ಹೇಮಳದು ಮೃದು ಮನಸ್ಸು..

ಪಾರವ್ವನ ಮಾತು ಕೇಳಿ ಮನೆಗೆ ಧಾವಿಸಿದ ಶಾಣಪ್ಪ ಒಂದೇ ಉಸಿರಿನಿಂದ ಹೇಮ,ಹೇಮ ಎಂದು ಕೂಗಲು ಶುರು ಮಾಡಿದ . ಒಳಗಿದ್ದ ಹೇಮ ಅಪ್ಪನ ಕೂಗಿಗೆ ಓಡಿ ಬಂದಳು . ಮಗಳ ಮುಖ ನೋಡಿದ ಶಾಣಪ್ಪ ಸುಮ್ಮನಾಗಿ ಕುಡಿಯಲು ನೀರು ಕೊಡು ಮಗಳೆ ಎಂದನು . ಅವರಿವರ ಮಾತು ಕೇಳಿ ತನ್ನ ಮಗಳ ಮೇಲೇಕೆ ಸಂಶಯ ಪಡಬೇಕೆಂದು ಶಾಣಪ್ಪ ಮನಸ್ಸಿನಲ್ಲಿ ಅಂದುಕೊಂಡು ಹೇಮಳನ್ನು ಏನೂ ಕೇಳದೆ . ಸಂತೆ ಕಡೆ ಹಿಂದಿರುಗಿದ . ಪಾರವ್ವನ ಮಾತು ಅಚಲವಾಗಿ ಮನಸ್ಸಲ್ಲಿ ಉಳಿದಿದ್ದರು . ಅದನ್ನು ಸಂಶಯಾಸ್ಪದವಾಗಿ ನೋಡದೆ ಸುಮನಿದ್ದ ಶಾಣಪ್ಪನಿಗೆ ಪಾರವ್ವ ಮತ್ತು ಅವಳ ತಮ್ಮ ಮೇಲಿಂದ ಮೇಲೆ ಕಿರಿ ಕಿರಿ ನೀಡುತ್ತಾ ಹೋದರು . ಪಾರವ್ವನ ತಮ್ಮ ಮಲ್ಲೇಶನಿಗೆ ಹೇಮಳ ಮೇಲೆ ಈ ನಡುವೆ ಮನಸ್ಸಾಗಿತ್ತು . ಮಲ್ಲೇಶ ಕಾಲೇಜು ದಿನಗಳಲ್ಲೇ ಮೂರ್ ನಾಲ್ಕು ಹೆಣ್ಣುಮಕ್ಕಳ ಬಾಳಲ್ಲಿ ಉಳಿಹಿಂಡಿದ್ದಾನೆ ಎನ್ನುವ ಗೂಡು ಮಾತು ಅದಾಗಲೇ ಊರಲ್ಲಿ ಹಬ್ಬಿತ್ತು ಅಷ್ಟೇ ಏಕೆ ಹೇಮಳಿಗು ಅವನ ಉಳಿ ಮನಸ್ಸು ತಿಳಿದಿತ್ತು . ಪಾರವ್ವ ಹೇಗಾದರು ಮಾಡಿ ಅವಳನ್ನು ನನ್ನ ತಮ್ಮನ ಬಾಹು ಬಂಧನಕ್ಕೆ ಸಿಲಿಕಿಸಬೇಕೆಂದು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಳು . ಹೇಮಳದು ಶುದ್ಧ ಮನಸ್ಸು . ಪಕ್ವತೆಯ ಗುಣ , ಅಚಲ ಧೈ ರ್ಯ . ಕಾಸಿಂನ ವಿಷಯದಲ್ಲಿ ಹೇಮ ಮೃದು ಸ್ವಭಾವದ...