ಅಜರಾಮರರು ತೇಜಸ್ವಿ

ವಿಜಯಭಾಸ್ಕರ ಸಹಜವಾಗಿ ಇದ್ದ ನಮಗೆ, ಜನರಲ್ಲಿ ಅನೇಕಾ ಅನೇಕಾ ಸಂಗತಿಗಳನ್ನು ಹುಡುಕಲು ಪ್ರಚೋಧಿಸಿದ ಹಾಗೂ ಸಾಮಾನ್ಯರಲ್ಲಿ ಅಸಾಮಾನ್ಯ ಕಥೆಗಳನ್ನು ಹೆಕ್ಕಲು ತಿಳಿಸಿಕೊಟ್ಟ ಕನ್ನಡದ ಭಿನ್ನ ಲೇಖಕರಾದ ತೇಜಸ್ವಿ ಅವರು ಆವರಿಸಿದ್ದು ಯುಟೂಬ್ ಮೂಖ್ಯಾಂತರ, ನಾನು ನನ್ನ ಪಿಯುಸಿಯ ರಂಪಾಟಗಳಿಗೆ ಅನುಗುಣವಾಗಿ ನನ್ನ ಕಾಲೇಜಿನ ಪ್ರಾಂಶುಪಾಲರಿಗೆ ಧಮ್ಕಿ ಹಾಕುವ ಹೊತ್ತಿಗಾಗಲೇ ತೇಜಸ್ವಿ ಅವರ ಗದ್ಯ ಪಾಠ ನಮ್ಮನ್ನು ಆವರಿಸಿ ಅಮಲಾಗಿ ಪರಿವರ್ತನೆಯಾಯಿತು. ದ್ವಿತೀಯ ಪಿಯುಸಿನಲ್ಲಿ ಕೃಷ್ಣೆಗೌಡರ ಆನೆ ಎನ್ನುವ ಗದ್ಯ ಆಗಲೇ ನಮ್ಮ ರಂಪಾಟಕ್ಕೆ ಅಣಿಯಾಗಿ ಓದಿಸಲು ತೊಡಗಿಸಿತು. ಯಾರಿವರು ತೇಜಸ್ವಿ ಎಂದು ಹುಟ್ಟಿದ ಯಕ್ಷ ಪ್ರಶ್ನೆಗೆ ಉತ್ತರ ಹುಡುಕಲು ಶುರು ಮಾಡಿದೆ. ಲೇಖಕರ ಪರಿಚಯದಲ್ಲಿ ಸಿಕ್ಕ ಮಾಹಿತಿ ನನ್ನ ಹಪಹಪಿತನವನ್ನ ನೀಗಿಸಲಿಲ್ಲ. ಗೂಗಲ್ ನಲ್ಲಿ ವಿಕಿಪೀಡಿಯಾದ ಸಾಲು ಮಾಹಿತಿ ಗ್ರಹಿಕೆಗು ನೀಲುಕಲಿಲ್ಲ. ಇದಕ್ಕೆ ಮಾರ್ಗ ಎಂದರೆ ಯುಟೂಬ್ ಒಂದೇ ಏಕಮಾತ್ರ ಮಿತ್ರ ಎಂದು ಪೂರ್ಣಚಂದ್ರ ತೇಜಸ್ವಿ ಎಂದು ಹುಡುಕಿದೆ. ಕಣ್ಣೆದುರು ಬಂದ ಸಾಲು ಸಾಲು ಸಾಕ್ಷ್ಯಚಿತ್ರಗಳಲ್ಲಿ ಪೂರ್ಣ ಹೆಸರಿನ ಪೂರ್ಣಚಂದ್ರ ತೇಜಸ್ವಿ ಎನ್ನುವ ಚಿತ್ರ ಕ್ಲಿಕ್ಕಿಸಿದೆ ಶುರವಾದದ್ದೆ ಮೊದಲಿಗೆ ಕೊಳಲಿನ ಆ ಶಬ್ದ ಮೂಖ ಚಿತ್ತನಾಗಿಸಿತು ಕಣ್ಣಾಲಿಯ ನಡುವೆ ತೇಜಸ್ವಿ ಗಟ್ಟಿಯಾಗಿ ಕೂತರು ಅಲ್ಲಿ ಬರುವ ಹಿನ್ನೆಲೆ ಧ್ವನಿ ತೇಜಸ್ವಿ ಅವರನ್ನು ನಮಗೆ ಕಟ್ಟಿಕ...