ಬಾಬಾಸಾಹೇಬರ ಆಶಯಗಳಿಗೆ ಅಡ್ಡಿಯಾಗುತ್ತಿರುವರು ಇಂದು ಅವರ ಅಡ್ಡಪಲ್ಲಕ್ಕಿ ಹೊತ್ತು ಬರುತ್ತಿದ್ದಾರೆ....!!ಹುಷಾರ್..!


     


 



ಕೈಲಾಸ ಸೂರವಾರ

  ಪ್ರೀತಿಯ ಬಹುಜನ ಬಂದುಗಳೇ...
 
ಭಾರತದ ಪ್ರಜಾಪ್ರಭುತ್ವದ ಪಿತಾಮಹ ನಮ್ಮೆಲ್ಲರ ವಿಮೋಚಕರೂ ಆದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ದೇಶ ಈಗ ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದೆ .ಭಾರತದ ಬಹುಜನರಂತೂ ಬಾಬಾಸಾಹೇಬರ ಜನ್ಮದಿನವನ್ನು ವಷ೯ಪೂರ ಆಚರಿಸುತ್ತಾರೆ .ಬಹುಶಃ ಜಗತ್ತಿನ ಯಾವ ವ್ಯಕ್ತಿಗೂ ಇಷ್ಟೊಂದು ಹುಟ್ಟುಹಬ್ಬದ ಕಾಯ೯ಕ್ರಮಗಳನ್ನು ಯಾರೂ ಮಾಡುವುದಿಲ್ಲ.ಆ ಕಾರಣಕ್ಕೆ ಬಾಬಾಸಾಹೇಬರ ಜನ್ಮದಿನವನ್ನು "ವಿಶ್ವ ಜ್ಞಾನದ ದಿನ "ಎಂದೂ ಗುರುತ್ತಿಸಲಾಗಿದೆ.


ಸಾಮಾನ್ಯವಾಗಿ ಈವರಿಗೆ ಬಾಬಾಸಾಹೇಬರ ಹುಟ್ಟುಹಬ್ಬವನ್ನು ಜಗತ್ತಿನಾದ್ಯಂತ ಬಹುಜನರು ಮತ್ತು ಅವರ ಸಂಘಟನೆಗಳು ಆಚರಿಸುತ್ತಿದ್ದರು .ಇನ್ನು ಕೆಲವು ರಾಜಕೀಯ ಪಕ್ಷಗಳು ಮತ್ತು ಅವರು ಸರಕಾರಗಳು ವಷಕ್ಕೊಮ್ಮೆ ಸಾಂಕೇತಿಕವಾಗಿ ಆಚರಿಸಿ ಕೈ ಬಿಡುತ್ತಿದ್ದರು. ಆದರೀಗ ಬಾಬಾಸಾಹೇಬರ ಜನ್ಮದಿನದ ವಷ೯ದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪೈಪೋಟಿ ಮೇಲೆ ವಷ೯ಪೂತಿ೯ ದೇಶದ್ಯಂತ ಬಹೃತ ಪ್ರಮಾಣದಲ್ಲಿ ಆಚರಿಸುತ್ತಿವೆ....!ಅಂಬೇಡ್ಕರ್  ಸಾಧನೆಗಳನ್ನು ಬಾಯಿತುಂಬಾ ಹೊಗಳುತ್ತಿವೆ ....!ಇದಕ್ಕಾಗಿ ದಲಿತ ಬುದ್ದಿಜೀವಿಗಳನ್ನೆ ಸೇರಿಸಿಕೊಂಡು ಅಂಬೇಡ್ಕರ್  ಜನ್ಮದಿನಾಚರಣಾ ಸಮಿತಿಗಳನ್ನು ರಚಿಸಿಕೊಂಡಿವೆ...!


ಡಾ।।.ಬಿ.ಆರ್.ಅಂಬೇಡ್ಕರ್  ಬಗ್ಗೆ ಅವರ ಜನ್ಮದಿನದ ಬಗ್ಗೆ ಈವರೆಗೆ ಎಂದೂ ಇಲ್ಲದ ಕಾಳಜಿ ಇವರಿಗೆ ಇಂದೇಕೆ ಬಂದಿದೆ...???ಡಾ.ಅಂಬೇಡ್ಕರರಿಗೆ ಹುಟ್ಟುಹಬ್ಬ  ಮಾಡಲಿಕ್ಕೆ.ದೊಡ್ಡದೊಡ್ಡ ಹಾರ -ತುರಾಯಿ ಹಾಕಲಿಕ್ಕೆ ಹೊರಟಿರು ಇವರು ಅದಕ್ಕೆ ಅಹ೯ರೆ....???

ಸ್ವತಂತ್ರ ಪೂವ೯ದಲ್ಲಿ..... ವಾಸ್ತವವಾಗಿ ಕಾಂಗ್ರೆಸ್ ಬಾಬಾಸಾಹೇಬರ ಬದುಕಿನುದ್ದಕ್ಕೂ ಅವರ ಪ್ರಜಾಸತ್ತಾತ್ಮಕ -ಮಾನವೀಯ ಹೋರಾಟಕ್ಕೆ ದೊಡ್ಡ ಶತೃವಾಗಿ ಹೇಗೆ ಕಾಡಿತು ಎಂಬುದು ಕೇಲವು ಉದಾಹರಣೆಗಳನ್ನು ಗಮನಿಸಿ...

👉.1919 ಬಾಬಾಸಾಹೇಬರು ಸೌತಬರೊ ಆಯೋಗದ ಮುಂದೆ ಮನಮಿ ಸಲ್ಲಿಸಿ...ಭಾರತೀಯರೆಲ್ಲರಿಗೂ ಮತದಾನ ಹಕ್ಕುನ್ನು ನೀಡುವ ವಯಸ್ಕ ಮತದಾನ ಪದ್ದತಿಯನ್ನು ಜಾರಿಗೊಳಿಸಬೇಕು .ದಲಿತರಿಗೆ ಶಾಸನ ಸಭೆಗಳಲ್ಲಿ ಪ್ರತ್ಯೇಕ ಚುನಾಯಕಗಳನ್ನು ನೀಡಬೇಕು...ಮುಂತಾದ ಬೇಡಿಕೆಗಳನ್ನು ಇಟ್ಟರೂ ..ಇದಕ್ಕೆ ಪ್ರತಿಯಾಗಿ 1928ರಲ್ಲಿ ಕಾಂಗ್ರೆಸ್  ಪಕ್ಷವು ಮೋತಿಲಾಲ ನೆಹೆರೂ ಅಧ್ಯಕ್ಷಯಲ್ಲಿ ಸಂವಿಧಾನ ರಚಾನಾ ಸಮಿತಿಯೊಂದನ್ನು ರಚಿಸಿಕೊಂಡು ಸೈಮನ್ ಆಯೋಗಕ್ಕೆ ಮನವಿ ಸಲ್ಲಿಸಿ....'"ಮತದಾನ ಪದ್ದತಿಯನ್ನು ಈಗಿರುವಂತೆ ಪದವೀಧರರು ಮತ್ತು ತೆರಿಗೆದಾರರಿಗೆ ಮಾತ್ರ ನೀಡುವುದು ಸರಿಯಾಗಿದೆ .ಅಸ್ಪೃಶ್ಯರು ಸಮಸ್ಯೆಯು ಸಾಮಾಜಿಕೆ-ಧಾರ್ಮಿಕ ಸಮಸ್ಯೆ ಆದ್ದರಿಂದ ಇವರಿಗೆ ಶಾಸನ ಸಭೆಗಳಲ್ಲಿ ಪ್ರತ್ಯೇಕ  ರಾಜಕೀಯ ಪ್ರಾತಿನಿದ್ಯ ನೀಡುವ ಅಗತ್ಯವಿಲ್ಲ" ಎಂದೂ ವಾದಮಾಡಿ ಬಾಬಾಸಾಹೇಬರ ಬೇಡಿಕೆಗಳನ್ನು ವಿರೋಧಿಸಿದ್ದರು .

👉 1946 ನಡೆದ ಸಂವಿಧಾನರಚನಾ ಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಾಬಾಸಾಹೇಬರನ್ನು ಸೋಲಿಸಿತು..ಕೊನೆಗೂ ಮುಸ್ಲಿಂ ಲೀಗ್ ಮತ್ತು ಬ್ರಿಟಿಷರ ಬೆಂಬಲದಿಂದಾಗಿ  ಬಾಬಾಸಾಹೇಬರು ಸಂವಿಧಾನರಚನಾ ಸಭೆಗೆ ಆಯ್ಕೆಯಾಗಿ ಭಾರತದ ಸಂವಿಧಾನವನ್ನು  ರಚಿಸುವ ಅವಕಾಶವನ್ನು ಪಡೆದುಕೊಂಡು ನಮ್ಮೆಲ್ಲರ ಹಕ್ಕುಗಳನ್ನು ಸಂರಕ್ಷಣೆ ಮಾಡಿದರು .ಹೀಗೆ ಸಂರಕ್ಷಣೆ ಮಾಡಿದ ಹಕ್ಕುಗಳು ಕಾಯ೯ ರೂಪಕ್ಕೆ ಬರಬೇಕಾದರೆ ನಾನು ಲೋಕಸಭೆಗೆ ಆಯ್ಕೆಯಾಗಬೇಕೆಂಬ ಮಹತ್ತರ ಉದ್ದೇಶದಿಂದ 1952ರಲ್ಲಿ ನಡೆದ ಸ್ವತಂತ್ರ ಭಾರತದ ಪ್ರಥಮ ಸಾವ೯ತ್ರಿಕ ಚುನಾವಣೆ ಮತ್ತು 1953ರಲ್ಲಿ ನಡೆದ ಉಪಚುನಾವಣೆಗಳಿಗೆ ಸ್ಪಧಿ೯ಸಿದಾಗ ಬಾಬಾಸಾಹೇಬರನ್ನು ಸೋಲಿಸಿದೆರು ಇದೇ ಕಾಂಗ್ರೆಸ್ಸಿಗರು ಮತ್ತು ಹಿಂದೂ ಮಹಾಸಭಾದ ಹಿಂದುತ್ವವಾದಿಗಳು....!

ಸ್ವತಂತ್ರ ನಂತರದಲ್ಲಿ ಕಾಂಗ್ರೆಸ್ ಮಾಡಿದ್ದೇನು...??
👉1950-51ರಲ್ಲಿ ಅವಧಿಯಲ್ಲಿ ಕೇಂದ್ರ ಸರಕಾರ ಕಾನೂನು ಮಂತ್ರಿಯಾಗಿದ ಬಾಬಾಸಾಹೇಬರು ಭಾರತದ ಎಲ್ಲಾ ವಗ೯ದ ಮಹಿಳೆಯರಿಗೆ ಸಮಾನ ನಾಗರೀಕ ಹಕ್ಕುಗಳನ್ನು ನೀಡುವ "ಹಿಂದೂ ಕೋಡ್ ಮಸೂದೆ"ಯನ್ನು ಮಂಡಿಸಿದಾಗ ನೆಹರು ಸರಕಾರ ಅದನ್ನು ಒಪ್ಪಿಕೊಳ್ಳದೆ ತಿರಸ್ಕಿರಿಸಿತು...!!


👉 ಸಂವಿಧಾನದ ಅನುಚ್ಚೇದ 340ರ ಆಧಾರದ ಮೇಲೆ ಇತರೆ ಹಿಂದೂಳಿದ ವಗ೯ಗಳಿಗೆ ಮೀಸಲಾತಿ ನೀಡಲು ಹಿಂದುಳಿದ  ವಗ೯ಗಳ ಆಯೋಗ ರಚಿಸಬೇಕೆಂಬ ಬಾಬಾಸಾಹೇಬರ ಬೇಡಿಕೆಯನ್ನು ನೆಹರೂ ಸರಕಾರ ಒಪ್ಪಲಿಲ್ಲ..‍ಇದರಿಂದ ಬೇಸರಗೊಂಡ ಕಾನೂನು ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು..ಇದಕ್ಕೆ  ಹೆದರಿದ ನೆಹರೂ ಸರಕಾರ 1953ರಲ್ಲಿ ಕಾಕಾ ಕಾಲೇಲ್ಕರ್ ಆಯೋಗವನ್ನು ನೇಮಿಸಿ ಬಾಬಾಸಾಹೇಬರು ನಿಧನರಾದ ಮೇಲೆ ಆ ಆಯೋಗದ ವರದಿಯನ್ನು ಸ್ವೀಕರಿಸಿ .ನಂತರ ತಿರಸ್ಕರಿಸಿ ಕಸದ ಬುಟ್ಟಿಗೆ ಎಸೆದರು..20 ವಷ೯ಗಳ ನಂತರ ಮತ್ತೋಂದು ಹಿಂದುಳಿದ ವಗ೯ಗಳ ಮಂಡಲ್ ಆಯೋಗ ರಚನೆಯಾದದ್ದು 1977ರಲ್ಲಿ ಜನತಾ ಸರಕಾರದಲ್ಲಿ .1981ರಲ್ಲಿ ಅಧಿಕಾರಕ್ಕೆ ಬಂದ ಶ್ರೀಮತಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ಮಂಡಲ್ ವರದಿಯನ್ನು ಶೈತ್ಯಾಗಾರದಲ್ಲಿಟ್ಟಿತು..ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ""ಎಪ್ರಿಲ್ 14-1984ರಲ್ಲಿ ಜನ್ಮತಳೆದ ಬಹುಜನ ಸಮಾಜ ಪಕ್ಷಯು 'ಮಂಡಲ್ ವರದಿ ಜಾರಿ ಮಾಡಿ ಇಲ್ಲವೇ ಖುಚಿ೯ ಖಾಲಿಮಾಡಿ.ಎಂಬ ರಾಷ್ಟ್ರಮಟ್ಟದ ಬಹೃತ್ ಹೋರಾಟವನ್ನು ಹಮ್ಮಿಕೊಂಡಿತ್ತು.ಇದರ ಪರಿಣಾಮ BSP ಬೆಂಬಲ ಪಡೆದ ಅಧಿಕಾರಕ್ಕೆ ಬಂದ ಕಾಂಗ್ರೆಸೇತರ್ ವಿ.ಪಿ.ಸಿಂಗ್ ಸರಕಾರ  1988ರಲ್ಲಿ ಇತರೆ ಹಿಂದುಳಿದ ಜಾತಿಗಳಿಗೆ ಸರಕಾರಿ ಉದ್ಯೋಗದಲ್ಲಿ ಶೇ.27 ಮೀಸಲಾತಿಯನ್ನು ಜಾರಿಗೊಳಿಸಿದರು....

👉 ಯಾರಾರಿಗೋ ಬದುಕಿರುವಾಗಲೇ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು ಕಾಂಗ್ರೆಸ್ ಕಣ್ಣಿಗೆ ಬಾಬಾಸಾಹೇಬರಂತಹ ಮೇರು ವ್ಯಕ್ತಿತ್ವ ಕಾಣಿಸಲೇ ಇಲ್ಲ.1990-1991ರಲ್ಲಿ ವಿ.ಪಿ.ಸಿಂಗ್ ನೇತೃತ್ವದ ಸರಕಾರ ಬೆಂಬಲ ನೀಡಿದ ಮಾನ್ಯವಾರ ಕಾನ್ಶಿರಾಂಜೀಯವರು ಒತ್ತಾಯದ ಮೇರೆಗೆ ಸರಕಾರ ಬಾಬಾಸಾಹೇಬರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಅವರ ಭಾವಚಿತ್ರವನ್ನು ಪಾಲಿ೯ಮೆಂಟನ ಸೆಂಟ್ರಲ್ ಹಾಲನಲ್ಲಿ ಅನಾವರಣಗೊಳಿಸಿತ್ತು..

👉 ಈಗ ಕೇಂದ್ರದ ಬಿಜೆಪಿ ಸರಕಾರ ಬಾಬಾಸಾಹೇಬರ ಜನ್ಮ ದಿನಾಚರಣೆ ಮಾಡುತ್ತಿರುವುದು ಎಂತಹ ವಿಪಯ೯ಸ ನೋಡಿ.....??

 .ಇಂದಿನ ಹಿಂದುತ್ವವಾದಿಗಳೇ ಅಂದು..1848ರಲ್ಲಿ ಮಹಾತ್ಮ ಜ್ಯೋತಿಬಾ ಪುಲೇ ಮತ್ತು ಸಾವಿತ್ರಿ ಬಾಪುಲೇ ಪೂಲಾ ನಗರದಲ್ಲಿ ಅಸ್ಪೃಶ್ಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಶಾಲೆ ಪ್ರಾರಂಭಿಸಿದಾಗ ಅದನ್ನು ವಿರೋಧಿಸಿ ಅವರಿಗೆ ಅವಮಾನ ಮಾಡಿದರು



👉 1902ಮತ್ತು 1930ರಲ್ಲಿ ಬಾಬಾಸಾಹೇಬರ ಹಮ್ಮಿಕೊಂಡಿದ್ದ ಚೌಡರ ಕೆರೆ ನೀರು ಮುಟ್ಟುವ ಮತ್ತು ಕಾಳರಾಂ ದೇವಾಲಯ ಪ್ರವೇಶ ಮಾಡುವ ಚಳುವಳಿಗಳಿಗೆ ಅಡ್ಡಿಪಡಿಸಿ .ಹಲ್ಲೆ ಮಾಡಿ ವಿರೋಧ ಮಾಡಿದವರು ಇದೆ ಹಿಂದತ್ವವಾದಿಗಳು ಹಿಂದೂ ಮಹಾಸಭಾದವರು ಎಂಬ ಸತ್ಯ ನಿಮಗೆ ತಿಳದಿರಲ್ಲಿ...


👉 ನಮ್ಮ ದೇಶದ ಸವ೯ಜನರ ಸಾಮಾಜಿಕ ಆಥಿ೯ಕ ಧಾಮಿ೯ಕ ಶೈಕ್ಷಣಿಕ  ಮತ್ತು ರಾಜಕೀಯ ಹಕ್ಕುಗಳನ್ನು ಸಂರಕ್ಷಣೆ ಮಾಡುತ್ತಿರುವ ಭಾರತದ ಸಂವಿಧಾನವನ್ನು ಪರಾಮಶೆ೯ ಮಾಡಬೇಕೆಂದು ಕೇಂದ್ರದ ಬಿಜೆಪಿ ಸರಕಾರ ಜನವರಿ  26 2000ರಲ್ಲಿ ತೀಮಾ೯ನ ಮಾಡಿತ್ತು ..ಇದನ್ನು ಮೊದಲು ವಿರೋಧ ಮಾಡಿದವರು ಅಂದಿನ ರಾಷ್ಟ್ರಪತಿಗಳದ ಶ್ರೀ .ಕೆ.ಆರ್.ನಾರಾಯಣರವರು ..ಬಿಜೆಪಿ ಸರಕಾರದ ಈ ತೀಮಾ೯ನವನ್ನು ವಿರೋಧಿಸಿ ಬಹುಜನ ಸಮಾಜ ಪಾಟಿ೯ ಇಡೀ ದೇಶದ್ಯಂತ ಪ್ರತಿಭಟನೆ ಮಾಡಿದ ಪರಿಣಾಮ ಸಂವಿಧಾನ ಪರಮಶೇ೯ ಕಾಯ೯ವನ್ನು ಬಿಜೆಪಿ ಸರಕಾರ ಕೈ ಬಿಟ್ಟಿತ್ತು ..ಆದರೆ ಇಂದು ಆರ್.ಎಸ್.ಎಸ್. ಮೀಸಲಾತಿ ಪರಾಮಶೆ೯ಯಾಗಬೇಕು ಎಂದರೆ ಬಿಜೆಪಿಯ ಪ್ರಧಾನ ಮಂತ್ರಿ ಮೀಸಲಾತಿಗೆ ಯಾವುದಕ್ಕೆ ಧಕ್ಕೆಯಾಗುವುದಿಲ್ಲ ಎನ್ನುತ್ತಾರೆ....ಏನಿದರ ಮಮ೯...??

👉 ನಮ್ಮ ದೇಶದ ಸವ೯ಜನರ ಶ್ರೀರಕ್ಷೆಯಾಗಿರುವ ಭಾರತದ ಸಂವಿಧಾನ್ನೇ ವಿರೂಪಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಬುಡಮೇಲು ಮಾಡ ಹೊರಥಿರುವ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರ ಬಾಬಾಸಾಹೇಬರ ಜನ್ಮ ದಿನಾಚರಣೆ ಮಾಡುವ ನೈತಿಕತೆ ಇದೆಯೆ.....????

ಬಂಧುಗಳೇ ನಮ್ಮಗೆ ಬಾಬಾಸಾಹೇಬರ ಪೋಟೊ ಪುತ್ಥಳಿ ಅವರ ವಾಸಿಸಿದ ಮನೆಗಳು ಅವರ ಹೋರಾಟದ ಐತಿಹಾಸಿಕ ಸ್ಥಳಗಳು ಮತ್ತು ಅವರ ಜನ್ಮದಿನ....ಇವೆಲ್ಲವುಗಳ ಜೊತೆ ಒಂದು ರೀತಿಯ ಭಾವನಾತ್ಮಕ ಸಂಬಂಧವಿದೆ.ಹಾಗಾಗೀ ಬಾಬಾಸಾಹೇಬರ ಜನ್ಮ ದಿನ..ಅವರ ಪುತ್ಥಳಿಗಳನ್ನು ಯಾರೇ ಸ್ಥಾಪಿಸಿದರೂ ಅವರೆಲ್ಲರೂ ಅಂಬೇಡ್ಕರವಾದಿಗಳೇ ಎಂದು ನಂಬಿಬಿಡುವಷ್ಟು ಭಾವಜೀವಿಗಳು ನಾವು..
ಬಹುಜನ ಸಮಾಜ ಆಳುವ ಸಮಾಜವಾಗುವ ಎಲ್ಲಾ ಶಕ್ತಿ ಸಾಮಥ್ಯ೯ಗಳನ್ನು ತನೋಳಗೆ ಇಟ್ಟಿಕೊಂಡಿದೆ .ಅದು ಆಳುವ ಸಮಾಜವಾದರೇ ಭಾರತ ದೇಶವನ್ನು ಜಾತಿರಹಿತ ವಗ೯ರಹಿತ ಸಮಸಮಾಜವನ್ನಾಗಿ ಪರಿವತಿ೯ಸಬಲ್ಲ ಶಕ್ತಿಯೂ ಅದಕ್ಕಿದೆ..ಅಂತಹ ಶಕ್ತಿ-ಸಾಮಥ್ಯ೯ ಮತ್ತು ದೂರದೃಷ್ಟಿಯನ್ನು  ಬಹುಜನ ಸಮಾಜಕ್ಕೆ ಅಂಬೇಡ್ಕರ್ ವಾದ ಮಾತ್ರ ಕೊಡಬಲ್ಲದು ಎಂಬು ಸತ್ಯ ಮನುವಾದಿ ಶಕ್ತಿಗಳಿಗೆ ಚನ್ನಾಗಿ ಅಥ೯ವಾಗಿದೆ..ಆದ್ದದರಿಂದ ಅಂಬೇಡ್ಕರ್ ವಾದದ ಸಾಮಾಜಿಕ-ರಾಜಕೀಯ ಸಿದ್ದಾಂತವನ್ನು ಕಲುಷಿತಗೊಳಿಸಿ ದಿಕ್ಕುತಪ್ಪಿಸಿ ಬಹುಜನರ ರಾಜಕೀಯ ಶಕ್ತಿಯನ್ನು ಭ್ರಷ್ಟಗೊಳಿಸಿ ತಮ್ಮತ್ತ ಸೆಳೆದುಕೊಳ್ಳಲು ಮಾಡುತ್ತಿರುವ ರಾಜಕೀಯ ಷಡ್ಯಂತರವೇ ಬಿಜೆಪಿ-ಕಾಂಗ್ರೆಸ್  ದ್ವಯರ ಬಾಬಾಸಾಹೇಬರ ಜನ್ಮ ದಿನಾಚರಣೆಯ ಉದ್ದೇಶ..


ಮನುವಾದಿಗಳ ಇಂತಹ ಕುತಂತ್ರಕ್ಕೆ ನಾವು ಇನ್ನೆಷ್ಟು ದಿನ ಬಲಿಯಾಗಬೇಕು....??ಇಂದು ದೇಶದಾದ್ಯಂತ ಬಹುಜನ ಸಮಾಜ ಜಾಗೃತವಾಗತ್ತಿದೆ..ಅಂಬೇಡ್ಕರ್ ಬರಹ ಮತ್ತು ಭಾಷಣಗಳನ್ನು ಅಧ್ಯಯನ ಮಾಡಿ ತಿಳಿದುಕೊಂಡು ಇಂದಿನ ಹೋಸ ಪೀಳಿಗೆ ಅಂಬೇಡ್ಕರರು ಬಯಸಿದಂತೆ ಸ್ವತಂತ್ರ ರಾಜಕೀಯ ಶಕ್ತಿಯಾಗಲು ಹೊರಟಿದೆ.ಆದ್ದರಿಂದಲೇ ಅವರು ಈಗ ಅಂಬೇಡ್ಕರ್ ಜಯಂತಿಗಳನ್ನು ಮಾಡಲು ಹೆಚ್ಚು ಉತ್ಸಾಹ ತೋರುತ್ತಿದ್ದಾರೆ ..ಅಂಬೇಡ್ಕರ್ ಹೆಸರನ್ನು ಬಳಸಿಕೊಂಡು ಅವರು ನಮ್ಮನ ಶಾಶ್ವತವಾಗಿ ಗುಲಾಮರಾಗಿಸಲ್ಲು ಪ್ರಯತ್ನಿಸುತ್ತಿದ್ದಾರೆ ..!ಇದಕ್ಕೆ ನಾವು ಬಲಿಯಾಗಬೇಕೆ..?? ದಯಾಮಾಡಿ ಯೋಚಿಸಿ. ಬನ್ನಿ....ಮನುವಾದಿಗಳ ಇಂತಹ ಹೀನ ಕುತಂತ್ರಗಳನ್ನು ಸೋಲಿಸೋಣ ದೇಶದ  ಎಲ್ಲಾ ಶೋಷಿತ ಶಕ್ತಿಗಳೂ ಒಂದಾಗಿ ನಮ್ಮ ಸ್ವಂತ ಶಕ್ತಿಯ ಮೇಲೆ ದೇಶ ಆಳೋಣ..ಆ ಮೂಲಕ ಪರಮಪೂಜ್ಯ ಬಾಬಾಸಾಹೇಬರ ಮಹದಾಸೆಯನ್ನು ಈಡೇರಿಸಿ ಅವರಗೆ ಗೌರವ ಸಲ್ಲಿಸೋಣ.

ಜೈ ಭೀಮ್ ಜೈ ಭಾರತ



ಬರವಣಿಗೆ ಮತ್ತು ಲೇಖನದ ಒಳಾರ್ಥಕ್ಕೆ ಲೇಖಕರೆ ಜವಬ್ದಾರಿ ಮತ್ತು ಉತ್ತರಿಸುವವರು. ಈ ಬ್ಲಾಗರ್ ಉತ್ತರಿಸವುದಿಲ್ಲ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಊರು ಹಳ್ಳಿ..

ಕಪ್ಪು ಕಡಲು

ನನ್ನೂರಿನಲ್ಲಿ 'ಎಂ ಎಂ ಕಲಬುರಗಿ'..