ಗಜಲ್







  ಮಂಜುನಾಥ ಸರ್ಜಾಪುರ.ವಿ


ಗಜಲ್ 


ಭುವನೆಯಾಕೋ ಅಳುತಿರುವಳು ಸಂತೈಸುವವರಾರೂ ಇಲ್ಲ,
ದಿಕ್ಕು ಬದಲಿಸಿದ ಅವಳನು ಮರು ಸ್ವಾಗತಿಸುವವರಾರೂ ಇಲ್ಲ,

ಭುವನೆಯ ಬೆನ್ನೇರಿ ಆಂಗ್ಲನೆಂಬ ರಾಕ್ಷಸನು ಆರ್ಭಟಿಸಿರುವನು,
ಕೈ ಕಾಲನು ಹಿಡಿದು ಅವಳು ಕುಗ್ಗದೆ ನಿಲ್ಲಿಸುವವರಾರೂ ಇಲ್ಲ,

ಸುತ್ತಲೂ ಬಲವಂತವಾಗಿ ಆವರಿಸಿದೆ ನಮದಲ್ಲದಿದ್ದರೂ,
ಮೈಕೊಡವಿ ಅದಕೆ ಚೀಮಾರಿ ಹಾಕುವವರಾರೂ ಇಲ್ಲ,



ಮಲಿನವಾದ ಕನ್ನಡಿಯು ಮರು ಹೊಳೆಯಲೆತ್ನಿಸಿದೆ ಹೊಳಪ,
ಅದನು ಮನಸೊಳಗಿನ ಧೈರ್ಯವೆಂಬ ಕಣ್ಣೀರಿನಿಂದ ತೊಳೆಯುವವರಾರೂ ಇಲ್ಲ,

ಅವಳು ಮೇಲೆದ್ದು ನಿಂತು ನಡೆಯಲು ಆಗದೆ ಕೂತಿಹಳು,
ಕೈ ಹಿಡಿದು ಪ್ರಮಾಣಿಸಿ,ಪ್ರಾಮಾಣಿಕವಾಗಿ,ನಡೆಯುವವರಾರೂ ಇಲ್ಲ,

ಈ ಭುವನೆಯ ಸ್ವಂತ ಮಗನಂತೆ ನೀನು "ಓ ಸಮಂಥ",
ನಿನ್ನನು ಕರೆದು ಅವಳಿಗಾಗಿ ಕೈ,ಕೈ ಸೇರಿಸುವ ಹೃದಯವಂತರಾರೂ ಇಲ್ಲ,
                          

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಊರು ಹಳ್ಳಿ..

ಕಪ್ಪು ಕಡಲು

ನನ್ನೂರಿನಲ್ಲಿ 'ಎಂ ಎಂ ಕಲಬುರಗಿ'..