ಮ್ಯಾದರ ಶಾಣಪ್ಪ ಮತ್ತು ಕಾಸಿಂ..
ಮ್ಯಾದರ ಶಾಣಪ್ಪ ತಾನು ನೇಯ್ದ ಬುಟ್ಟಿಗಳು ವ್ಯಾಪಾರವಾಗಲಿಲ್ಲ ಎಂದು ಅರ್ಧ ಸೇದಿ ಬಿಟ್ಟ ಬೀಡಿಯನ್ನು ನೆಲಕ್ಕೆ ವರೆಸುತ್ತಾ, ಟೊಂಕದಲ್ಲಿದ್ದ ಎಲೆ, ಸುಣ್ಣ ಬಾಯಲ್ಲಿ ಹಾಕಿಕೊಂಡು ಬುಟ್ಟಿಗಳನ್ನು ಜೋಡಿಸಿ ಮ್ಯಾದರ ಗಲ್ಲಿಯ ಕಡೆ ಮುಖ ಮಾಡಿದ.
ತನ್ನ ಹಿರಿಕರ ವೃತ್ತಿಯನ್ನು ಮುಂದುವರೆಸುತ್ತಾ ಹೊಟ್ಟೆಗೆ ಆಸರೆಯಾದ ಕುಲ ಕಸುಬನ್ನು ಶ್ರದ್ಧೆಯಿಂದ ಮಾಡುತ್ತಿದ್ದ. ಊರ ಗೌಡರ ಮನೆಯ ಕಾವಲಿಯ ಬೀದಿಯ ಪಕ್ಕದಲ್ಲಿದ್ದ ಮ್ಯಾದರ ಮನೆಗಳ ನಾಲ್ಕನೇ ಮನೆಯೇ ಶಾಣಪ್ಪನದು. ಇಡೀ ಊರಲ್ಲಿಯೇ ನಾಲ್ಕುಮನೆಯುಳ್ಳ ಮ್ಯಾದರ ಕುಟುಂಬಗಳ ಜೀವನಾಡಿ ಮೇದಾರ ಕಸುಬಾಗಿತ್ತು.
ಶಾಣಪ್ಪನಿಗೆ ಮೂರಜನ ಹೆಣ್ಣುಮಕ್ಕಳು.ಮ್ಯಾದರ ಶಾಣಪ್ಪ ತಾನು ನೇಯ್ದ ಬುಟ್ಟಿಗಳು ವ್ಯಾಪಾರವಾಗಲಿಲ್ಲ ಎಂದು ಅರ್ಧ ಸೇದಿ ಬಿಟ್ಟ ಬೀಡಿಯನ್ನು ನೆಲಕ್ಕೆ ವರೆಸುತ್ತಾ, ಟೊಂಕದಲ್ಲಿದ್ದ ಎಲೆ, ಸುಣ್ಣ ಬಾಯಲ್ಲಿ ಹಾಕಿಕೊಂಡು, ತಾನು ನೇಯ್ದ ಬುಟ್ಟಿಗಳನ್ನು ಜೋಡಿಸಿ ಮ್ಯಾದರ ಗಲ್ಲಿಯ ಕಡೆ ಮುಖ ಮಾಡಿದ.
ಶಾಣಪ್ಪನಿಗೆ ಮೂರಜನ ಹೆಣ್ಣುಮಕ್ಕಳು.ಮ್ಯಾದರ ಶಾಣಪ್ಪ ತಾನು ನೇಯ್ದ ಬುಟ್ಟಿಗಳು ವ್ಯಾಪಾರವಾಗಲಿಲ್ಲ ಎಂದು ಅರ್ಧ ಸೇದಿ ಬಿಟ್ಟ ಬೀಡಿಯನ್ನು ನೆಲಕ್ಕೆ ವರೆಸುತ್ತಾ, ಟೊಂಕದಲ್ಲಿದ್ದ ಎಲೆ, ಸುಣ್ಣ ಬಾಯಲ್ಲಿ ಹಾಕಿಕೊಂಡು, ತಾನು ನೇಯ್ದ ಬುಟ್ಟಿಗಳನ್ನು ಜೋಡಿಸಿ ಮ್ಯಾದರ ಗಲ್ಲಿಯ ಕಡೆ ಮುಖ ಮಾಡಿದ.
ಮನೆ ಮುಂದೆ ಇರುವ ಬಾದಾಮಿ ಗಿಡಕ್ಕೆ ಕೇರಿಯ ಹುಡುಗರ ಕಾಟ, ಮಗಳು ವಯಸ್ಸಿಗೆ ಬಂದಳೆನ್ನುವ ಚಿಂತೆ ಶಾಣಪ್ಪನ ನಿದ್ದೆಯನ್ನು ತಿನ್ನುತ್ತಿದ್ದವು. ಮೇದರ ಜಾತಿಯಲ್ಲಿಯೇ ಇವನದು ಬಡ ಕುಟುಂಬ. ತೆಗ್ಗು ಭೂಮಿ, ಕಲ್ಲು ತೇಲಿರುವ ಹೊಲ ನೀಡಿ ಪಾಲು ಮಾಡುವಾಗ ಅಣ್ಣ-ತಮ್ಮಂದಿರೇ ಮೊಸ ಮಾಡಲಾಗಿತ್ತು. ಆದರೂ ದೃತಿಗೆಡದ ಶಾಣಪ್ಪ ಕುಲಕಸುಬು ಮೇದಾರಿಕೆಯನ್ನು ಬಲವಾಗಿ ನಂಬಿ ಕುಟುಂಬವನ್ನು ನಡೆಸುತ್ತಿದ್ದ...
ವಾರಗಟ್ಟಲೆ ದುಡಿದು ರವಿವಾರ ಸಂತೆಯಲ್ಲಿ ಬುಟ್ಟಿಗಳನ್ನು ಮಾರಿ ಬಂದ ಕಾಸಿನಿಂದ ಮಗಳ ಮದುವೆಗೆ ಹಣ ಕೂಡಿಡುತ್ತಾ , ಸಂಸಾರ ತೂಗುತ್ತಿದ್ದಾ.
ಆತನ ದಿನದ ಬೈಟಕ್ ತುಳೇರ ಚಿನ್ನಪ್ಪನ ಹತ್ತಿರ. ಸಂಜೆಯಾದರೆ ಸಾಕು ಚಿನ್ನಪ್ಪನ ಹತ್ತಿರ ಚಿಕಿನಿ ಅಡಕಿ ನೆಮಲುತ್ತಾ ಸಂಸಾರದ ಆಗುಹೋಗುಗಳ ಬಗ್ಗೆ ಮಾತಾಡುತ್ತಾ ಕಾಲ ಕಳೆಯುತ್ತಿದ್ದರು.
ದುಡಿದ ದುಡ್ಡು ಮನೆ ಸಂಸಾರಕ್ಕೆ ಖರ್ಚಾಗಿ ಹೋಗುತ್ತಿತ್ತು ಎನ್ನುವ ಚಿಂತೆ ಕೆಲಹೊತ್ತು ಮರೆತು ಚಿನ್ನಪ್ಪನ ಹತ್ತಿರ ಹರಟುತ್ತಿದ್ದ.
ಆವತ್ತು ಮ್ಯಾದರ ಶಾಣಪ್ಪನ ಮನೆಯಲ್ಲಿ ಯಾರು ಇರಲ್ಲಿಲ್ಲ. ಶಾಣಪ್ಪನೂ ಸಹ ಸಂತೆಗೆ ಹೋಗಿದ್ದ. ಗೌಡರ ಮನೆಯ ಆಳುಮಗ ಕಾಸಿಂ ಶಾಣಪ್ಪನ ಮನೆಗೆ ಬುಟ್ಟಿ ಮಾಡುವಂತೆ ಹೇಳಿ ಬಯಾನಾ ಕೊಡಲು ಬಂದಿದ್ದ. ಆದರೆ ಮನೆಯಲ್ಲಿ ಶಾಣಪ್ಪನ ಕಿರಿ ಮಗಳು ಹೇಮ ಇದ್ದಳು. ಅವಳನ್ನು ನೋಡಿದ ಕೂಡಲೆ ಕಾಸಿಂ ನೂರು ಮೈಲಿ ಹಾರಿದಂತೆ ದೂರ ಸರಿದ. ಕಾಸಿಂನ ಅಂಜಿಕೆ ಕಂಡು ಹೇಮ ಮುಗುಳು ನಕ್ಕು ಅಪ್ಪ ಸಂತೆಗೆ ಹೋಗಿದ್ದಾರೆ ಎಂದು ಮೆಲ್ಲನೆ ಹೇಳಿ ಒಳ ಹೋದಳು.
ಸಂಜೆ ಮನೆಕಡೆ ಹೋಗುವಾಗ ಕಾಸಿಂನ ಬರುವ ದಾರಿಗೆ ಹೇಮ ತಲೆ ಕೂದಲು ಬಾಚಿಕ್ಕೊಳುವ ನೆಪದಲ್ಲಿ ಮಹಡಿ ಮೇಲೆ ಕೂಡುತ್ತಿದ್ದಳು. ಗೌಡರ ಆಳುಮಗ ಕಾಸಿಂ ಶಬೀರ್ ನ ಹಿರಿಮಗ. ಆತ ನೋಡಲು ರೂಪವಂತ. ಉದ್ದನೆಯ ಮೂಗು , ಹಳದಿ ಬಣ್ಣದ ಕಣ್ಣುಗಳು ,ಕೆಂದುಟಿ , ಬೀರಿದಾದ ದೇಹ , ಗುಣದಲ್ಲು ನಾಜೂಕಿನ ಹುಡುಗ ಕಾಸಿಂನನ್ನು ಕಂಡ ಹೇಮ ಮನಸೋತಿದ್ದಳು. ಅವನ ದಿನದ ಚಟುವಟಿಕೆಗಳ ಗಮನಿಸುತ್ತಿದ್ದ ಹೇಮ ಅವನ ಅನುಗಾಲದ ಹಿಂಬಾಲಕಿಯಾಗಿ ತನ್ನ ಮನವನ್ನು ಮತ್ತು ಕ್ಷಣವನ್ನು ಅರ್ಪಿಸಿದ್ದಳು. ತನ್ನಲ್ಲಿದ್ದ ಸೆಳತವನ್ನು ಕಾಸಿಂನಿಗೆ ಹೇಳದೆ ಎದೆಯ ತುಂಬ ಕಾಸಿಂನ ಛಾಯೆ ಹೆಣೆದು ಸಂಜೆ ಹೂವಿನಂತೆ ಮೊಗ್ಗಾಗಿ ಅರಳದೆ, ಬಾಡದೆ ನರಳುತ್ತಿದ್ದಳು.
ಇತ್ತ ದುಡಿಮೆಯ ಕಡಲಿಗೆ ಸಿಕ್ಕ ಅಪ್ಪ. ದುಡ್ಡಿಗೆ ದುಡ್ಡು ಕೂಡಿಟ್ಟು ಅಕ್ಕನ ಮದುವೆ ಮಾಡಲು ಹೆಣಗುತ್ತಿದ್ದರೆ. ಕಿರಿ ಮಗಳು ಹೇಮ ಪ್ರೇಮದ ಹಿಬ್ಬನಿಗೆ ಮೈಯೊಡ್ಡಿ ನಿಂತಿದ್ದಾಳೆ.
ಕಾಸಿಂನಿಗೆ ಬೆಳಗ್ಗೆ ಕೆಲಸ ಹಿಡದು ಹೊತ್ತು ಮುಣುಗುವವರೆಗೂ ಕೈ ತುಂಬಾ ಕೆಲಸದ ನಡುವೆ ಆತ ಈ ಪ್ರೀತಿಯ ಅಹವಾಲಿಗೆ ಕಿವಿಕೊಡದೆ ಅವನ ಪಾಡಿಗೆ ಕಾಯಕ ನಿರತನಾಗುದ್ದ.
ಕಾಸಿಂ ಎತ್ತುಗಳಿಗೆ ನೀರು ಕುಡಿಸಲೆಂದು ಸರ್ಕಾರಿ ಬೋರ್ ವೆಲ್ ಹತ್ತಿರ ಬಂದರೆ ಹೇಮ ಕೂಡ ನೀರು ಬಿಂದಿಗೆ ಹಿಡಿದು ಬರುವಳು ಈ ತರಹದ ವೈಯಾರ ಕಂಡ ಹೇಮಳ ಮನೆಯ ಪಕ್ಕದ ಮನೆಯವರಾದ ಪಾರವ್ವ ಆ ದಿನ ಸಂತೆಯಲ್ಲಿ ಉದ್ದೇಶ ಪೂರ್ವಕವಾಗಿ ಶಾಣಪ್ಪನ ಅಂಗಡಿ ಮುಂದೆ ಟೀಕಿಸುತ್ತಾ ಹೇಮಳ ನಡತೆ ಬಗ್ಗೆ ಹೀಯಾಳಿಸಿ ಮಾತನಾಡುತ್ತಿದ್ದಳು.
ಪಾರವ್ವನ ಮಾತು ಕೇಳಿ ಮನೆ ಧಾವಿಸಿದ ಶಾಣಪ್ಪ...
(ಮುಂದೆ ಇನ್ನೂ ಇದೆ. ಮುಂದಿನ ಸೋಮವಾರ ಕಾದು ಓದಿ)
Interesting stori
ಪ್ರತ್ಯುತ್ತರಅಳಿಸಿ