ಪೋಸ್ಟ್‌ಗಳು

ವಿಜಯಯಾನದ ಪಯಣ

ಬಾಬಾಸಾಹೇಬರ ಆಶಯಗಳಿಗೆ ಅಡ್ಡಿಯಾಗುತ್ತಿರುವರು ಇಂದು ಅವರ ಅಡ್ಡಪಲ್ಲಕ್ಕಿ ಹೊತ್ತು ಬರುತ್ತಿದ್ದಾರೆ....!!ಹುಷಾರ್..!

ಇಮೇಜ್
        ಕೈಲಾಸ ಸೂರವಾರ   ಪ್ರೀತಿಯ ಬಹುಜನ ಬಂದುಗಳೇ...   ಭಾರತದ ಪ್ರಜಾಪ್ರಭುತ್ವದ ಪಿತಾಮಹ ನಮ್ಮೆಲ್ಲರ ವಿಮೋಚಕರೂ ಆದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ದೇಶ ಈಗ ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದೆ .ಭಾರತದ ಬಹುಜನರಂತೂ ಬಾಬಾಸಾಹೇಬರ ಜನ್ಮದಿನವನ್ನು ವಷ೯ಪೂರ ಆಚರಿಸುತ್ತಾರೆ .ಬಹುಶಃ ಜಗತ್ತಿನ ಯಾವ ವ್ಯಕ್ತಿಗೂ ಇಷ್ಟೊಂದು ಹುಟ್ಟುಹಬ್ಬದ ಕಾಯ೯ಕ್ರಮಗಳನ್ನು ಯಾರೂ ಮಾಡುವುದಿಲ್ಲ.ಆ ಕಾರಣಕ್ಕೆ ಬಾಬಾಸಾಹೇಬರ ಜನ್ಮದಿನವನ್ನು "ವಿಶ್ವ ಜ್ಞಾನದ ದಿನ "ಎಂದೂ ಗುರುತ್ತಿಸಲಾಗಿದೆ. ಸಾಮಾನ್ಯವಾಗಿ ಈವರಿಗೆ ಬಾಬಾಸಾಹೇಬರ ಹುಟ್ಟುಹಬ್ಬವನ್ನು ಜಗತ್ತಿನಾದ್ಯಂತ ಬಹುಜನರು ಮತ್ತು ಅವರ ಸಂಘಟನೆಗಳು ಆಚರಿಸುತ್ತಿದ್ದರು .ಇನ್ನು ಕೆಲವು ರಾಜಕೀಯ ಪಕ್ಷಗಳು ಮತ್ತು ಅವರು ಸರಕಾರಗಳು ವಷಕ್ಕೊಮ್ಮೆ ಸಾಂಕೇತಿಕವಾಗಿ ಆಚರಿಸಿ ಕೈ ಬಿಡುತ್ತಿದ್ದರು. ಆದರೀಗ ಬಾಬಾಸಾಹೇಬರ ಜನ್ಮದಿನದ ವಷ೯ದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪೈಪೋಟಿ ಮೇಲೆ ವಷ೯ಪೂತಿ೯ ದೇಶದ್ಯಂತ ಬಹೃತ ಪ್ರಮಾಣದಲ್ಲಿ ಆಚರಿಸುತ್ತಿವೆ....!ಅಂಬೇಡ್ಕರ್  ಸಾಧನೆಗಳನ್ನು ಬಾಯಿತುಂಬಾ ಹೊಗಳುತ್ತಿವೆ ....!ಇದಕ್ಕಾಗಿ ದಲಿತ ಬುದ್ದಿಜೀವಿಗಳನ್ನೆ ಸೇರಿಸಿಕೊಂಡು ಅಂಬೇಡ್ಕರ್  ಜನ್ಮದಿನಾಚರಣಾ ಸಮಿತಿಗಳನ್ನು ರಚಿಸಿಕೊಂಡಿವೆ...! ಡಾ।।.ಬಿ.ಆರ್.ಅಂಬೇಡ್ಕರ್  ಬಗ್ಗೆ ಅವರ ಜನ್ಮದಿನದ ಬಗ್ಗೆ ಈವರೆಗೆ ಎಂದೂ ಇಲ್ಲದ ಕಾಳಜಿ ಇವರಿಗೆ ಇಂದೇಕೆ ಬ

ಅಕ್ಕನ ಮದುವೆ ಮಾಡುವ ಚಿಂತೆ..

ಇಮೇಜ್
ಬೆಳಗ್ಗೆ ಇದ್ದ ಜ್ವರ ಸ್ವಲ್ಪ ಕಡಿಮೆಯಾಗಿ ಪಡಸಾಲೆಯಲ್ಲಿ ಕುಳಿತ ಶಾಣಪ್ಪನನ್ನ ಬೆನ್ನಿಗೆ ಬೀಗಿ ಬಿಸಿಯ ಕೈಗಳು ಮುಟ್ಟಿದ ತಕ್ಷಣ ನೋಡಿದ . ದೊಡ್ಮಗಳು , ಹೇಮಳ ಮುಖ ನೋಡಿದ ಮೇಲೆ ಇದ್ದ ಅಷ್ಟೂ ಜ್ವರ ಹೊರಟು ಹೋದಂತೆ ಶಾಣಪ್ಪ ಛಾ ಹೀರುತ್ತಾ ಮಕ್ಕಳ ಹತ್ತಿರ ಹರಟುತ್ತಾ ಕೂತ . ಆದರೆ ಹೇಮ ಮಾತ್ರ ಅತ್ತ ಪ್ರೀತಿ ಫಲಸದೇ , ಅಪ್ಪನನ್ನು ಒಪ್ಪಸದೇ ನಿರಾರ್ಶಿತಳಾಗಿ ಸುಮ್ಮನಿದ್ದಳು . ಕಾಸಿಂ‌ ಎಂದಿನಂತೆ ತನ್ನ ಕೈಂಕರ್ಯ ಮುಗಿಸಿ ಶಾಣಪ್ಪನ ಮನೆ ಮುಂದಿನಿಂದ ಹಾದು ಹೋಗುವಾಗ ಹೇಮ ತನ್ನ ಕಣ್ಣಿಗೆ ಬಿದ್ದಳು .  ಕಾಸಿಂನ ಮನದಲ್ಲಿ ಬುಗಿಲೇಳುತ್ತಾ ಇರುವ ಸಮಯದಲ್ಲೆ ಗೌಡರ ಅಕ್ಕ ಪಕ್ಕದ ಮನೆಯವರು ಕಾಸಿಂ ಮೇಲೆ ಹೇಮಳಿಗೆ ಪಿರೂತಿ ಹುಟೈತೆ ಎನ್ನುವ ಗೂಮಾನಿಯ ಕೂಗು ಅದಾಗಲೇ ಕಾಸಿಂನ ಕಿವಿಗೆ ರಾಚಿತ್ತು . ಕಾಸಿಂನ ಮನ ಪೋದೆಯಲ್ಲಿ ಹಸಿ ಮಣ್ಣಿಗೆ ಮೊಳಕೆಯೋಡೆಯುವ ಬೀಜದಂತೆ ತನಗರಿವಿಲ್ಲದೆ ಹೇಮಳ ಕಣ್ಣೋಟಕ್ಕೆ ಕರಗಿದ್ದ, ಮಂಕಾಗಿದ್ದ, ಹೇಮಳ ಮನೆ ಮುಂದೆ ನಿದಾನವಾಗಿ ಚಲಿಸುತ್ತಾ ಹೋಗುತ್ತಿದ್ದ. ಕಾಲ ದಿನೇ ದಿನೇ ಬೀಕರಿಸಿತ್ತಾ ಹೋದಂತೆ ಹೇಮ ಮನೆ‌ ಜವಬ್ದಾರಿಗೆ‌ ಮುಂದಾದಳು. ಅಕ್ಕನ ಮದುವೆ ಮಾಡುವ ಚಿಂತೆ ಅಪ್ಪನಂತೆ ತಾನೂ ಚಿಂತಿಸಲು ಪ್ರಾರಂಭಿಸಿದಳು . ಮನೆ ಕಡೆ ಹುಷಾರು ಎನ್ನುತ್ತಿದ್ದ ಅಮ್ಮ ಹಾಗಾಗ ಕನಸಲ್ಲಿ ಬಡಿದೆಚ್ಚರಿಸಿದಂ

ಹೇಮಳದು ಮೃದು ಮನಸ್ಸು..

ಇಮೇಜ್
ಪಾರವ್ವನ ಮಾತು ಕೇಳಿ ಮನೆಗೆ ಧಾವಿಸಿದ ಶಾಣಪ್ಪ ಒಂದೇ ಉಸಿರಿನಿಂದ ಹೇಮ,ಹೇಮ ಎಂದು ಕೂಗಲು ಶುರು ಮಾಡಿದ . ಒಳಗಿದ್ದ ಹೇಮ ಅಪ್ಪನ ಕೂಗಿಗೆ ಓಡಿ ಬಂದಳು . ಮಗಳ ಮುಖ ನೋಡಿದ ಶಾಣಪ್ಪ ಸುಮ್ಮನಾಗಿ ಕುಡಿಯಲು ನೀರು ಕೊಡು ಮಗಳೆ ಎಂದನು . ಅವರಿವರ ಮಾತು ಕೇಳಿ ತನ್ನ ಮಗಳ ಮೇಲೇಕೆ  ಸಂಶಯ ಪಡಬೇಕೆಂದು ಶಾಣಪ್ಪ ಮನಸ್ಸಿನಲ್ಲಿ ಅಂದುಕೊಂಡು ಹೇಮಳನ್ನು ಏನೂ ಕೇಳದೆ . ಸಂತೆ ಕಡೆ ಹಿಂದಿರುಗಿದ . ಪಾರವ್ವನ ಮಾತು ಅಚಲವಾಗಿ ಮನಸ್ಸಲ್ಲಿ ಉಳಿದಿದ್ದರು . ಅದನ್ನು ಸಂಶಯಾಸ್ಪದವಾಗಿ ನೋಡದೆ ಸುಮನಿದ್ದ ಶಾಣಪ್ಪನಿಗೆ ಪಾರವ್ವ ಮತ್ತು ಅವಳ ತಮ್ಮ ಮೇಲಿಂದ ಮೇಲೆ ಕಿರಿ ಕಿರಿ ನೀಡುತ್ತಾ ಹೋದರು . ಪಾರವ್ವನ ತಮ್ಮ ಮಲ್ಲೇಶನಿಗೆ ಹೇಮಳ ಮೇಲೆ ಈ ನಡುವೆ ಮನಸ್ಸಾಗಿತ್ತು . ಮಲ್ಲೇಶ ಕಾಲೇಜು ದಿನಗಳಲ್ಲೇ ಮೂರ್ ನಾಲ್ಕು ಹೆಣ್ಣುಮಕ್ಕಳ ಬಾಳಲ್ಲಿ ಉಳಿಹಿಂಡಿದ್ದಾನೆ ಎನ್ನುವ ಗೂಡು ಮಾತು ಅದಾಗಲೇ ಊರಲ್ಲಿ‌ ಹಬ್ಬಿತ್ತು ಅಷ್ಟೇ ಏಕೆ ಹೇಮಳಿಗು ಅವನ ಉಳಿ ಮನಸ್ಸು ತಿಳಿದಿತ್ತು . ಪಾರವ್ವ ಹೇಗಾದರು ಮಾಡಿ ಅವಳನ್ನು ನನ್ನ ತಮ್ಮನ ಬಾಹು ಬಂಧನಕ್ಕೆ ಸಿಲಿಕಿಸಬೇಕೆಂದು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಳು . ಹೇಮಳದು ಶುದ್ಧ ಮನಸ್ಸು . ಪಕ್ವತೆಯ ಗುಣ , ಅಚಲ  ಧೈ ರ್ಯ .  ಕಾಸಿಂನ ವಿಷಯದಲ್ಲಿ ಹೇಮ ಮೃದು ಸ್ವಭಾವದವಳು . ಹೇಮ ಕಾಸ

ಮ್ಯಾದರ ಶಾಣಪ್ಪ ಮತ್ತು ಕಾಸಿಂ..

ಇಮೇಜ್
ಮ್ಯಾ ದರ ಶಾಣಪ್ಪ ತಾನು ನೇಯ್ದ ಬುಟ್ಟಿಗಳು ವ್ಯಾಪಾರವಾಗಲಿಲ್ಲ ಎಂದು ಅರ್ಧ ಸೇದಿ ಬಿಟ್ಟ ಬೀಡಿಯನ್ನು ನೆಲಕ್ಕೆ ವರೆಸುತ್ತಾ, ಟೊಂಕದಲ್ಲಿದ್ದ ಎಲೆ, ಸುಣ್ಣ ಬಾಯಲ್ಲಿ ಹಾಕಿಕೊಂಡು ಬುಟ್ಟಿಗಳನ್ನು ಜೋಡಿಸಿ ಮ್ಯಾದರ ಗಲ್ಲಿಯ ಕಡೆ ಮುಖ ಮಾಡಿದ. ತನ್ನ ಹಿರಿಕರ ವೃತ್ತಿಯನ್ನು ಮುಂದುವರೆಸುತ್ತಾ ಹೊಟ್ಟೆಗೆ  ಆಸರೆಯಾದ ಕುಲ ಕಸುಬನ್ನು ಶ್ರದ್ಧೆಯಿಂದ ಮಾಡುತ್ತಿದ್ದ. ಊರ ಗೌಡರ ಮನೆಯ ಕಾವಲಿಯ ಬೀದಿಯ ಪಕ್ಕದಲ್ಲಿದ್ದ ಮ್ಯಾದರ ಮನೆಗಳ ನಾಲ್ಕನೇ ಮನೆಯೇ ಶಾಣಪ್ಪನದು. ಇಡೀ ಊರಲ್ಲಿಯೇ ನಾಲ್ಕು‌ಮನೆಯುಳ್ಳ ಮ್ಯಾದರ ಕುಟುಂಬಗಳ ಜೀವನಾಡಿ ಮೇದಾರ ಕಸುಬಾಗಿತ್ತು. ಶಾಣಪ್ಪನಿಗೆ ಮೂರಜನ ಹೆಣ್ಣುಮಕ್ಕಳು.ಮ್ಯಾದರ ಶಾಣಪ್ಪ ತಾನು ನೇಯ್ದ ಬುಟ್ಟಿಗಳು ವ್ಯಾಪಾರವಾಗಲಿಲ್ಲ ಎಂದು ಅರ್ಧ ಸೇದಿ ಬಿಟ್ಟ ಬೀಡಿಯನ್ನು ನೆಲಕ್ಕೆ ವರೆಸುತ್ತಾ, ಟೊಂಕದಲ್ಲಿದ್ದ ಎಲೆ, ಸುಣ್ಣ ಬಾಯಲ್ಲಿ ಹಾಕಿಕೊಂಡು, ತಾನು ನೇಯ್ದ ಬುಟ್ಟಿಗಳನ್ನು ಜೋಡಿಸಿ ಮ್ಯಾದರ ಗಲ್ಲಿಯ ಕಡೆ ಮುಖ ಮಾಡಿದ. ಮನೆ ಮುಂದೆ ಇರುವ ಬಾದಾಮಿ ಗಿಡಕ್ಕೆ ಕೇರಿಯ ಹುಡುಗರ ಕಾಟ, ಮಗಳು ವಯಸ್ಸಿಗೆ ಬಂದಳೆನ್ನುವ ಚಿಂತೆ ಶಾಣಪ್ಪನ ನಿದ್ದೆಯನ್ನು ತಿನ್ನುತ್ತಿದ್ದವು. ಮೇದರ ಜಾತಿಯಲ್ಲಿಯೇ ಇವನದು ಬಡ ಕುಟುಂಬ. ತೆಗ್ಗು ಭೂಮಿ, ಕಲ್ಲು ತೇಲಿರುವ ಹೊಲ ನೀಡಿ ಪಾಲು ಮಾಡುವಾಗ ಅಣ್ಣ-ತಮ್ಮಂದಿರೇ ಮೊಸ ಮಾಡಲಾಗಿತ್ತು. ಆದರೂ ದೃತಿಗೆಡದ ಶಾಣಪ್ಪ ಕುಲಕಸುಬು ಮೇದಾರಿಕೆಯನ್ನು  ಬಲವಾಗಿ ನಂಬಿ ಕುಟುಂಬವನ್ನು ನಡೆಸುತ್ತಿದ್ದ‌..

ನಾ ಕಂಡ ಮುದ್ದ ಪೋರಿ ಅವಳು....

ಇಮೇಜ್
                ನಾ ಕಂಡ ಮುದ್ದ ಪೋರಿ ಅವಳು....   ಮನದಲ್ಲಿ ಏನಾದರೂ ಬರೀಬೇಕು ಎಂಬ ಹಂಬಲದಲ್ಲಿ  ಯೋಚ್ನೆ ಮಾಡುತ್ತಾ ಕುತ್ತಿದ್ದಾಗ ಅಮ್ಮ ಕೈಯಲ್ಲಿ ಟೀ ಕೊಟ್ಟಾಗ ಸೂರ್ಯ ಮುಳುಗುವ ಸಮಯ ಅಂಗಳದಲ್ಲಿ ಹೆಜ್ಜೆ ಹಾಕುವಾಗ   ಮುಡ್ಡಿದ್ದೇ ಈ ಕಲ್ಪನೆಯ ಹುಡುಗಿ  ಅದ್ರಲ್ಲಿ ಬೇರೆ ರೆಡ್ಡಿ WhatsApp ನಲ್ಲಿ  ಇವತ್ತು sunday ಅಂತ message ಬೇರೆ ಮಾಡಿ ತಲೆಲಿ ಹುಳಾ ಬಿಟ್ಟಿದ್ದ ಅದ್ಕೆ ಈ ಕಥೆ ನನ್ನಲ್ಲಿ ಮೂಡಿ ಬಂತು ಥಾಂಕ್ ಯು ರೆಡ್ಡಿ ನೆನಪ ಮಾಡಿದಕ್ಕೆ...ಸರಿ ಕಥೆಗೆ ಬರೋಣ ಮಾತು ಜಾಸ್ತಿ ಆಯಿತು ಅಲ್ವ.. ಅವಳಿಗೆ  ಅಡಂಬರದ ಜೀವನ ಇಷ್ಟ ಇಲ್ಲ, ಇದ್ದದರಲ್ಲಿ  ಜೀವನ ಸಾಗಿಸಬೇಕು ಅಷ್ಟು ಸರಳ ಜೀವಿ ಅವಳು .ಅವಳು ಎಲ್ಲಾ ಹುಡುಗಿರ ತರಹ ಅವಳೂ ಫ್ಯಾಶನ್ ಮಾಡ್ಬೇಕು ಅಂತ ಯಾವತ್ತೂ    ನ್ನಿಸಿಲ್ಲ .ಅವಳು  ಚಿಕ್ಕ ಚಿಕ್ಕ ವಿಷಯದಲ್ಲಿ ಖುಷಿ ಪಡೋ ಹುಡುಗಿ .  ಬಡತನ ಕಂಡವಳ್ಳಲ್ಲ ,ಆದ್ರೂ ಅವಳು  ಶ್ರೀಮಂತ್ತೇ ಅಂತ ಯಾರಿಗೂ ತೋರಿಸಿಕೊಂಡಿಲ್ಲದ ಸರಳ ಜೀವಿ ಅವಳು. ಅವಳಿಗೆ ಪ್ರಾಣಿ, ಪಕ್ಷಿ , ಮತ್ತೆ ಹೊಲ ,ಗದ್ದೆ, ಹಸುಗಳ ಹಾಲುಕರೆಯೋದರಲ್ಲಿ ಒಲುವು ಜಾಸ್ತಿ ಮತ್ತು ಅವಳ ತೋಟದ ಹೂ ದೇವರಿಗೇ ಓರೆತು ಮಾರಾಟಕ್ಕಲ್ಲ ಅವಳು ಬೆಳೆಯೋ ತರಕಾರಿ ಬಡವರ ಊಟಕ್ಕೆ ಸೀಮಿತ ಅವಳ ಒಂತರ lady ಬುದ್ಧ ನ ಹಾಗೆ ಯಾವತ್ತು ಯಾವುದಕ್ಕೂ ಆಸೆ ಪಟ್ಟವಳಲ್ಲಆಸೆಯೇ ಕಷ್ಟ ಕ್ಕೆ ಮೂಲ ಅಂದು ಕೊಂಡವಳು ಧಾನ ಧರ್ಮ ದಲ್ಲಿ ಮೇಲುಗೈ ಅವಳದು ,ಯಾರಿಗೂ ಕೇಡು ಬಯಸದ ಜೀವ

ಬಣಗಾರ ಬಿಂಬ

ಇಮೇಜ್
ಶಿವಶಂಕರ ಬಣಗಾರ್ ಕ್ಯಾಮರಾ ಹಿಡಿದು ಹಂಪಿಯತ್ತ  ಧಾವಿಸಿ ಹೋಗುತ್ತಾರೆ ಎಂದರೆ ಅಂದು ಪೇಸ್ ಬುಕ್ ನ ಅವರ ಅಕೌಂಟ್ ನಲ್ಲಿ  'ಹಂಪಿಯ ಶಿಲ್ಪ ನಯನ ನಾಜೂಕಾಗಿ ಮಿಂಚುತ್ತಿರುತ್ತವೆ' ಶಿವಶಂಕರ ಬಣಗಾರ್ ಅವರು ತೆಗೆದಿರುವ ಹಂಪಿಯ ಪೋಟೋಗಳಲ್ಲಿ ಕೆಲ ಪೋಟೋಗಳು 'ವಿಜಯಯಾನ'ದಲ್ಲಿ ನೋಡಿ.. ಅವರ ಮಾಯಾ ಪೋಟೋಜಾಲಗಳನ್ನು ಕಂಡು ನೀವು ಹಂಪಿಯತ್ತ ಧಾವಿಸಿ.

ನನ್ನೂರಿನಲ್ಲಿ 'ಎಂ ಎಂ ಕಲಬುರಗಿ'..

ಇಮೇಜ್
ಅ ದು ರಾತ್ರಿ 9:30 ಆಗಿರಬಹುದು.ಡಾ.ಎಂ ಎಂ ಕಲಬುರಗಿ ನನ್ನತ್ತ ಧಾವಿಸಿ ಬರುತ್ತಾ  ಬಿಡು ಮರಿ ಬಿಡು. ನನ್ನ ಬ್ಯಾಗ್ ನಾನೇ ಹಿಡಿದುಕೊಳ್ಳುವೆ ಎಂದು ನಾಜೂಕಾಗಿ ನನ್ನ ಕೈಯಲ್ಲಿದ್ದ ಅವರ ಕೈ ಚೀಲವನ್ನು ತೆಗೆದುಗೊಂಡ್ರು. ಸೇಡಂನ ವಚನ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸೇಡಂ ತಾಲೂಕಿಗೆ ಎಂ ಎಂ ಕಲಬುರಗಿ ಬಂದಿದ್ದರು. ನಾನಿನ್ನು ಆಗ ಎಂಟನೇಯ ತರಗತಿ ಓದುತ್ತಿದ್ದೆ‌. ಎಂ ಎಂ ಕಲಬುರಗಿ ಯಾರು. ಅವರು ಏನಿದ್ರು ಅಂಥ ಯಾವುದು ಗೊತ್ತಿರದೆ ನನಗೆ ಆ ದಿವಸ ಅವರ ಮಾತು ಕೇಳಿ ತಲ್ಲಿನನಾದೆ. ಹೀಗು ಸರಳ ವ್ಯಕ್ತಿ ಇರುತ್ತಾರಾ. ತೀಕ್ಷ್ಣವಾಗಿ  ಮಾತನಾಡುವ ಕಲಬುರಗಿ ಅವರು ನನಗೆ ಆ ಒಂದು ದಿನದ ಬಿಗ್ ಬಿ ಯಾಗಿ ಕಂಗೊಳಿಸುತ್ತಿದ್ದರು. ವಚನ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕಾರ್ಯಕ್ರಮ ಮುಗಿಯಿತು. ಆವತ್ತು ರಾತ್ರಿ 9 ಕ್ಕೆ  ಬಿದರ್-ಯಶವಂತಪುರ್ ರೈಲ್ವೆಗೆ ಎಂ ಎಂ ಕಲಬುರಗಿ ಮತ್ತು ಅವರ ಪತ್ನಿ ಅವರನ್ನು ಬಿಡಬೇಕಿತ್ತು. ಅಪ್ಪ ನನ್ನನ್ನು ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಹೋದರು. ಅಷ್ಟೇಲ್ಲಾ ಭಾಷಣ ಮಾಡಿದ ಎಂ ಎಂ ಕಲಬುರಗಿ ಅವರು ಎಸಿ ರೂಂ ನಲ್ಲಿ , ಗೆಸ್ಟ್ ರೂಂ ನಲ್ಲಿ ಕುಳಿತುಕೊಳ್ಳುತ್ತಾರೆ ಎಂದು ತಿಳಿದ ನನಗೆ ಅವರ ಸರಳತೆ ನೋಡಿ ಬೆರಗಾದೆ. ಸಾಮಾನ್ಯ ಜನರಂತೆ ಅವರು ಬೆಂಚ್ ಪಕ್ಕದಲ್ಲಿ ಬ್ಯಾಗ್ ಇಟ್ಟು ನಿಂತಿದ್ದರು. ಅವರ ಪತ್ನಿ ಕೂರಲು ಸ್ಥಳವಿಲ್ಲದೆ. ಕಂಬದ ಕಟ್ಟೆಗೆ ವರಗಿ ಕುಳಿತಿದ್ದರು. ಇವರದು  ಅದೆಂ