`ಗಾಂಧಿ ಅಂಗಳ' ದ ಗಾಂಧಿ







ವಿಜಯಭಾಸ್ಕರ


 ಗಾಂಧಿ ಅಂಗಳ'ದ ಒಂದು ಸುತ್ತು...

ಭಣಗುಡುವ ಕಗ್ಗತ್ತಲಲ್ಲಿ, ಮೈ ತಣಿಸುವ ಸಂಜೆ ಗೆಂಪಿನಲ್ಲಿ ಅಹವಾಲು ಸ್ವೀಕರಿಸದ ಮುನಿದ ಗೆಳತಿಯ ಸೆರಗಿನ ಅಂಚಿನಲ್ಲಿ ಕಾಯ್ದುಕುಳಿತ ಸೂರ್ಯನಿಗೂ ಚಡಪಡಿಕೆ‌ ಸಂಜೆಯಾದರೆ, ಭಾತಕ್ಕೀಗ 65 ರ ಸ್ವಾತಂತ್ರ್ಯ ಸಂಭ್ರಮ. ಅಲ್ಲಿ ಗಾಂಧಿಬೆಳಕು, ಗಾಂಧಿನವಿರು, ಗಾಂಧಿಹೆಜ್ಜೆ, ಗಾಂಧಿಕನಸು ಎಲ್ಲವೂ ಸಾಕಾರವಾದ ದಿನ ಅದು. ಗಾಂಧಿ ಎಂದರೆ ಒಂದೊಮ್ಮೆ ಉಸಿರು ಬಿಗಿ ಹಿಡಿದಂತಾಗುವುದು. ಅವಲೋಕನೆಗು ನಿಲುಕದ ವ್ಯಕ್ತಿತ್ವ. ಅಂತಹ ವ್ಯಕ್ತಿತ್ವವುಳ್ಳ ದೇಶದ ಮಹಾತ್ಮ ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಂಗಳದಲ್ಲಿ ಕೋಲುಹಿಡಿದು ತದೆಕಚಿತ್ತದ ನಗುಬಿರುತ್ತ ನಿಂತಿದ್ದಾರೆ.
ಹಾ ..ಹೌದು ನೀವು ಗಾಂಧಿಯನ್ನು ನೋಡಬೇಕೆ..!
ಬನ್ನಿ ಹಾಗಿದ್ದರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಂಗಳಕ್ಕೆ.
ಸುಲಲಿತ ರಾಮಗೀತೆಗಳಿಂದ ಮೈ ನವಿರೇಳುಸುವ ಹಾಸು ಹುಲ್ಲಿನಿ ಕಾಡುಬಂಡೆಯ ಕಟ್ಟೆಯ ಮೇಲೆ ಅಗಮ್ಯವಾಗಿ ನಿಂತಿದ್ದಾರೆ ಗಾಂಧಿ.


ಗಾಂಧಿ ಅಂಗಳಕ್ಕೆ ಹೋಗಬೇಕಾದ ಮಾರ್ಗ ನೀವು ಬಲ್ಲಿರಾ.!
ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ಹೊಳ ಹೊಕ್ಕರೆ ಅಗೋಚರವಾಗಿ ತನ್ನಂತ ಸೆಳೆಯುವ ತಾಣ  `ಗಾಂಧಿ ಅಂಗಳ'.
ಗಾಂಧಿ ಅಂಗಳಕ್ಕೆ ಹೋದ ಪ್ರತಿ ಒಬ್ಬರು ಒಂದು ನಿಮಿಷ ಕುಳಿತು ಹೋಗೋಣ ಎಂದು ಹೇಳಲೆಬೇಕು.
ಅಕ್ಟೊಬರ್ 2 2015 ರಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಂಗಳದಲ್ಲಿ `ಗಾಂಧಿ'ಜೀ ಹುಟ್ಟಿದರು. ಘನತವೆತ್ತ ಮಾನ್ಯ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು ಶ್ರೀ ಸಿದ್ದರಾಮಯ್ಯ ಅವರು `ಗಾಂಧಿ ಅಂಗಳ'ವನ್ನು ಲೋಕಾರ್ಪಣೆ ಮಾಡಿದರು.
ಗಾಂಧಿ ಎಲ್ಲಕಡೆ ಇರುತ್ತಾನೆ. ಅದರಲ್ಲಿ ಏನು ವಿಶೇಷತೆಗಳು ಎಂದು ಕೇಳುವ ಜನರು ಇದ್ದಾರೆ. ಗಾಂಧಿ ಅಂಗಳಕ್ಕೆ ತನ್ನದೆ ಆದ ವೈಶಿಷ್ಟ್ಯತೆಗಳಿವೆ,ತನ್ನ ಬೆಳಕಿನ ಮೂಲಕ ಎಲ್ಲ ಸಮುದಾಯದ ಜನರನ್ನು ಆಕರ್ಷಿಸುವ ವಿಶೇಷತೆಗಳು ಗಾಂಧಿ ಅಂಗಳಕ್ಕೆ ಇದೆ.


ಗಾಂಧಿ ಅಂಗಳದ ವಿಶೇಷತೆಗಳು : 
ನೋಟುಗಳಲ್ಲಿ ನಗುವ ಗಾಂಧಿಗೂ, ಗಾಂಧಿ ಅಂಗಳದ ಗಾಂಧಿಗೂ ಸಾಗರದಾಚೆಗಿನ ಗೌಪ್ಯ ವ್ಯತ್ಯಾಸವಿದೆ. ನೋಟಿನ ಗಾಂಧಿ ಮುಗುಳು ನಗುತ್ತಾನೆ ಆದರೆ ಗಾಂಧಿ ಅಂಗಳದ ಗಾಂಧಿ ಮನದುಂಬಿ ನಗುತ್ತಾ ವಿಶ್ವದ ಶಾಂತಿಗೆ ಕರೆಕೊಡುತ್ತಾನೆ. ಆ ಗಾಂಧಿಗೆ ದುಂಬಾಲು ಬೀಳುವ ಜನರಿದ್ದಾರೆ. ಆದರೆ ಈ ಗಾಂಧಿಗೆ ಶಾಂತಿಧೂತರ ಅನುಯಾಯಿಗಳಿದ್ದಾರೆ . ಆ ಗಾಂಧಿಗೆ ಭ್ರಷ್ಟರ ಕಲೆಗಳು ಅಂಟಿದೆ, ಆದರೆ ಈ ಗಾಂಧಿಗೆ ಹೂ ಸೋಸುವ ಮಗುವಿನ ತುಟಿಯ ಲಾಲರಸ ಮೆತ್ತಿದೆ. ಅದು ನಸುಗಪ್ಪು. ಇದು ಸಿಹಿಹೆಪ್ಪು. ಎರಡರಲ್ಲಿ ಗಾಂಧಿ ತತ್ವವಿದೆ. ಎರಡರಲ್ಲೂ ಗಾಂಧಿ ಸತ್ವವಿದೆ. ಮಾನವನ ಕೇಡು ಬುದ್ದಿಮತೆಯಿಂದ ನೋಟಿನ ಗಾಂಧಿ ನಲುಗಿದ್ದಾನೆ. ಆದರೆ ಗಾಂಧಿ ಅಂಗಳದ ಗಾಂಧಿ ಸಮಾನ ಮನಸುಳ್ಳ, ಗಾಂಧಿ ಸತ್ವಗಳ ಆವಾಸಿಸುವ ಜನರಿಂದ ನಿಮಾತೃವಾಗಿದ್ದಾನೆ. ಆದ ಕಾರಣ ಗಾಂಧಿ ಅಂಗಳದ ಗಾಂಧಿ ನೋಟಿನ ಗಾಂಧಿಯಂತೆ ನಲುಗದೆ, ಕುಗ್ಗದೆ, ಸಂತಸದಿಂದ ಹಿಗ್ಗಿ ನಿಂತಿದ್ದಾನೆ.


ಗಾಂಧಿ ಅಂಗಳದಲ್ಲಿ `ರಾಮಗೀತೆ'ಗಳು : 
ಗಾಂಧಿ ಅಂಗಳಕ್ಕೆ ಭೇಟಿ ನೀಡಿದಾಗ ನಮ್ಮ ಕರ್ಣಗಳಿಗೆ ಮೊದಲು ಆಸ್ವಾದಿಸುವುದು `ರಾಮಗೀತೆ'ಗಳು. ಗಾಂಧಿ ರಚಿತ ರಘುಪತಿ ರಾಘವ ರಾಜಾರಾಮ್ ಗೀತೆ ಹಿಡಿದಿನ ಅಂಗಳದ ಮೂಲೆ ಮೂಲೆಗೂ ಪಸರಿಸುತ್ತದೆ. ನೊಂದ ಜನರಿಗೆ ಹಿಮ್ಮು ನೀಡುತ್ತದೆ. ಹೈರಾಣಾದ ಜನರಿಗೆ ಬೆನ್ನಾಸರೆ ಆಗುತ್ತದೆ. ಜೀವಕ್ಕೆ ಉಸಿರಿನಂತೆ, ಕಡಲಿಗೆ ಕೆಂಪು ಸೂರ್ಯನಂತೆ. ಗಾಂಧಿ ಅಂಗಳದಲ್ಲಿ ಪ್ರತಿನಿತ್ಯ `ರಾಮಗೀತೆಗಳು' ರಾರಾಜಿಸುತ್ತಾ ಇರುತ್ತವೆ. ಗಾಂಧಿ ಅಂಗಳದ ಸುತ್ತ ಕಾಡುಬಂಡೆಯ ಮೇಲೆ ಗಾಂಧಿ ಉಪದೇಶಗಳು, ಗಾಂಧಿಯ ಮೌನ, ಗಾಂಧಿಯ ತ್ಯಾಗ, ಗಾಂಧಿಯ ಜೀವನ, ಗಾಂಧಿಯ ಬಾದೆ, ಗಾಂಧಿಯ ತ್ವರಿತ ಹೋರಾಟಗಳನ್ನು ಕರಾರುವಕ್ಕಾಗಿ ಬಿಂಬಿಸುವ ಸಾಲುಗಳು ಕಾಣಬಹುದು. ಬೃಹಾತ್ತಾಕಾರದ ಶೀಲೆಯ ಮೇಲೆ ಗಾಂಧಿ ಉಪದೇಶಿಸಿದ 18 ರಚನಾತ್ಮಕ ಕಾರ್ಯಕ್ರಮಗಳ ಸಾಲುಗಳು ಕಾಣಬಹುದು.

ಗಾಂಧಿ ಬರೆದ ಲೇಖನದ ಪ್ರತಿ..
ಬಹುಮುಖ್ಯ ಮತ್ತು ಜೀವನದಲ್ಲಿ ಸಂದರ್ಶಿಸಬೇಕಾದ ವಸ್ತು ಗಾಂಧಿ ಅಂಗಳದಲ್ಲಿ ಇದೆ. `ಹರಿಜನ' ಎನ್ನುವ ಪತ್ರಿಕೆಗೆ ಮಹಾತ್ಮ ಗಾಂದಿಜೀ ಅವರು ಅಗಸ್ಟ್ 16 1947 ರಲ್ಲಿ ಬರೆದ ಲೇಖನದ ಛಾಯಪ್ರತಿಯನ್ನು ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ದೋಡ್ಡ ಫ್ರೇಮ್ ಹಾಕಿಸಿ ಗೋಡೆ ಬರಹದ ರೂಪದಲ್ಲಿ ಮುದ್ರಿಸಿದ್ದಾರೆ.


ಆ ಲೇಖನ ಒಂದೊಮ್ಮೆ ಓದಿ ಪುನಿತರಾಗಬೇಕು.. ಆ ಸಾಲುಗಳು ಹೀಗಿವೆ.... ನಾಳೆ ನಸುಕು ಹರಿದರೆ ಮೂಡಲಿರುವ ಜಗತ್ತು ಎಂಥದ್ದೋ ಅದರ ರೀತಿಯೇನೊ ರಚನೆಯೇನೊ; ಈ ವಿಷಯದ ಬಗ್ಗೆ ಈಗಿರುವಷ್ಟು ಊಹಾಪೋಹ ಮಾನವ ಇತಿಹಾಸದಲ್ಲೆ ಹಿಂದೆಂದೂ ಇದ್ದಿರಲಿಕ್ಕಿಲ್ಲ... ಹೀಗೆ ಮುಂದುವರೆಯುತ್ತದೆ.
ಗಾಂಧಿಜಿ ಅವರ ಲೇಖನದ ಸಾಲುಗಳಲ್ಲಿ ಸ್ವಾಂತತ್ರ್ಯದ ಅಪಹಪಿಯ ತೃಪ್ತಿ ಇದೆ ನೀಟ್ಟುಸಿರಿದೆ, ಎಂದಿನಂತೆ ನಾಳೆಯ ಚಿಂತೆ ಇದೆ, ಭವಿಷ್ಯ ಭಾರತದ ಕನಸಿನ ಕುಲುಮೆ ಇದೆ. ಯುವ ಪೀಳಿಗೆಗೆ ಕಿವಿಮಾತಿದೆ. ಸ್ಯಾತಂತ್ರ್ಯ ಸಿಕ್ಕ ಕ್ಷಣ ಬರೆದ ಲೇಖನವನ್ನು `ಹರಿಜನ' ಪತ್ರಿಕೆ ಮರುದಿನ ಅಂದರೆ ಅ.16 ರಂದು ಮುದ್ರಿಸಿತ್ತು.
ಗಾಂಧಿ ಲೇಖನದ ಪ್ರತಿಯ ಚಿತ್ರವನ್ನು ಮರೆಯದೆ ಓದಿ. ಗಾಂಧಿ ಅಂಗಳಕ್ಕೆ ಹೋದರೆ ಲೇಖನದ ಪ್ರತಿಯನ್ನು ನೋಡಿ.  ಒಂದು ಹೆಜ್ಜೆ ಗಾಂಧಿ ತನವನ್ನು ರೂಡಿಸಿಕೊಳ್ಳುವ ಆಶಯದ ಮೇರೆಗೆ ವಾರ್ತ ಮತ್ತು ಸಾರ್ವನಿಕ ಇಲಾಖೆ ಗಾಂಧಿಜೀ ಅವರ ಲೇಖನವನ್ನು ಗಾಂಧಿ ಅಂಗಳದಲ್ಲಿ ಸ್ಥಾಪಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಊರು ಹಳ್ಳಿ..

ಕಪ್ಪು ಕಡಲು

ನನ್ನೂರಿನಲ್ಲಿ 'ಎಂ ಎಂ ಕಲಬುರಗಿ'..