ನಾ ಕಂಡ ಮುದ್ದ ಪೋರಿ ಅವಳು....



                ನಾ ಕಂಡ ಮುದ್ದ ಪೋರಿ ಅವಳು....  


ಮನದಲ್ಲಿ ಏನಾದರೂ ಬರೀಬೇಕು ಎಂಬ ಹಂಬಲದಲ್ಲಿ  ಯೋಚ್ನೆ ಮಾಡುತ್ತಾ ಕುತ್ತಿದ್ದಾಗ ಅಮ್ಮ ಕೈಯಲ್ಲಿ ಟೀ ಕೊಟ್ಟಾಗ ಸೂರ್ಯ ಮುಳುಗುವ ಸಮಯ ಅಂಗಳದಲ್ಲಿ ಹೆಜ್ಜೆ ಹಾಕುವಾಗ   ಮುಡ್ಡಿದ್ದೇ ಈ ಕಲ್ಪನೆಯ ಹುಡುಗಿ  ಅದ್ರಲ್ಲಿ ಬೇರೆ ರೆಡ್ಡಿ WhatsApp ನಲ್ಲಿ  ಇವತ್ತು sunday ಅಂತ message ಬೇರೆ ಮಾಡಿ ತಲೆಲಿ ಹುಳಾ ಬಿಟ್ಟಿದ್ದ ಅದ್ಕೆ ಈ ಕಥೆ ನನ್ನಲ್ಲಿ ಮೂಡಿ ಬಂತು ಥಾಂಕ್ ಯು ರೆಡ್ಡಿ ನೆನಪ ಮಾಡಿದಕ್ಕೆ...ಸರಿ ಕಥೆಗೆ ಬರೋಣ ಮಾತು ಜಾಸ್ತಿ ಆಯಿತು ಅಲ್ವ..

ಅವಳಿಗೆ  ಅಡಂಬರದ ಜೀವನ ಇಷ್ಟ ಇಲ್ಲ, ಇದ್ದದರಲ್ಲಿ  ಜೀವನ ಸಾಗಿಸಬೇಕು ಅಷ್ಟು ಸರಳ ಜೀವಿ ಅವಳು .ಅವಳು ಎಲ್ಲಾ ಹುಡುಗಿರ ತರಹ ಅವಳೂ ಫ್ಯಾಶನ್ ಮಾಡ್ಬೇಕು ಅಂತ ಯಾವತ್ತೂ    ನ್ನಿಸಿಲ್ಲ .ಅವಳು  ಚಿಕ್ಕ ಚಿಕ್ಕ ವಿಷಯದಲ್ಲಿ ಖುಷಿ ಪಡೋ ಹುಡುಗಿ .

 ಬಡತನ ಕಂಡವಳ್ಳಲ್ಲ ,ಆದ್ರೂ ಅವಳು  ಶ್ರೀಮಂತ್ತೇ ಅಂತ ಯಾರಿಗೂ ತೋರಿಸಿಕೊಂಡಿಲ್ಲದ ಸರಳ ಜೀವಿ ಅವಳು. ಅವಳಿಗೆ ಪ್ರಾಣಿ, ಪಕ್ಷಿ , ಮತ್ತೆ ಹೊಲ ,ಗದ್ದೆ, ಹಸುಗಳ ಹಾಲುಕರೆಯೋದರಲ್ಲಿ ಒಲುವು ಜಾಸ್ತಿ ಮತ್ತು ಅವಳ ತೋಟದ ಹೂ ದೇವರಿಗೇ ಓರೆತು ಮಾರಾಟಕ್ಕಲ್ಲ ಅವಳು ಬೆಳೆಯೋ ತರಕಾರಿ ಬಡವರ ಊಟಕ್ಕೆ ಸೀಮಿತ ಅವಳ ಒಂತರ lady ಬುದ್ಧ ನ ಹಾಗೆ ಯಾವತ್ತು ಯಾವುದಕ್ಕೂ ಆಸೆ ಪಟ್ಟವಳಲ್ಲಆಸೆಯೇ ಕಷ್ಟ ಕ್ಕೆ ಮೂಲ ಅಂದು ಕೊಂಡವಳು ಧಾನ ಧರ್ಮ ದಲ್ಲಿ ಮೇಲುಗೈ ಅವಳದು ,ಯಾರಿಗೂ ಕೇಡು ಬಯಸದ ಜೀವ ಅದು ಇನ್ನೊಬ್ಬರ ಖುಷಿಲಿ ಸಂತೋಷ ಕಾಣೋ ಹುಡುಗಿ ಅವಳು .ಅವಳಿಗೆ ಹಿರಿಯರು ಕಂಡ್ರೆ ಎಲ್ಲಿಲೀದ  ಪ್ರೀತಿ.ಮಗುವಿನ ಮನಸು ಅವಳದು ಸಾಹಾಯ ಮಾಡೋದರಲ್ಲಿ ಮೇಲುಗೈ .ಅವಳು ಒಂದು ಸುಶೀಲ ಕುಟುಂಬದಲ್ಲಿ ಬೆಳೆದವಳು .ಅವಳಿಗೆ ಆದ್ಯತ್ಮಿಕದಲ್ಲಿ ಒಲವು ಜಾಸ್ತಿ ಪುಸ್ತಕಗಳೇ ಅವಳ ಪ್ರಪಂಚ.ಮೂಕ ಪ್ರಾಣಿಗಳೇ ಅವಳ ಸ್ನೇಹಿತರು ಅವಳು ಒಂತರ ತ್ಯಾಗಮಯಿ . 


ಅವಳ ಪ್ರಕಾರ ಹಣನ  ಹೇಗೆ ಸಂಪಾದಿಸಬೇಕೆಂದರೇ ಅನ್ಯಾಯ ,ಅಕ್ರಮದಿಂದ ಮುಕ್ತವಾಗಿ ಉತ್ಸಹಾದಿಂದ ಕೆಲಸ ಮಾಡಿ. ತನ್ನ ಶ್ರಮದಿಂದ ಬೆವರು ಸುರಿಸಿ ನ್ಯಾಯಯುತವಾಗಿ ಸಂಪಾದಿಸಬೇಕು ಎನ್ನುವದು ಅವಳ ಮನಸ್ಸು ಸಂಪಾದನೇ ಮಾಡಿದ ಹಣ ದಲ್ಲಿ ಬಡವರ ಉದ್ದಾರ ಅವಳ ಕನಸು. ಅವಳು ವಿಚಿತ್ರ ಹುಡುಗಿ ಅವಳ ಸರಿ ಅನಿಸಿದ್ದು ಅವಳ ಮಾಡ್ತಾಳೆ .ನೂರ ಜನರ ಮಾತೂ ಅವಳು ಕೇಳಲ್ಲ  ಯಾರಿಗೂ ನೋವು ಕೊಡದೆ ಇರೋ ಜೀವನ ಅವಳದು.

ಅವಳ ಬಗ್ಗೇ ವರ್ಣಿಸಲು ಪದಗಳು ಸಾಕಾಗೋಲ್ಲ ಅಷ್ಟು ಸುಂದರಿ ಮನಸ್ಸಿಂದ.ಅವಳ ಅತ್ರಾ ಸಹಾಯ ಅಂತ ಬಂದವರು ಯಾವತ್ತೂ ಕಾಲಿಕೈಯಿಂದ ಹೋಗಿಲ್ಲ. ಕಳ್ಳ ನಲ್ಲೂ ಒಳ್ಳೆ ಗುಣ ಕಾಣೋ ಇವ್ಳು ತುಂಬಾ ಮುಗ್ದ ಜೀವಿ ಕನ್ನಡಿ ಅಂತ ಮನಸ್ಸೂ ಹೊಂದಿರೋ ಇವಳು ಒಳ್ಳೆತನದಲ್ಲಿ ಅದೆಂತಹ ಶಕ್ತಿ ಇದೇ ಅಂದ್ರೆ ಅದು ಎಲ್ಲಾರನ್ನು ತನ್ನ ಕಡೆಗೆ ಭಾರಸೆಳೆಯುತ್ತದೇ ಅನ್ನೋದಕ್ಕೆ ಅವಳೇ ಸಾಕ್ಷಿ ಒಳ್ಳೆ ವಿಚಾರಕ್ಕೆ ಯಾವತ್ತೂ ಸೋಲಿಲ್ಲ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಊರು ಹಳ್ಳಿ..

ನನ್ನೂರಿನಲ್ಲಿ 'ಎಂ ಎಂ ಕಲಬುರಗಿ'..

ಕಪ್ಪು ಕಡಲು