ನನ್ನೂರಿನಲ್ಲಿ 'ಎಂ ಎಂ ಕಲಬುರಗಿ'..





ದು ರಾತ್ರಿ 9:30 ಆಗಿರಬಹುದು.ಡಾ.ಎಂ ಎಂ ಕಲಬುರಗಿ ನನ್ನತ್ತ ಧಾವಿಸಿ ಬರುತ್ತಾ  ಬಿಡು ಮರಿ ಬಿಡು. ನನ್ನ ಬ್ಯಾಗ್ ನಾನೇ ಹಿಡಿದುಕೊಳ್ಳುವೆ ಎಂದು ನಾಜೂಕಾಗಿ ನನ್ನ ಕೈಯಲ್ಲಿದ್ದ ಅವರ ಕೈ ಚೀಲವನ್ನು ತೆಗೆದುಗೊಂಡ್ರು. ಸೇಡಂನ ವಚನ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸೇಡಂ ತಾಲೂಕಿಗೆ ಎಂ ಎಂ ಕಲಬುರಗಿ ಬಂದಿದ್ದರು. ನಾನಿನ್ನು ಆಗ ಎಂಟನೇಯ ತರಗತಿ ಓದುತ್ತಿದ್ದೆ‌. ಎಂ ಎಂ ಕಲಬುರಗಿ ಯಾರು. ಅವರು ಏನಿದ್ರು ಅಂಥ ಯಾವುದು ಗೊತ್ತಿರದೆ ನನಗೆ ಆ ದಿವಸ ಅವರ ಮಾತು ಕೇಳಿ ತಲ್ಲಿನನಾದೆ. ಹೀಗು ಸರಳ ವ್ಯಕ್ತಿ ಇರುತ್ತಾರಾ. ತೀಕ್ಷ್ಣವಾಗಿ  ಮಾತನಾಡುವ ಕಲಬುರಗಿ ಅವರು ನನಗೆ ಆ ಒಂದು ದಿನದ ಬಿಗ್ ಬಿ ಯಾಗಿ ಕಂಗೊಳಿಸುತ್ತಿದ್ದರು.

ವಚನ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕಾರ್ಯಕ್ರಮ ಮುಗಿಯಿತು. ಆವತ್ತು ರಾತ್ರಿ 9 ಕ್ಕೆ  ಬಿದರ್-ಯಶವಂತಪುರ್ ರೈಲ್ವೆಗೆ ಎಂ ಎಂ ಕಲಬುರಗಿ ಮತ್ತು ಅವರ ಪತ್ನಿ ಅವರನ್ನು ಬಿಡಬೇಕಿತ್ತು. ಅಪ್ಪ ನನ್ನನ್ನು ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಹೋದರು.

ಅಷ್ಟೇಲ್ಲಾ ಭಾಷಣ ಮಾಡಿದ ಎಂ ಎಂ ಕಲಬುರಗಿ ಅವರು ಎಸಿ ರೂಂ ನಲ್ಲಿ , ಗೆಸ್ಟ್ ರೂಂ ನಲ್ಲಿ ಕುಳಿತುಕೊಳ್ಳುತ್ತಾರೆ ಎಂದು ತಿಳಿದ ನನಗೆ ಅವರ ಸರಳತೆ ನೋಡಿ ಬೆರಗಾದೆ. ಸಾಮಾನ್ಯ ಜನರಂತೆ ಅವರು ಬೆಂಚ್ ಪಕ್ಕದಲ್ಲಿ ಬ್ಯಾಗ್ ಇಟ್ಟು ನಿಂತಿದ್ದರು. ಅವರ ಪತ್ನಿ ಕೂರಲು ಸ್ಥಳವಿಲ್ಲದೆ. ಕಂಬದ ಕಟ್ಟೆಗೆ ವರಗಿ ಕುಳಿತಿದ್ದರು. ಇವರದು  ಅದೆಂಥಾ ಸರಳ ಜೀವನಪ್ಪ ಎಂದು ಆಶ್ಚರ್ಯವಾದೆ. ಹಿರಿಯ ಸಂಶೋದಕರು, ಚಿಂತಕರು, ಡಾಕ್ಟರೇಟ್ ಎಲ್ಲವನ್ನೂ, ಎಲ್ಲ ಬಲ್ಲವರು ನಮ್ಮೂರ ರೈಲ್ವೆ ನಿಲ್ದಾಣದಲ್ಲಿ ನಮ್ಮೊಡನೆ ಇದ್ದ ಆ ಅರ್ಧ ಗಂಟೆ ಸಮಯ ನನ್ನ ಜೀವನದಲ್ಲಿ ಮರೆಯಲು ಅಸಾಧ್ಯ..

ಹೀಗೆ ಅಣ್ಣನನ್ನು ರೈಲ್ವೆ ನಿಲ್ದಾಣಕ್ಕೆ ಅದೇ ಬಿದರ್ -  ಯಶವಂತಪುರ ರೈಲಿಗೆ ಬಿಡುವುದಕ್ಕೆ ಬಂದಾಗ ಇದೆಲ್ಲಾ ನೆನಪಾಯಿತು...

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಊರು ಹಳ್ಳಿ..

ಕಪ್ಪು ಕಡಲು