ಕಪ್ಪು ಕಡಲು
ವಿಜಯಭಾಸ್ಕರ
ಕಪ್ಪು ಕಡಲಿನ
ಕೆಂಪು ಕನಸಿನ ನೀಳ ಕಣ್ಣೊಳಗೆ.
ತಾವರೆಯ ಮುತ್ತಿಡಿದು ನಿಂತ ಕಡಲ ಕಿನಾರ
ಚಿಪ್ಪಿನಲ್ಲಿ ಹುಯ್ದ ಮಳೆಯ ಹನಿಗಳ ಲೆಕ್ಕದ ರುಜು.
ಕಾದ ಎದಗೆ ಬಾಚುವ ಕೈಗಳ ಹಿಂದೆ ಹೆಪ್ಪುಗಟ್ಟಿದ ಪ್ರೀತಿ ನರಳುತ್ತಿದೆ.
ದುಂಬಲು ಮಾತಿನ ತೊದಲು ನುಡಿಗೆ ಹೈರಾಣವಾಗಿದೆ ಜೀವ.
ಕೆನ್ನೆಯ ರಂಗು ಹೇಳಿತ್ತಿದೆ ಸಾವಿರ ರಕ್ತಸಿಕ್ತ ಕರಾಳ ಚರಿತೆಯನು.
ಕೆಂಗೆಡದೆ ಕೆಂಡನೊತ್ತು ನಲುಮಿಸಿದರು.
ಸೊಬಗಿನ ಉತ್ತರ ಮೌನಿಸಿದೆ.
ಹೃದಯದಾ ಶ್ರೀಮಂತಿಕೆ ನೀ!
ಆವರಿಸು ಬಂದು ಕಳೆದು ಹೋಗುವ ಮುನ್ನ.
ಅವಿತ ಕನಸೊಳಗೆ ನಾ ಬೆಂದಿರುವೆ!
ಬಿಸಿಯುಸುರು ನಿಲ್ಲುವ ಕ್ಷಣಕ್ಕೆ ಬಾ!
ಬೀರುವ ನಗುವೋಂದು ಸಾಕು...
ಮಣ್ಣಲ್ಲಿ ಅವಿತು ಹೋಗಲು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ