ಅಕ್ಕನ ಮದುವೆ ಮಾಡುವ ಚಿಂತೆ..




ಬೆಳಗ್ಗೆ ಇದ್ದ ಜ್ವರ ಸ್ವಲ್ಪ ಕಡಿಮೆಯಾಗಿ ಪಡಸಾಲೆಯಲ್ಲಿ ಕುಳಿತ ಶಾಣಪ್ಪನನ್ನ ಬೆನ್ನಿಗೆ ಬೀಗಿ ಬಿಸಿಯ ಕೈಗಳು ಮುಟ್ಟಿದ ತಕ್ಷಣ ನೋಡಿದ. ದೊಡ್ಮಗಳು, ಹೇಮಳ ಮುಖ ನೋಡಿದ ಮೇಲೆ ಇದ್ದ ಅಷ್ಟೂ ಜ್ವರ ಹೊರಟು ಹೋದಂತೆ ಶಾಣಪ್ಪ ಛಾ ಹೀರುತ್ತಾ ಮಕ್ಕಳ ಹತ್ತಿರ ಹರಟುತ್ತಾ ಕೂತ.
ಆದರೆ ಹೇಮ ಮಾತ್ರ ಅತ್ತ ಪ್ರೀತಿ ಫಲಸದೇ, ಅಪ್ಪನನ್ನು ಒಪ್ಪಸದೇ ನಿರಾರ್ಶಿತಳಾಗಿ ಸುಮ್ಮನಿದ್ದಳು.
ಕಾಸಿಂ‌ ಎಂದಿನಂತೆ ತನ್ನ ಕೈಂಕರ್ಯ ಮುಗಿಸಿ ಶಾಣಪ್ಪನ ಮನೆ ಮುಂದಿನಿಂದ ಹಾದು ಹೋಗುವಾಗ ಹೇಮ ತನ್ನ ಕಣ್ಣಿಗೆ ಬಿದ್ದಳು


ಕಾಸಿಂನ ಮನದಲ್ಲಿ ಬುಗಿಲೇಳುತ್ತಾ ಇರುವ ಸಮಯದಲ್ಲೆ ಗೌಡರ ಅಕ್ಕ ಪಕ್ಕದ ಮನೆಯವರು ಕಾಸಿಂ ಮೇಲೆ ಹೇಮಳಿಗೆ ಪಿರೂತಿ ಹುಟೈತೆ ಎನ್ನುವ ಗೂಮಾನಿಯ ಕೂಗು ಅದಾಗಲೇ ಕಾಸಿಂನ ಕಿವಿಗೆ ರಾಚಿತ್ತು.
ಕಾಸಿಂನ ಮನ ಪೋದೆಯಲ್ಲಿ ಹಸಿ ಮಣ್ಣಿಗೆ ಮೊಳಕೆಯೋಡೆಯುವ ಬೀಜದಂತೆ ತನಗರಿವಿಲ್ಲದೆ ಹೇಮಳ ಕಣ್ಣೋಟಕ್ಕೆ ಕರಗಿದ್ದ, ಮಂಕಾಗಿದ್ದ, ಹೇಮಳ ಮನೆ ಮುಂದೆ ನಿದಾನವಾಗಿ ಚಲಿಸುತ್ತಾ ಹೋಗುತ್ತಿದ್ದ. ಕಾಲ ದಿನೇ ದಿನೇ ಬೀಕರಿಸಿತ್ತಾ ಹೋದಂತೆ ಹೇಮ ಮನೆ‌ ಜವಬ್ದಾರಿಗೆ‌ ಮುಂದಾದಳು.

ಅಕ್ಕನ ಮದುವೆ ಮಾಡುವ ಚಿಂತೆ ಅಪ್ಪನಂತೆ ತಾನೂ ಚಿಂತಿಸಲು ಪ್ರಾರಂಭಿಸಿದಳು. ಮನೆ ಕಡೆ ಹುಷಾರು ಎನ್ನುತ್ತಿದ್ದ ಅಮ್ಮ ಹಾಗಾಗ ಕನಸಲ್ಲಿ ಬಡಿದೆಚ್ಚರಿಸಿದಂತೆ ಭಾಸವಾಗುತಿತ್ತು. ಕಾಸಿಂನ ಪ್ರೇಮ ಘಳಿಗೆಗೂ ಪುರುಸೊತ್ತಿಲ್ಲದಂತೆ ತಾನು ಕಲಿತ ಟೇಲರಿಂಗ್ ಮೇಲೆ ದುಡಿಯಲು ಶುರು ಮಾಡಿದಳು. ಯಾವ ಪರಿ ಅವಳು ದುಡಿದಳು ಎಂದರೆ ಸೋರಿತ್ತಿದ್ದ ಮಾಳಿಗೆಗೆ , ಅಲ್ಲಲ್ಲಿ ತ್ಯಾಪೆ ಬಡಿದ ಗೋಡೆಗಳಿಗೆಲ್ಲಾ ಸಿಮೆಂಟ್ ಹಾಕಿ ನಾಜೂಕಾಗಿ ಮನೆಯನ್ನು ಉಳ್ಳವರ ಮನೆಯಂತೆ ಸಿದ್ದಗೊಳಿಸಿದಳು. ಸಮಾಜದಲ್ಲಿ ಉಳ್ಳವರಿಗಿಂತ ಮಿಗಿಲಂತೆ ಬದುಕಲು ಮುಂದಾದಳು, ಅಪ್ಪನ‌ ಹೆಗಲಿದ್ದ  ಜವಬ್ದಾರಿ ಗಂಡುಮಗನಂತೆ ಒಂದರಂತೆ ಒಂದು ನಿಭಾಯುಸುತ್ತಾ ಸಾಗಿದಳು.

ತನ್ನ ಪ್ರೇಮ, ಸಂತೋಷ, ಆಸೆ, ಎಲ್ಲವನ್ನೂ ದೂರವಿಟ್ಟು ನೇರಾನೇರವಾಗಿ ಜವಬ್ದಾರಿ ಒಂದೇ ಎಂದು ತಿಳಿದು.ಅರಿತು ಬಾಳು‌‌ ನಡೆಸಿದಳು.‌ಇತ್ತ ಕಾಸಿಂ ಗೌಡರ  ಕೊಟ್ಟಿಗೆಯಲ್ಲಿ ಬಳಲುತ್ತಾ ಇರುತ್ತಿದ್ದ. ಬರುವ ದಿನಗಳಲ್ಲಿ ಅಕ್ಕನ ಮದುವೆ ಮಾಡುವ ಧಾವಂತದಲ್ಲಿ ಹೇಮ ಇದ್ದಳು.
ಆದರೆ ಕಾಸಿಂ‌ಆ ದಿನ ಬಂದು...
(ಮುಂದೆ ಇನ್ನೂ ಇದೆ. ಮುಂದಿನ ಸೋಮವಾರ ಕಾದು ಓದಿ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಊರು ಹಳ್ಳಿ..

ಕಪ್ಪು ಕಡಲು

ನನ್ನೂರಿನಲ್ಲಿ 'ಎಂ ಎಂ ಕಲಬುರಗಿ'..