ಡಾ.ಕಾಶಿನಾಥ ಅಂಬಲಗೆ ಚಿಪ್ಪಿನೊಳಗಿನ ಮುತ್ತು ಹೆಕ್ಕಿ ಪೋಣಿಸಿದ ಕವಿ

ಮಹಿಪಾಲರೆಡ್ಡಿ ಮುನ್ನೂರ್ ಡಾ.ಕಾಶಿನಾಥ ಅಂಬಲಗೆ ಚಿಪ್ಪಿನೊಳಗಿನ ಮುತ್ತು ಹೆಕ್ಕಿ ಪೋಣಿಸಿದ ಕವಿ ನೀನೊಲಿದರೆ ಕಾವ್ಯವೇ! ಕೊರಡು ಕೊನರುವದೆಂದು ಕೇಳಿದ್ದೇನೆ ನಾನು ಈ ಕೊರಡು ಸಮಾಜಕ್ಕೆ ಎಲೆ ಹೂಗಳಿಗಾಗಿ ಬಡಿದಾಡುತ್ತಿದ್ದೇನೆ ನಾನು ನನ್ನ ಕಾಲವನ್ನು ಶಬ್ದಗಳಲಿ ಹಿಡಿದಿಡಲು ಹೆಣಗಾಡುತ್ತಿದ್ದೇನೆ ನಾನು ಕಾಲದ ಶಬ್ದಾರ್ಥಗಳ ಸಹಕಾರ ಪಡೆಯಲು ಹೆಣಗಾಡುತ್ತಿದ್ದೇನೆ ನಾನು ಗಜಲ್‍ವೊಂದರ ಕೆಲ ಶೇರುಗಳನ್ನು ಓದುತ್ತಿದ್ದರೆ, ಡಾ. ಕಾಶಿನಾಥ ಅಂಬಲಗೆ ಅವರ ಕಾವ್ಯ ಶಕ್ತಿ ಮತ್ತು ಅನುವಾದದ ಮೇಲೆ ಎಂಥಾ ಪ್ರೌಢಿಮೆಗೆ ಈ ಸಾಲುಗಳು ಸಾಕ್ಷಿಯಾಗುತ್ತವೆ. ನನ್ನ ಪ್ರೀತಿಯ ಗಜಲ್ ಕವಿ, ಅಂಬಲಗೆ ಸರ್, ನಿಮ್ಮನ್ನು `ಅನುವಾದಕ’ ಅನ್ನಬೇಕೋ.. ಹಿಂದಿ ಸಾಹಿತ್ಯವನ್ನು ಅರಗಿಸಿಕೊಂಡ `ಕವಿ’ ಅನ್ನಬೇಕೋ.. ಪಂಜಾಬಿ ಕಾವ್ಯವನ್ನು ಓದಿಕೊಂಡ `ಸಾಹಿತಿ’ ಅನ್ನಬೇಕೋ.. ಕನ್ನಡದ ಮಹತ್ವದ ಕವಿಗಳಲ್ಲಿ ನೀವೂ ಒಬ್ಬರು ಅಂತನ್ನಬೇಕೋ.. ನಾಟಕಕಾರ ಅನ್ನಬೇಕೋ.. ಶರಣ ಚಿಂತಕ ಅನ್ನಬೇಕೋ.. ಲಲಿತಕಲೆಯನ್ನು ಪ್ರೀತಿಸುವವರು ಅಂತನ್ನಬೇಕೋ.. ಹೌದು ಸಾರ್, ನಿಮ್ಮನ್ನು ಏನೂಂತ ಕರೀಬೇಕೂ ಅನ್ನೋದೇ ಗೊತ್ತಾಗುತ್ತಿಲ್ಲ. ಗಜಲ್‍ಗಳನ್ನು ಹಿಂದಿಯಿಂದ ಕನ್ನಡಕ್ಕೆ.. ಕವಿತೆಗಳನ್ನು ಪಂಜಾಬಿಯಿಂದ ಕನ್ನಡಕ್ಕೆ -ನಾಟಕಗಳನ್ನು ಹಿಂದಿಯಿಂದ ಕನ್ನಡಕ್ಕೆ.. ಹೀಗೆ ಬೇರೆ ಬೇರೆ ಭಾಷೆಯಲ್ಲಿರುವ ಸಮೃದ್ಧ ಸಾಹಿತ್ಯವನ್ನು ಕನ್ನಡಕ್ಕೆ ತರುವುದರ ಮೂಲಕ ಕನ್ನಡ ...