ಪೋಸ್ಟ್‌ಗಳು

ಕೆಂಪು ಬಸ್ಸಿನ ಹುಡುಗಿ ಮತ್ತು ಸತೀಶ

ಇಮೇಜ್
 ಹಿಂದಿನ ರಾತ್ರಿ ಬರೆಯಲೆಂದು ತೆಗೆದಿಟ್ಟಿದ್ದ ನಾಲ್ಕಾರು ಹಾಳೆ ಬಣಗುಡುತ್ತಾ ಹಾಸಿಗೆ ಬುಡದಲ್ಲಿ ಬಿದ್ದಿದ್ದವು. ಒಪ್ಪಿದ ಕವಿತೆಗಳು ಜ್ಞಾಪಕಕ್ಕೆ ಬಾರದೆ ಕಾಡುತ್ತಾ ನನ್ನ ಎದೆ ಆಳದಲ್ಲಿ ಅಡಗಿ ಏಗ್ಗಿಲ್ಲದೆ ಚುಚ್ಚುವ ಪರಿ ಸಹಿಸಲಾಗದೆ ಕೊನೆರಾತ್ರಿ ಅನಿಸುತ್ತಲೆ ಒತ್ತುವ ಕಣ್ಣಿಗೆ ಖೊ ಕೊಡತ್ತಾ ಬರೆಯಲೆತ್ನಿಸಿದೆ. ಕನಸಿನ ಸರಿ ಸಮವಾಗಿ ಕಾಡುವ ಹುಡುಗಿ‌ ಕವಿತೆಗಳಲ್ಲಿ ಇಳಿಯಲು ಯತ್ನಿಸಿದಳು ಮುತ್ತಿನ ಘಮಲು ಅಂಟಿಸಲು,ಎದೆ ಸೀಳುವ ನೋಟ ಬೀರಲು ತುಟ್ಟಿಕಚ್ಚಿ ತೊಂಟವಾಗಿ ನೋಡುವ ಹುಡುಗಿ ಕವಿತೆ ಬರೆಯುವಾಗ ಮುನ್ನುಡಿ,ಅವಳೇ ಆರಂಭಕ್ಷರ.   ಮೌನವೂ ಒಂದು ಭಾಷೆ. ಹಾಗೇನಿಸಿದ್ದು ತೀರ ಇತ್ತಿಚಿಗೆ ನನ್ನನ್ನು ನಾ! ಅರಿಯಲು ಏಲ್ಲೊ ಒಂಟಿಗನಾಗಿದ್ದೇನೆ ಅನಿಸುತ್ತಲ್ಲಿದೆ. ನಡೆದು ಕರಾಳ ಇತಿಹಾಸವಾದ ಒಂದು ಕಹಿ‌ ನೆನಪನ್ನು ಒಲ್ಲದ ಮನಸ್ಸಿನಿಂದ ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ. ಕೆಂಪು ಬಸ್ಸಿನಿಂದಿಳಿದು ಬರುತ್ತಿದ್ದ ಹುಡುಗಿಯ ನೋಡಲೆಂದು ಬಿಡಾರ ಹುಡಿದ್ದ ಕೆಲ ಪುಂಡ ಹುಡುಗರು ಅಂತೆನಿಲ್ಲ ಉಗ್ರ ಪ್ರೇಮಿಗಳಂತೆ ಪೋಸು ಕೊಡುವ ಕಾಲೇಜು ವಿದ್ಯಾರ್ಥಿಗಳು ಬಸ್-ನಿಲ್ದಾಣದ ಖಾಯಂ ಪ್ರೇಕ್ಷಕರಾಗಿದ್ದರು. ಗಿರಿಗಲ್ಲಿಯ ಪ್ರತಿ ಜನರಲ್ಲೂ ಅಸಮಾನತೆ ಕಾಣುವ ಶಾಮ್ ಭಟ್ಟರು ಬರುತ್ತಾರೆಂದು  ಆ ಗಿರಿಗಲ್ಲಿ ಜನ ನೆಲಸಾರಸಿ, ಗುಡಸಿ,ಬಾಗಿಲು ಚಿಲ್ಕಾ ಹಾಕಿ ಬಡಪಾಯಿ ಜನ ಅಸ್ವಾತಂತ್ರ್ಯದ ತರ ಮುಸುಕು ಹ...

ಅಗಸಿಯ ಕಾಲಗರ್ಭದಲ್ಲಿ....

ಇಮೇಜ್
ಅಗಸಿಯ ಕಾಲಗರ್ಭದಲ್ಲಿ....     ಸಣ್ಣಗೆ ಗಾಳಿ‌ ಬಿಸುತ್ತಾ ಅಗಸಿ ಕಡೆಗೆ ಹೋಗುವ ದಾರಿ‌ ಮಿರಿ ಮಿರಿ ಮಿಂಚುತ್ತಾ‌ ತನ್ನ ಐತಿಹಾಸಿಕ ಹೊದಿಕೆಯನ್ನು ಹೊದ್ದು ಗರ್ವದಿಂದ ನಮ್ಮೂರ ಹಳ್ಳದ ಕಿನಾರೆಯ ಪಕ್ಕ ತನ್ನ ಅಜಾನುಬಾಹು‌ ಅಡಿಗಲ್ಲಿನಿಂದ ಸ್ಥಾಪಿತವಾಗಿ‌ ನಿಂತಿರುವುದು ಸೇಡಂನ ಸಣ್ಣ ಅಗಸಿಯ 'ಅಗಸಿ' ಎತ್ತರದ ಕಮಾನಿಗೆ ಕತ್ತಲು ಆವರಿಸಿದ್ದಂತೆ ಕತ್ತಲು ನಮ್ಮೂರನ್ನು  ಆವರಿಸಿಕೊಳ್ಳುತ್ತಿತ್ತು. ಆ ಸಂಜೆಯಲ್ಲಿ ನಮ್ಮ ಮನೆ ಮುಂದಿನ ಹಾಸುಗಲ್ಲು  ಗೊದೂಳಿನಿಂದ ಮುಚ್ಚಿಕೊಳ್ಳುತ್ತಿತ್ತು. ಬಸ್ಸಪ್ಪನ ಹೋಟಲಿನ್ನಲ್ಲಿ ಕೈ ಎದ್ದಿ ನೀಡುವ `ಛಾ`ಕ್ಕೆ ದುಂಬಿರುವ ಜನಸ್ತೋಮ. ವಿಚಲಿತ ಹಾಗೂ ಆಕರ್ಷಕವಾದದ್ದು ನಮ್ಮೂರಲ್ಲಿ `ಅಗಸಿಯ` ಮಹಾದ್ವಾರ. ನಮ್ಮ ಮನೆ ಹಿಂದಿರುವ ಅಗಸಿಯ ಹಳ್ಳಕ್ಕೆ ಒಗ್ಗಿಕೊಂಡು ನಿಂತಿದೆ. `ಅಗಸಿಯ` ಹಾದಿ ದುಡಿಮೆಯ ಜನರಿಗೆ ಹೆಗಲು ನೀಡುವ ರಾಶಿಕಟ್ಟೆ, ಸೊಂಬೆರಿಗಳಿಗೆ `ಎಲೆಗಳಂತಹ` ಮಜಾಚಟಗಳ ತಾಣವು ಹೌದು. ಮಿರಿ ಮಿರಿ ಕಂಗೊಳಿಸುವ ಸೇಡಂನ ಈ `ಅಗಸಿಯು` ತನ್ನತ್ತ ಬಂದ ಜನರಿಗೆ `ಫಲಾ` ತೃಪ್ತಿ ನೀಡುತ್ತದೆ. ಈ ಅಗಸಿಯ ಸುತ್ತಲು ಬದುಕನ್ನು ಕಟ್ಟಿಕೊಳ್ಳುವ ಕೆಲ ಮನೆಗಳಲ್ಲಿ ನನ್ನದು ಒಂದು ಮನೆ. ಅಗಸಿ ಹೋಗುವ ದಾರಿಯುದಕ್ಕೂ ಶಿಲ್ಪ ಕಲೆ ಸ್ತಂಭಗಳು ಹಾರುತ್ತ ಆಕಾಶಕ್ಕೆ ಕೈ ಹಾಕುತ್ತಿವೆ. ಕಲ್ಲಿನ ಕೋಳಿಗಳೆರಡು ಎಡ-ಬಲದಲ್ಲಿ ಕೂಗೊ ಹಾಗೆ ಎದ್ದು ಕಾಣುತ್ತವೆ. ...

ಗಜಲ್

ಇಮೇಜ್
  ಮಂಜುನಾಥ ಸರ್ಜಾಪುರ.ವಿ ಗಜಲ್   ಭುವನೆಯಾಕೋ ಅಳುತಿರುವಳು ಸಂತೈಸುವವರಾರೂ ಇಲ್ಲ, ದಿಕ್ಕು ಬದಲಿಸಿದ ಅವಳನು ಮರು ಸ್ವಾಗತಿಸುವವರಾರೂ ಇಲ್ಲ, ಭುವನೆಯ ಬೆನ್ನೇರಿ ಆಂಗ್ಲನೆಂಬ ರಾಕ್ಷಸನು ಆರ್ಭಟಿಸಿರುವನು, ಕೈ ಕಾಲನು ಹಿಡಿದು ಅವಳು ಕುಗ್ಗದೆ ನಿಲ್ಲಿಸುವವರಾರೂ ಇಲ್ಲ, ಸುತ್ತಲೂ ಬಲವಂತವಾಗಿ ಆವರಿಸಿದೆ ನಮದಲ್ಲದಿದ್ದರೂ, ಮೈಕೊಡವಿ ಅದಕೆ ಚೀಮಾರಿ ಹಾಕುವವರಾರೂ ಇಲ್ಲ, ಮಲಿನವಾದ ಕನ್ನಡಿಯು ಮರು ಹೊಳೆಯಲೆತ್ನಿಸಿದೆ ಹೊಳಪ, ಅದನು ಮನಸೊಳಗಿನ ಧೈರ್ಯವೆಂಬ ಕಣ್ಣೀರಿನಿಂದ ತೊಳೆಯುವವರಾರೂ ಇಲ್ಲ, ಅವಳು ಮೇಲೆದ್ದು ನಿಂತು ನಡೆಯಲು ಆಗದೆ ಕೂತಿಹಳು, ಕೈ ಹಿಡಿದು ಪ್ರಮಾಣಿಸಿ,ಪ್ರಾಮಾಣಿಕವಾಗಿ,ನಡೆಯುವವರಾರೂ ಇಲ್ಲ, ಈ ಭುವನೆಯ ಸ್ವಂತ ಮಗನಂತೆ ನೀನು "ಓ ಸಮಂಥ", ನಿನ್ನನು ಕರೆದು ಅವಳಿಗಾಗಿ ಕೈ,ಕೈ ಸೇರಿಸುವ ಹೃದಯವಂತರಾರೂ ಇಲ್ಲ,                           

ನಂದೂ ಒಂದಿರಲಿ

ಇಮೇಜ್
ನಿಖಿಲ್ ರಾಜ್.ಕಲಬುರಗಿ  ನಂದೂ ಒಂದಿರಲಿ ನಿ ನಿನ್ನ ಕನಸಲ್ಲಿ ಏನೇನೊ ಕಂಡಿರಬಹುದು ಅದರಲ್ಲಿ ಕೆಲವು ಮರೆಯದೆಯೂ ಇರಬಹುದು ಆ ನಿನ್ನ ನೆನಪುಗಳಲ್ಲಿ ನಂದೂ ಒಂದಿರಲಿ ನಿ ನಿನ್ನ ಮನಸಲ್ಲಿ ಏನೇನೊ ಇಟ್ಟಿರಬಹುದು ಅದರಲ್ಲಿ ಕೆಲವು ನಿನ್ನ ಮನಸಿಗಂಟಿರಬಹುದು ಆ ನಿನ್ನ ಭಾವನೆಗಳಲ್ಲಿ ನಂದೂ ಒಂದಿರಲಿ                                         

ಡಾ.ಕಾಶಿನಾಥ ಅಂಬಲಗೆ ಚಿಪ್ಪಿನೊಳಗಿನ ಮುತ್ತು ಹೆಕ್ಕಿ ಪೋಣಿಸಿದ ಕವಿ

ಇಮೇಜ್
ಮಹಿಪಾಲರೆಡ್ಡಿ ಮುನ್ನೂರ್   ಡಾ.ಕಾಶಿನಾಥ ಅಂಬಲಗೆ ಚಿಪ್ಪಿನೊಳಗಿನ ಮುತ್ತು ಹೆಕ್ಕಿ ಪೋಣಿಸಿದ ಕವಿ   ನೀನೊಲಿದರೆ ಕಾವ್ಯವೇ! ಕೊರಡು ಕೊನರುವದೆಂದು ಕೇಳಿದ್ದೇನೆ ನಾನು ಈ ಕೊರಡು ಸಮಾಜಕ್ಕೆ ಎಲೆ ಹೂಗಳಿಗಾಗಿ ಬಡಿದಾಡುತ್ತಿದ್ದೇನೆ ನಾನು ನನ್ನ ಕಾಲವನ್ನು ಶಬ್ದಗಳಲಿ ಹಿಡಿದಿಡಲು ಹೆಣಗಾಡುತ್ತಿದ್ದೇನೆ ನಾನು ಕಾಲದ ಶಬ್ದಾರ್ಥಗಳ ಸಹಕಾರ ಪಡೆಯಲು ಹೆಣಗಾಡುತ್ತಿದ್ದೇನೆ ನಾನು ಗಜಲ್‍ವೊಂದರ ಕೆಲ ಶೇರುಗಳನ್ನು ಓದುತ್ತಿದ್ದರೆ, ಡಾ. ಕಾಶಿನಾಥ ಅಂಬಲಗೆ ಅವರ ಕಾವ್ಯ ಶಕ್ತಿ ಮತ್ತು ಅನುವಾದದ ಮೇಲೆ ಎಂಥಾ ಪ್ರೌಢಿಮೆಗೆ ಈ ಸಾಲುಗಳು ಸಾಕ್ಷಿಯಾಗುತ್ತವೆ. ನನ್ನ ಪ್ರೀತಿಯ ಗಜಲ್ ಕವಿ, ಅಂಬಲಗೆ ಸರ್, ನಿಮ್ಮನ್ನು `ಅನುವಾದಕ’ ಅನ್ನಬೇಕೋ.. ಹಿಂದಿ ಸಾಹಿತ್ಯವನ್ನು ಅರಗಿಸಿಕೊಂಡ `ಕವಿ’ ಅನ್ನಬೇಕೋ.. ಪಂಜಾಬಿ ಕಾವ್ಯವನ್ನು ಓದಿಕೊಂಡ `ಸಾಹಿತಿ’ ಅನ್ನಬೇಕೋ.. ಕನ್ನಡದ ಮಹತ್ವದ ಕವಿಗಳಲ್ಲಿ ನೀವೂ ಒಬ್ಬರು ಅಂತನ್ನಬೇಕೋ.. ನಾಟಕಕಾರ ಅನ್ನಬೇಕೋ.. ಶರಣ ಚಿಂತಕ ಅನ್ನಬೇಕೋ.. ಲಲಿತಕಲೆಯನ್ನು ಪ್ರೀತಿಸುವವರು ಅಂತನ್ನಬೇಕೋ.. ಹೌದು ಸಾರ್, ನಿಮ್ಮನ್ನು ಏನೂಂತ ಕರೀಬೇಕೂ ಅನ್ನೋದೇ ಗೊತ್ತಾಗುತ್ತಿಲ್ಲ. ಗಜಲ್‍ಗಳನ್ನು ಹಿಂದಿಯಿಂದ ಕನ್ನಡಕ್ಕೆ.. ಕವಿತೆಗಳನ್ನು ಪಂಜಾಬಿಯಿಂದ ಕನ್ನಡಕ್ಕೆ -ನಾಟಕಗಳನ್ನು ಹಿಂದಿಯಿಂದ ಕನ್ನಡಕ್ಕೆ.. ಹೀಗೆ ಬೇರೆ ಬೇರೆ ಭಾಷೆಯಲ್ಲಿರುವ ಸಮೃದ್ಧ ಸಾಹಿತ್ಯವನ್ನು ಕನ್ನಡಕ್ಕೆ ತರುವುದರ ಮೂಲಕ ಕನ್ನಡ ...

ಅಂಬೇಡ್ಕರರನ್ನು ಅರಿಯುವುದೆಂದರೆ…

ಇಮೇಜ್
ಅರಕಲಗೂಡು ಜಯಕುಮಾರ್. ಪತ್ರಕರ್ತ ಅಂಬೇಡ್ಕರರನ್ನು ಅರಿಯುವುದೆಂದರೆ… ಭಾರತದ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ‘ಮೀಸಲಾತಿ’ ನಿಗದಿಯಾಗಿದ್ದು ಹಿಂದುಳಿದ ವರ್ಗದವರಿಗೆ, ಅದೂ ದಕ್ಷಿಣ ಭಾರತದಲ್ಲಿ ಶಾಹು ಮಹಾರಾಜ ಇಚ್ಛಾಶಕ್ತಿಯ ಫಲ. ನಂತರ ಮೈಸೂರು ಸಂಸ್ಥಾನದಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಡುವ ನಿರ್ದಾರ ಪ್ರಕಟವಾದಾಗ ಪ್ರಖರವಾಗಿ ವಿರೋಧ ವ್ಯಕ್ತಪಡಿಸಿದ ದಿವಾನ್ ವಿಶ್ವೇಶ್ವರಯ್ಯ ದಿವಾನ ಗಿರಿಗೆ ರಾಜೀನಾಮೆ ಒಗೆದು ಹೊರ ಬಿದ್ದರು. ಆದರೆ ಇವತ್ತಿಗೂ ಅರಿವುಗೇಡಿ ಮಂದಿ ಅವರ ಚಿತ್ರಗಳನ್ನಿಟ್ಟುಕೊಂಡು ದೇವರಂತೆ ಪೂಜಿಸುತ್ತಾರೆ ಎಂಬುದು ವಿಷಾದನೀಯ.  ಮುಂದೆ ಕಾಂಗ್ರೆಸ್ ಸರ್ಕಾರ ಬಂದಾಗ ಮುಖ್ಯಮಂತ್ರಿಗಳಾದ ದೇವರಾಜ ಅರಸು ಹಿಂದುಳಿದ ವರ್ಗದ ಹಿತಾಸಕ್ತಿ ರಕ್ಷಿಸಲು ಎಲ್ ಜಿ ಹಾವನೂರು ಸಮಿತಿಯನ್ನು ರಚಿಸಿದರು. ಹಾವನೂರು ವರದಿಯ ಫಲ ಇವತ್ತು ಉದ್ಯೋಗ ಮತ್ತು ಶಿಕ್ಷಣದಲ್ಲಿ ಹಿಂದುಳಿದ ವರ್ಗ ಮೀಸಲಾತಿಯನ್ನು ಅನುಭವಿಸುತ್ತಿದೆ. ಆದರೆ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ದಲಿತರಿಗಿಂತಲೂ ಹೆಚ್ಚು ಪ್ರಮಾಣದ ಮೀಸಲಾತಿಯನ್ನು ಹಿಂದುಳಿದ ವರ್ಗದವರಿಗೆ ನೀಡಲಾಗಿದೆ (ಶೇ. 27). ಆದರೆ ಗುಂಪುಗಾರಿಕೆ, ಸ್ವಾರ್ಥ ಹಿತಾಸಕ್ತಿ, ಅರಿವಿನ ಪ್ರಜ್ಞೆ, ಸಂಘಟನೆಯ ಕೊರತೆ ಇರುವುದರಿಂದ  ಈ ಮೀಸಲಾತಿಯ ಪೈಕಿ ಸುಮಾರು ಶೇ. 4ರಷ್ಟು ಪ್ರಮಾಣವನ್ನು ಮಾತ್ರ ಅನುಭವಿಸುತ್ತಿದ್ದಾರೆ. ಹಿಂದುಳಿದ ವರ್ಗದವರು ಸದಾ ಕಾಲಕ್ಕೂ ...

`ಗಿರಿ’ಸಾಲು ನಡುವೆ ಈ `ಹೊನ್ನ’ಕಲ್

ಇಮೇಜ್
ಮಹಿಪಾಲರೆಡ್ಡಿ ಮುನ್ನೂರ್  `ಗಿರಿ’ಸಾಲು ನಡುವೆ ಈ `ಹೊನ್ನ’ಕಲ್ ಒಂದಿಷ್ಟೂ ಸುಳ್ಳಲ್ಲ.. ಆತ ಅಕ್ಷರಶಃ ಅಭಿಜಾತ ಪ್ರತಿಭೆ. ಅದ್ಭುತ ಬರಹಗಾರ. ಆರೋಗ್ಯ ಇಲಾಖೆಯಲ್ಲಿ ನೌಕರಿಯೆಂಬೋ ನೌಕರಿಯನ್ನು ಹೊದ್ದುಕೊಂಡೇ , ಜತನದಿಂದ ಅದಕ್ಕೆ ಗಂಟುಬಿದ್ದು, ಇಲಾಖೆ ಕಳಿಸಿದ ಊರುಗಳಿಗೆ ಹೋಗಿ.. ತಿರುಗಾಡಿ.. ಸುಸ್ತಾಗಿ.. ಮನೆಯ ಮೂಲೆಯಲ್ಲಿ ನಿಂತು ಒಂದು ಕಪ್ಪು ಚಹಾ ಕುಡಿದು.. ಹಾಗೇ ಸುಮ್ಮನೆ ಕೂಡು ಎಂದು ಕೂಡಿಸಿದರೂ... ಅಲ್ಲಿಯೇ ಕುಂತಲ್ಲಿಯೇ ಒಂದು ಕವಿತೆಯನ್ನೋ.. ಚುಟುಕನ್ನೋ.. ಲಲಿತ ಪ್ರಬಂಧವನ್ನೋ.. ಇದೆಲ್ಲ ಹೊರತಾಗಿಯೂ ಯಾವುದೋ ರಾಜ್ಯದ ಗಡಿಯ ರೇಖೆಯನ್ನು ಮುಟ್ಟಿ ಬರುವ ನಿರ್ಧಾರವನ್ನೋ.. ಮಾಡು ಮಾಡುತ್ತಲೇ ಪುರುಸೊತ್ತಿಲ್ಲದೇ ಓದಲು.. ಬರೆಯಲು.. ಸವುಡಿಲ್ಲದೇ ತೊಡಗುವ ಈತ ಸಗರನಾಡಿನ ಸನ್ಮಿತ್ರ.  ಹಾಗೇ ನೋಡಿದರೆ. ಅವರೊಬ್ಬ ಆರೋಗ್ಯ ಇಲಾಖೆಯ ಶಿಕ್ಷಣ ನೀಡುವ ಕಾಯಕದಲ್ಲಿ ತೊಡಗಿರುವ ಪಕ್ಕಾ ನೌಕರಸ್ಥ. ಆದರೆ, ಸಾಹಿತ್ಯದಲ್ಲಿ ಏನು ಗೊತ್ತಿಲ್ಲ ಹೇಳಿ?  ಹೌದು, ಅವರು ಗಳಿಸಿರುವ ಜ್ಞಾನ ಮತ್ತು ಅದರ ವಿಸ್ತಾರ ಬಹು ದೊಡ್ಡದು. ಚುಟುಕು ಬರೆಯುತ್ತಲೇ ನಾಡಿನಲ್ಲಿ ಹೆಸರು ಮಾಡಿದ್ದಾರೆ.. ಲಲಿತ ಪ್ರಬಂಧ ಬರೆದು ಬರೆದು ಪ್ರಬಂಧಕಾರರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಕವಿತೆಗಳನ್ನು ರಚಿಸಿ ತಮ್ಮ ಪ್ರತಿಭೆಯ ವಿಸ್ತಾರದ ಹರಿವು ಹೆಚ್ಚಿಸಿಕೊಂಡಿದ್ದಾರೆ. ಅಷ್ಟೇ ಏಕೆ, ಹೊರ ರಾಜ್ಯಗಳಿಗೆ ಪ್ರವಾಸ ಹೋ...