ಕೆಂಪು ಬಸ್ಸಿನ ಹುಡುಗಿ ಮತ್ತು ಸತೀಶ




 ಹಿಂದಿನ ರಾತ್ರಿ ಬರೆಯಲೆಂದು ತೆಗೆದಿಟ್ಟಿದ್ದ ನಾಲ್ಕಾರು ಹಾಳೆ ಬಣಗುಡುತ್ತಾ ಹಾಸಿಗೆ ಬುಡದಲ್ಲಿ ಬಿದ್ದಿದ್ದವು. ಒಪ್ಪಿದ ಕವಿತೆಗಳು ಜ್ಞಾಪಕಕ್ಕೆ ಬಾರದೆ ಕಾಡುತ್ತಾ ನನ್ನ ಎದೆ ಆಳದಲ್ಲಿ ಅಡಗಿ ಏಗ್ಗಿಲ್ಲದೆ ಚುಚ್ಚುವ ಪರಿ ಸಹಿಸಲಾಗದೆ ಕೊನೆರಾತ್ರಿ ಅನಿಸುತ್ತಲೆ ಒತ್ತುವ ಕಣ್ಣಿಗೆ ಖೊ ಕೊಡತ್ತಾ ಬರೆಯಲೆತ್ನಿಸಿದೆ.


ಕನಸಿನ ಸರಿ ಸಮವಾಗಿ ಕಾಡುವ ಹುಡುಗಿ‌ ಕವಿತೆಗಳಲ್ಲಿ ಇಳಿಯಲು ಯತ್ನಿಸಿದಳು ಮುತ್ತಿನ ಘಮಲು ಅಂಟಿಸಲು,ಎದೆ ಸೀಳುವ ನೋಟ ಬೀರಲು ತುಟ್ಟಿಕಚ್ಚಿ ತೊಂಟವಾಗಿ ನೋಡುವ ಹುಡುಗಿ ಕವಿತೆ ಬರೆಯುವಾಗ ಮುನ್ನುಡಿ,ಅವಳೇ ಆರಂಭಕ್ಷರ. 
 ಮೌನವೂ ಒಂದು ಭಾಷೆ. ಹಾಗೇನಿಸಿದ್ದು ತೀರ ಇತ್ತಿಚಿಗೆ ನನ್ನನ್ನು ನಾ! ಅರಿಯಲು ಏಲ್ಲೊ ಒಂಟಿಗನಾಗಿದ್ದೇನೆ ಅನಿಸುತ್ತಲ್ಲಿದೆ.

ನಡೆದು ಕರಾಳ ಇತಿಹಾಸವಾದ ಒಂದು ಕಹಿ‌ ನೆನಪನ್ನು ಒಲ್ಲದ ಮನಸ್ಸಿನಿಂದ ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ.

ಕೆಂಪು ಬಸ್ಸಿನಿಂದಿಳಿದು ಬರುತ್ತಿದ್ದ ಹುಡುಗಿಯ ನೋಡಲೆಂದು ಬಿಡಾರ ಹುಡಿದ್ದ ಕೆಲ ಪುಂಡ ಹುಡುಗರು ಅಂತೆನಿಲ್ಲ ಉಗ್ರ ಪ್ರೇಮಿಗಳಂತೆ ಪೋಸು ಕೊಡುವ ಕಾಲೇಜು ವಿದ್ಯಾರ್ಥಿಗಳು ಬಸ್-ನಿಲ್ದಾಣದ ಖಾಯಂ ಪ್ರೇಕ್ಷಕರಾಗಿದ್ದರು.


ಗಿರಿಗಲ್ಲಿಯ ಪ್ರತಿ ಜನರಲ್ಲೂ ಅಸಮಾನತೆ ಕಾಣುವ ಶಾಮ್ ಭಟ್ಟರು ಬರುತ್ತಾರೆಂದು  ಆ ಗಿರಿಗಲ್ಲಿ ಜನ ನೆಲಸಾರಸಿ, ಗುಡಸಿ,ಬಾಗಿಲು ಚಿಲ್ಕಾ ಹಾಕಿ ಬಡಪಾಯಿ ಜನ ಅಸ್ವಾತಂತ್ರ್ಯದ ತರ ಮುಸುಕು ಹಾಕಿಕೊಂಡು ಮನೆಯಲ್ಲಿ ಸೂರ್ಯನ ಬೆಳಕು ಸೊಕದಂತೆ, ಶಾಮ್ ಭಟ್ಟರ ಕಣ್ಣಿಗೆ ಬೀಳುವುದಿಲ್ಲ .
ಅಷ್ಟಕ್ಕೂ ಈ ಶಾಮ್ ಭಟ್ಟರು ಹೋಗುವುದಾದರೂ ಎಲ್ಲಗೆ ಅಂಥ ಒಬ್ಬರು ಕೇಳುವುದು ದೂರವುಳಿತು ಚಕಾರ ಎತ್ತಿದರು ನಮಗೆಲ್ಲಿ ತೊಂದರೆ ಎಂದು ಯಾರೊಬ್ಬ ಗಿರಿಗಲ್ಲಿ ನಿವಾಸಿ ಕೇಳಲಿಲ್ಲ.  ಆಗಿನ್ನು ಮೂಡ ವೈಚಾರದ ಬಿಡಾಗಿದ್ದ ಗಿರಿಗಲ್ಲಿ‌ ಅಗ್ರಹಾರದ ಕೈ ಗೊಂಬೆಯಾಗಿತ್ತು. ಉಸಿರಾಡುವಲ್ಲಿ ಏರು ಪೇರಾದರೂ ಆ ರಾತ್ರಿ  ಊರ ಅಗಸಿ ಕಾಯುವ ಶಿಕ್ಷೆ ಆದಿತು ಎಂದು ಗಿರಿಗಲ್ಲಿ ಜನರು ಅಗ್ರಹಾರದ ಮಂದಿಯ ಅನಿಷ್ಟ‌ ಪದ್ಧತಿಗಳ‌ ಅನಿವಾರ್ಯ ದಾಸರಾಗಿದ್ದರು.

ಇಂತಹ ಇಕ್ಕಟ್ಟಿನ ನೀಚ ರೂಢಿಯಲ್ಲಿ ಗಿರಿಗಲ್ಲಿ ಕೆಳಜನರ ಮಕ್ಕಳು ಆ ಕೆಂಪು ಬಸ್ಸಿನಲ್ಲಿ ಬರುವ ಹುಡುಗಿಯ ಉಗ್ರ ಪ್ರೇಮಿಗಳಲ್ಲಿ ಇವರುಗಳು ಒಂಥರಾ ಪ್ರೇಮಿಗಳೆ. ಆದರೆ ಕೆಂಪು ಬಸ್ಸಿನ ಹುಡುಗಿ ಪಕ್ಕದ ಊರಿನ ಅಗ್ರಹಾರದ ಹಿರಿ ಮನೆತನದ ಆಚಾರ್ಯರ ಮಗಳಾಗಿದ್ದಳು .
ಜೀವಕ್ಕಿಂತ ಅಪಾರ ಮಾನ. ಮಾನವನ್ನೆ ಉಸಿರಾಗಿಸಿ ಬದುಕುತ್ತಿರುವ ಗಿರಿಗಲ್ಲಿ ಕೆಳಜನರು ಮುಗ್ಧರು .ಆದರೆ ತಮ್ಮ ಶುಭ್ದತೆ ಉಳಿಸಿಕೊಳ್ಳಲು ಅಮಾಯಕ ಜನರಿಗೆ ಹೇಸಿಗೆಯ ಆಚರಣೆಗಳನ್ನು ಹೊರಿಸುವ ಶಾಮಭಟ್ಟರಂತಹ ಕಟೊರ ಮನಸುಳ್ಳ ವ್ಯಕ್ತಿಗಳಿಗೆ ಎದುರು ಹಾಕಿಕೊಂಡು ಬಾಳಲು ಅಕ್ಷರಶಃ ಗಿರಿಗಲ್ಲಿ ಕೆಳಜನರು ಅಸಾಹಯಕರು.

ಕೆಂಪು ಬಸ್ಸಿನ ಹುಡುಗಿ ನೋಡಲು ಬರುತ್ತಿದ್ದ ಸತೀಶ,ಭಿಮು,ಶಾಂತು,ಪ್ರಕಾಶರನ್ನು ಅಗ್ರಹಾರದ ಆಳುಗಳು ಧಮ್ಕಿ ಹಾಕುತ್ತಾರೆ. ಸ್ವಲ್ಪ ದಿನ ಆಕಡೆ ಹೋಗೋದು ಬೇಡ ಎಂದು ಕೊಂಡ ಹುಡುಗರು ಎಲ್ಲಾ ಮರೆತಂತೆ ನಟಿಸಲು ತೊಡಗಿದರು. ಮರೆಯುವುದನ್ನು ಮರೆತು ಬಿಡಬಹುದು. ಆದರೆ ಇದು ಪ್ರೀತಿ ಮರೆಯಲು ಆಗದು ಹೇಳುವುದಕ್ಕು ಆಗದು. ಯಾವುದಕ್ಕು ಹೇಸದ ಅಗ್ರಹಾರದ ಆಳುಗಳು ಶಾಮ್  ಭಟ್ಟರ ಗರಡಿ ಹುಲಿಗಳು. ರಕ್ತ ಹೀರುವಲ್ನಿ ನಿಸ್ಸಿಮರು. 


ಕಳೆದಂತೆ ದಿನಗಳು ಕೆಂಪು ಬಸ್ಸಿನ ಹುಡುಗಿ ಸತೀಶನ ಪ್ರೇಮದ ಬಲಗೆ ಬಿದ್ದು ಹಾಲು ತುಪ್ಪದಂತೆ ಬೆರೆತಳು. ಆದರೆ ಅಗ್ರಹಾರದ ಕಾವಲುದಾರರು ಸತೀಶನ ಮೇಲೆ ಕಣ್ಣಿಟ್ಟು ಕತ್ತಿ ಮಸೆಯುತ್ತಿದ್ದರು. ಶಾಮ್ ಭಟ್ಟರ ಕೋಪ ದಿನದಿಂದ ದಿನಕ್ಕೆ ಕುದಿಯುತ್ತಲಿತ್ತು. ಬಿಟ್ಟರೆ ಈ ಮಂದಿ ತಲೆ ಮೇಲೆ ಬಂದು ಕುಳಿತುಕೊಳ್ಳುತ್ತಾವೆ ಮುಂಡೆವು ಎಂದು ಸತೀಶನನ್ನು ಇಲ್ಲವಾಗಿಸುವುದೆಂದು ಹೋಮ ಮಾಡುವ ಕೈಗಳು ಕೊಲೆ ಮಾಡುವ ನೀಚ ಕೆಲಸಕ್ಕೆ ಇಳಿದವು. ಪ್ರೇಮದ ಅಮಲಿನಲ್ಲಿ ತೇಲಾಡುತ್ತಿರುವ ಸತೀಶ ಮತ್ತು ಕೆಂಪು ಬಸ್ಸಿನ ಹುಡುಗಿಗೆ ಮೇಲು, ಕೀಳು ಸತ್ಯ , ಮಿಥ್ಯ ಇವಾವುಗಳು ಗೊತ್ತಿಲ್ಲದ ಶುದ್ದ ಪ್ರೇಮ ಪುರಾಣವಾಗಿತ್ತು. ಸಮಾಜ ಹೇಳುವುದು ಒಂದು ಒಳಗೊಂದು ಮಾಡುವ ಮಸಲತ್ತು ಇನ್ನೊಂದು ಅಂಥ ಆ ಪ್ರೇಮಿಗಳಿಗೆ ತಿಳಿದಿರಲಿಲ್ಲ. ಊರ ಅಗಸಿಯ ಮೂಲೆಯ ಪಾಳು ಕೋಣೆಯಲ್ಲಿ ಸತೀಶನ ರಕ್ತ ಮಾಸಿದ ಕಲೆಯನ್ನು  ಅವನ ಗೆಳೆಯರಾದ ಶಾಂತು, ಭೀಮು ಇನ್ನು ಮರೆತಿಲ್ಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಊರು ಹಳ್ಳಿ..

ಕಪ್ಪು ಕಡಲು

ನನ್ನೂರಿನಲ್ಲಿ 'ಎಂ ಎಂ ಕಲಬುರಗಿ'..