ಕೆಂಪು ಬಸ್ಸಿನ ಹುಡುಗಿ ಮತ್ತು ಸತೀಶ

ಹಿಂದಿನ ರಾತ್ರಿ ಬರೆಯಲೆಂದು ತೆಗೆದಿಟ್ಟಿದ್ದ ನಾಲ್ಕಾರು ಹಾಳೆ ಬಣಗುಡುತ್ತಾ ಹಾಸಿಗೆ ಬುಡದಲ್ಲಿ ಬಿದ್ದಿದ್ದವು. ಒಪ್ಪಿದ ಕವಿತೆಗಳು ಜ್ಞಾಪಕಕ್ಕೆ ಬಾರದೆ ಕಾಡುತ್ತಾ ನನ್ನ ಎದೆ ಆಳದಲ್ಲಿ ಅಡಗಿ ಏಗ್ಗಿಲ್ಲದೆ ಚುಚ್ಚುವ ಪರಿ ಸಹಿಸಲಾಗದೆ ಕೊನೆರಾತ್ರಿ ಅನಿಸುತ್ತಲೆ ಒತ್ತುವ ಕಣ್ಣಿಗೆ ಖೊ ಕೊಡತ್ತಾ ಬರೆಯಲೆತ್ನಿಸಿದೆ. ಕನಸಿನ ಸರಿ ಸಮವಾಗಿ ಕಾಡುವ ಹುಡುಗಿ ಕವಿತೆಗಳಲ್ಲಿ ಇಳಿಯಲು ಯತ್ನಿಸಿದಳು ಮುತ್ತಿನ ಘಮಲು ಅಂಟಿಸಲು,ಎದೆ ಸೀಳುವ ನೋಟ ಬೀರಲು ತುಟ್ಟಿಕಚ್ಚಿ ತೊಂಟವಾಗಿ ನೋಡುವ ಹುಡುಗಿ ಕವಿತೆ ಬರೆಯುವಾಗ ಮುನ್ನುಡಿ,ಅವಳೇ ಆರಂಭಕ್ಷರ. ಮೌನವೂ ಒಂದು ಭಾಷೆ. ಹಾಗೇನಿಸಿದ್ದು ತೀರ ಇತ್ತಿಚಿಗೆ ನನ್ನನ್ನು ನಾ! ಅರಿಯಲು ಏಲ್ಲೊ ಒಂಟಿಗನಾಗಿದ್ದೇನೆ ಅನಿಸುತ್ತಲ್ಲಿದೆ. ನಡೆದು ಕರಾಳ ಇತಿಹಾಸವಾದ ಒಂದು ಕಹಿ ನೆನಪನ್ನು ಒಲ್ಲದ ಮನಸ್ಸಿನಿಂದ ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ. ಕೆಂಪು ಬಸ್ಸಿನಿಂದಿಳಿದು ಬರುತ್ತಿದ್ದ ಹುಡುಗಿಯ ನೋಡಲೆಂದು ಬಿಡಾರ ಹುಡಿದ್ದ ಕೆಲ ಪುಂಡ ಹುಡುಗರು ಅಂತೆನಿಲ್ಲ ಉಗ್ರ ಪ್ರೇಮಿಗಳಂತೆ ಪೋಸು ಕೊಡುವ ಕಾಲೇಜು ವಿದ್ಯಾರ್ಥಿಗಳು ಬಸ್-ನಿಲ್ದಾಣದ ಖಾಯಂ ಪ್ರೇಕ್ಷಕರಾಗಿದ್ದರು. ಗಿರಿಗಲ್ಲಿಯ ಪ್ರತಿ ಜನರಲ್ಲೂ ಅಸಮಾನತೆ ಕಾಣುವ ಶಾಮ್ ಭಟ್ಟರು ಬರುತ್ತಾರೆಂದು ಆ ಗಿರಿಗಲ್ಲಿ ಜನ ನೆಲಸಾರಸಿ, ಗುಡಸಿ,ಬಾಗಿಲು ಚಿಲ್ಕಾ ಹಾಕಿ ಬಡಪಾಯಿ ಜನ ಅಸ್ವಾತಂತ್ರ್ಯದ ತರ ಮುಸುಕು ಹ...