ಹೇಮಳದು ಮೃದು ಮನಸ್ಸು..



ಪಾರವ್ವನ ಮಾತು ಕೇಳಿ ಮನೆಗೆ ಧಾವಿಸಿದ ಶಾಣಪ್ಪ ಒಂದೇ ಉಸಿರಿನಿಂದ ಹೇಮ,ಹೇಮ ಎಂದು ಕೂಗಲು ಶುರು ಮಾಡಿದ.

ಒಳಗಿದ್ದ ಹೇಮ ಅಪ್ಪನ ಕೂಗಿಗೆ ಓಡಿ ಬಂದಳು.
ಮಗಳ ಮುಖ ನೋಡಿದ ಶಾಣಪ್ಪ ಸುಮ್ಮನಾಗಿ ಕುಡಿಯಲು ನೀರು ಕೊಡು ಮಗಳೆ ಎಂದನು. ಅವರಿವರ ಮಾತು ಕೇಳಿ ತನ್ನ ಮಗಳ ಮೇಲೇಕೆ ಸಂಶಯ ಪಡಬೇಕೆಂದು ಶಾಣಪ್ಪ ಮನಸ್ಸಿನಲ್ಲಿ ಅಂದುಕೊಂಡು ಹೇಮಳನ್ನು ಏನೂ ಕೇಳದೆ. ಸಂತೆ ಕಡೆ ಹಿಂದಿರುಗಿದ.
ಪಾರವ್ವನ ಮಾತು ಅಚಲವಾಗಿ ಮನಸ್ಸಲ್ಲಿ ಉಳಿದಿದ್ದರು. ಅದನ್ನು ಸಂಶಯಾಸ್ಪದವಾಗಿ ನೋಡದೆ ಸುಮನಿದ್ದ ಶಾಣಪ್ಪನಿಗೆ ಪಾರವ್ವ ಮತ್ತು ಅವಳ ತಮ್ಮ ಮೇಲಿಂದ ಮೇಲೆ ಕಿರಿ ಕಿರಿ ನೀಡುತ್ತಾ ಹೋದರು.
ಪಾರವ್ವನ ತಮ್ಮ ಮಲ್ಲೇಶನಿಗೆ ಹೇಮಳ ಮೇಲೆ ನಡುವೆ ಮನಸ್ಸಾಗಿತ್ತು.

ಮಲ್ಲೇಶ ಕಾಲೇಜು ದಿನಗಳಲ್ಲೇ ಮೂರ್ ನಾಲ್ಕು ಹೆಣ್ಣುಮಕ್ಕಳ ಬಾಳಲ್ಲಿ ಉಳಿಹಿಂಡಿದ್ದಾನೆ ಎನ್ನುವ ಗೂಡು ಮಾತು ಅದಾಗಲೇ ಊರಲ್ಲಿ‌ ಹಬ್ಬಿತ್ತು ಅಷ್ಟೇ ಏಕೆ ಹೇಮಳಿಗು ಅವನ ಉಳಿ ಮನಸ್ಸು ತಿಳಿದಿತ್ತು.

ಪಾರವ್ವ ಹೇಗಾದರು ಮಾಡಿ ಅವಳನ್ನು ನನ್ನ ತಮ್ಮನ ಬಾಹು ಬಂಧನಕ್ಕೆ ಸಿಲಿಕಿಸಬೇಕೆಂದು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಳು.

ಹೇಮಳದು ಶುದ್ಧ ಮನಸ್ಸು. ಪಕ್ವತೆಯ ಗುಣ, ಅಚಲ ಧೈರ್ಯಕಾಸಿಂನ ವಿಷಯದಲ್ಲಿ ಹೇಮ ಮೃದು ಸ್ವಭಾವದವಳು. ಹೇಮ ಕಾಸಿಂ ಅನ್ಯ ಧರ್ಮಿಯವನೆಂದು ನೋಡಲಿಲ್ಲಪ್ರೀತಿ ಹಾಗೇ ಧರ್ಮ , ಜಾತಿ ನೋಡದೆ ಹಸಿರಾಗಿ ಚಿಗುರುತ್ತದೆ.
ತನ್ನ ಪ್ರೀತಿ ಕಾಸಿಂನಿಗೆ ಪ್ರಸ್ತಾಪಿಸಲಾಗದೆ‌ . ಇತ್ತ ಪಾರವ್ವ ಮತ್ತು ಮಲ್ಲೇಶನ ಕಾಟ ಅಪ್ಪನ ಹತ್ತಿರ ಹೇಳಲಾಗದೆ‌. ಹೇಮ ಒಳಗೊಳಗೆ ನರಳುತ್ತಿದ್ದಳು.

ಕಾಸಿಂ ಹತ್ತಿರ ತನ್ನ ಪ್ರೀತಿ ಹೇಳಿಕೊಂಡು. ಪ್ರೇಮಕ್ಕೆ ಧರ್ಮದ ಹಂಗಿಲ್ಲ ಎಂದು ಸಾಬೀತುಪಡಿಸಬೇಕೆಂದರೆ ಅಪ್ಪನಿಗೆ ಪ್ರೀತಿ , ಪ್ರೇಮ ಇದಾವುದು ಗೊತ್ತಿಲ್ಲ. ಅದವರಿಗು ಬೇಕಾಗಿಯೂ ಇಲ್ಲ.

ದುಡಿಮೆಯೆ ಜೀವ, ಸಂಸಾರವೇ ಸಂತೋಷ ಎಂದು ಬಾಳುತ್ತಿರುವ ತನ್ನ ತಂದೆಗೆ ನನ್ನ ಪ್ರೀತಿಯಿಂದ ಅವಮಾನವಾಗುತ್ತೊ ಎಂದು ತಿಳಿದು ಹೇಮ ಕಾಸಿಂನನ್ನ ದಿನೆ ದಿನೆ ಮರೆಯಲು ಆರಂಬಿಸಿದಳು.
ಪಾರವ್ವ ಮತ್ತು ಮಲ್ಲೇಶನ‌ ಕಹಕವಾದ ಕಣ್ಣು ಹೇಮಳ ಮೇಲೆ ಇರುತ್ತಿತ್ತು. ಅವಳ ಚಲನವಲನದ ಮೇಲೆ ಮಲ್ಲೇಶನ ಕೆಟ್ಟ ದೃಷ್ಟಿ ಹಿಂಬಾಲಿಸುತ್ತಿತ್ತು.

ಅಪ್ಪನ‌ ಶ್ರಮ , ನಮ್ಮನ್ನು ಸಲಹಲು ಪಡುವ ಕಷ್ಟ ಹೇಮ ಅರಿತಿದ್ದಳು. ಅಕ್ಕನ ಮದುವೆಗೆ ಹಣ ಕೂಡಿಡಲು ಅಪ್ಪನ ಬೇವರಿನ ಕಥೆ ಹೇಮಗೆ ಗೊತ್ತಿರುವ ಕಾರಣ ಕಾಸಿಂನ ಪ್ರೇಮ ಮತ್ತು ಮಲ್ಲೇಶನ ಕಾಟ ಹೇಳದೆ ಮೂಖವಿಸ್ಮಿತಳಾಗಿದ್ದಳು. 
ಆವತ್ತು ಶಾಣಪ್ಪನಿಗೆ ವಿಪರೀತ ಜ್ವರ ಹೇಮ ಮತ್ತು ಅವಳ ಅಕ್ಕ ಮನೆಯಲ್ಲಿ ಇರಲ್ಲಿಲ್ಲ. ಶಾಣಪ್ಪನಿಗೆ ಮಾತ್ರೆ ತರಲೆಂದು ಪಟ್ಟಣಕ್ಕೆ ಹೋಗಿದ್ದರು. 


ಬರುವ ದಾರಿ ಮಧ್ಯ ಪಾರವ್ವ ಹಿಂಬಾಲಿಸುತ್ತಾ ಬರುತ್ತಿರುವುದನ್ನು ಹೇಮಳ ಅಕ್ಕ ಶಾಂತ ಕಂಡು, ಪಾರವ್ವಳಿಗೆ ದಭಾಯಿಸಿ ಇನ್ಮೇಲೆ ಹೀಗೆಲ್ಲಾ ಕಾಟ ನೀಡಿದರೆ ಬಿದಿರು ಕಟ್ಟೆಗೆಯಿಂದ ಚರ್ಮ ಸುಲಿತೀನಿ ಎಂದಳು.
ಅಕ್ಕನ ಧೈರ್ಯ ಕಂಡ ಹೇಮ ಹೆಮ್ಮೆ ಪಡುತ್ತಾ ಶಾಂತಳ ಮುಖದಲ್ಲಿ ಮುಖವಿಟ್ಟು ಸಂತಸಪಟ್ಟಳು. ಅಕ್ಕ ಅಣ್ಣನಂತೆ ಇದ್ದಾಳೆ ಎಂದು ಅಪ್ಪ ಹೇಳುತ್ತಿದ್ದ ಮಾತು ಹೇಮಳಿಗೆ ನೆನಪಿಗೆ ಬಂತು.
ಆದರೆ ಪಾರವ್ವಳಿಗಾದ ಅವಮಾನ ತಮ್ಮ ಮಲ್ಲೇಶ ಸಹಿಸದೆ ಆ ರಾತ್ರಿ ಶಾಣಪ್ಪನ ಮನೆಗೆ  ನುಗ್ಗುತ್ತಾನೆ..


ಮುಂದೆ ಇನ್ನೂ ಇದೆ.
ಮುಂದಿನ ಸೋಮವಾರ ತಪ್ಪದೆ ಓದಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಊರು ಹಳ್ಳಿ..

ಕಪ್ಪು ಕಡಲು

ನನ್ನೂರಿನಲ್ಲಿ 'ಎಂ ಎಂ ಕಲಬುರಗಿ'..