ಅಗಸಿಯ ಕಾಲಗರ್ಭದಲ್ಲಿ....
ಎತ್ತರದ ಕಮಾನಿಗೆ ಕತ್ತಲು ಆವರಿಸಿದ್ದಂತೆ ಕತ್ತಲು ನಮ್ಮೂರನ್ನು ಆವರಿಸಿಕೊಳ್ಳುತ್ತಿತ್ತು. ಆ ಸಂಜೆಯಲ್ಲಿ ನಮ್ಮ ಮನೆ ಮುಂದಿನ ಹಾಸುಗಲ್ಲು ಗೊದೂಳಿನಿಂದ ಮುಚ್ಚಿಕೊಳ್ಳುತ್ತಿತ್ತು. ಬಸ್ಸಪ್ಪನ ಹೋಟಲಿನ್ನಲ್ಲಿ ಕೈ ಎದ್ದಿ ನೀಡುವ `ಛಾ`ಕ್ಕೆ ದುಂಬಿರುವ ಜನಸ್ತೋಮ. ವಿಚಲಿತ ಹಾಗೂ ಆಕರ್ಷಕವಾದದ್ದು ನಮ್ಮೂರಲ್ಲಿ `ಅಗಸಿಯ` ಮಹಾದ್ವಾರ.
ಹನುಮ ದೇವಾಲಯವನ್ನು ಶುಚಿಗೊಳಿಸಿ,ಅಲ್ಲಿದ್ದ ಗಿಡ,ಗಂಟೆಗಳನ್ನು ತೆಗೆದು ದೇವಾಲಯಕ್ಕೆ ಅನುಗುಣವಾಗಿ ಗೋಡೆಕಟ್ಟಿ ಹಾಸುಗಲ್ಲನ್ನು ಹಾಸಿ, ಬೇಳಕಿನ ವ್ಯವಸ್ಥೆ, ನೀರಿನ ಸರಬರಾಜು, ಪ್ರತಿ ಹನುಮ ಜಯಂತಿಯಂದು ವಿಶೇಷ ಹೋಮಗಳನ್ನು ಮಾಡುವರು. ಊರ ಜನ ಪ್ರತಿದಿನ ಈ ದೇವಾಲಯಕ್ಕೆ ಬಂದು ದರ್ಶನ ಪಡೆದು ಸ್ವಲ್ಪ ಸಮಯ ಕುಳಿತು ಮನ ತಣಿಸಿಕೊಳ್ಳುತ್ತಾರೆ. ಅಗಸಿಯ ಮಹದ್ವಾರದ ಕರಾಳ ಇತಿಹಾಸದ ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ಹನುಮ ದೇವಾಲಯವನ್ನು ಈ ಯುವಕರ ನೇತೃತ್ವದಲ್ಲಿ ಮರುಜೀವ ಪಡೆದು. ಭಕ್ತಿಯ ರಾರಾಜುವಿಕೆಯಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ