆ ನೆರಳು
ಬಿಗಿದಪ್ಪುಗೆಯ ರಾತ್ರಿ
ಮತ್ತೆ ಆ ನೆರಳಿನ ಆಕೃತಿ
ಯಾರದ್ದು.?


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಊರು ಹಳ್ಳಿ..

ಕಪ್ಪು ಕಡಲು

ನನ್ನೂರಿನಲ್ಲಿ 'ಎಂ ಎಂ ಕಲಬುರಗಿ'..